ದಾವಣಗೆರೆ –
ಸೊಸೆ ಯೊಬ್ಬಳು ಸುಪಾರಿ ಕೊಟ್ಟು ಸ್ವಂತ ಮಾವ ನನ್ನೇ ಕೊಲೆ ಮಾಡಿಸಿದ ಘಟನೆ ದಾವಣಗೆರೆ ಯಲ್ಲಿ ನಡೆದಿದೆ. ಹೌದು ಹೀಗೆ ಕೊಲೆ ಮಾಡಿಸಿದ ನಂತರ ಸೊಸೆಯೊಬ್ಬಳು ಈಗ ತನ್ನ ಸಹಚರರೊಂದಿಗೆ ಸೇರಿಕೊಂಡು ಜೈಲು ಪಾಲಾಗಿದ್ದಾಳೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಶ್ರೀನಿವಾಸಪುರ ಗ್ರಾಮದ ವನಜಾಕ್ಷಿ (45) ಬಂಧಿತ ಮಹಿಳೆಯಾಗಿದ್ದಾಳೆ. ಆಕೆಯಿಂದ ಸುಪಾರಿ ಪಡೆದು ಕೊಲೆ ಮಾಡಿದ್ದ ಹನುಮಂತಪ್ಪ ಮತ್ತು ನಾಗರಾಜ್ ಅಲಿಯಾಸ್ ರಜ ನಿ ಎಂಬುವವರನ್ನು ಕೂಡ ಪೊಲೀಸರು ಬಂಧಿ ಸಿದ್ದಾರೆ.

ಚಿಕ್ಕ್ಯಾನಾಯ್ಕ (85) ಸುಪಾರಿಗೆ ಬಲಿಯಾದ ನಿವೃತ್ತ ಶಿಕ್ಷಕನಾಗಿದ್ದಾರೆ. ಈತನ ಕೊಲೆ ಮಾಡಲು ಹನು ಮಂತಪ್ಪ ಮತ್ತು ನಾಗರಾಜ್‌ಗೆ ವನಜಾಕ್ಷಿ 6 ಲಕ್ಷ ರೂ.ಸುಪಾರಿ ನೀಡಿದ್ದಳು. ಕೊಲೆಯಾದ ವೃದ್ಧ ನ ಮೊದಲನೇ ಮಗನ ಹೆಂಡತಿಯೇ ವನಜಾಕ್ಷಿ. ಆರಂ ಭದಲ್ಲಿ ಇದು ಅಸಹಜ ಸಾವು ಎಂದು ಪ್ರಕರಣ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಯ ರಹಸ್ಯ ಬಯಲಾಗಿದೆ

ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ನಂತರ ಹೆಂಡತಿ ಮಕ್ಕಳು, ಸೊಸೆಯಂದಿರ ಜತೆ ವಾಸವಾಗಿದ್ದರು. ಚಿಕ್ಕ್ಯಾನಾಯ್ಕನ ಹೆಸರಲ್ಲಿ 10 ಎಕರೆ ಜಮೀನಿತ್ತು. ಹಿರಿಯ ಮಗ ಮನೋಹರ್‌ಗೆ ಮನೆ ನಿರ್ಮಿಸಿ ಕೊಡುತ್ತಿದ್ದರು. ಕಿರಿಯ ಮಗ ಸುರೇಶನಿಗೂ ಮನೆ ಕಟ್ಟಿಸಿ ಕೊಡುವ ಯೋಚನೆ ಇತ್ತು. ಇದನ್ನು ಸಹಿಸಿ ಕೊಳ್ಳದ ಹಿರಿಯ ಮಗನ ಹೆಂಡತಿ ವನಜಾಕ್ಷಿ ಕೊಲೆ ಗೆ ಸ್ಕೆಚ್ ಹಾಕಿದ್ದಳು.

ವನಜಾಕ್ಷಿಗೆ ಮೇಸ್ತ್ರಿ ಹನುಮಂತಪ್ಪನ ಜತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಹನುಮಂತಪ್ಪನ ಸಹಾಯದಿಂದ ನಾಗರಾಜನಿಗೆ ಸುಪಾರಿ ನೀಡಿದ್ದ ಳು. ಕೊಲೆಗೂ ಮುನ್ನ ನಾಗರಾಜನಿಗೆ ರೂ. 1 ಲಕ್ಷ ಅಡ್ವಾನ್ಸ್ ಕೂಡ ಕೊಟ್ಟಿದ್ದಳು. ಅವರಿಬ್ಬರೂ ಸೇರಿ ತೆಳುವಾದ ಸೀರೆಯನ್ನು ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದರು. ನಂತರ ಸಾಕ್ಷ್ಯ ನಾಶಪಡಿಸಿ, ಸಹಜ ಸಾವು ಎಂಬಂತೆ ಬಿಂಬಿಸಿದ್ದರು ಎನ್ನಲಾಗಿದೆ. ಮರ ಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆಯನ್ನು ಬಲವಾಗಿ ಹಿಸುಕಿರುವ ಗುರುತು ಕಂಡುಬಂದಿದ್ದರಿಂದ ತೀವ್ರ ವಿಚಾರಣೆ ನಡೆಸಲಾಯಿತು. ಆಗ ಮೂವರೂ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿ ದ್ದಾರೆ.ಮೂವರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸ ಲಾಗಿದೆ