ಚಲಿಸುವ ಬೈಕ್ ಮೇಲೆಯೆ ಕಿಸ್ ರೋಮ್ಯಾನ್ಸ್ – ಪ್ರೇಮಿಗಳಿಬ್ಬರ ಹುಚ್ಚಾಟದ ವಿಡಿಯೋ ಪೊಟೊ ವೈರಲ್ ಯುವಕ ಬಂಧನ…..

Suddi Sante Desk

ಚಾಮರಾಜನಗರ –

ಪ್ರೀತಿಯ ವಿಚಾರದಲ್ಲಿ ಕೆಲವೊಂದು ದೃಶ್ಯಗಳನ್ನು ಇಷ್ಟು ದಿನ ಸಿನಿಮಾಗಳಲ್ಲಿ ಮಾತ್ರ ನೋಡುತ್ತಿದ್ದೆವು ಆದರೆ ಇತ್ತೀಚಿಗೆ ಇವುಗಳು ನಿಜವಾಗಿಯೂ ಕಂಡು ಬರುತ್ತಿವೆ ಎನ್ನೊದಕ್ಕೆ ಇಲ್ಲೊಬ್ಬ ಬೈಕ್ ಮೇಲೆ ಪ್ರೇಯಸಿಯನ್ನು ಕೂರಿಸಿಕೊಂಡು ರೊಮ್ಯಾನ್ಸ್ ಮಾಡುವ ಚಿತ್ರಣ ಸಾಕ್ಷಿ. ಹೌದು ಸಿನಿಮಾಗಳಲ್ಲಿ ಮಾತ್ರ ಕಾಣ ಸಿಗುತ್ತಿದ್ದ ಇಂತಹ ಚಿತ್ರಣಗಳು ಈಗ ನಿಜವಾಗಿಯೂ ಇಂದು ಕಂಡು ಬರು ತ್ತಿವೆ.ಆದರೆ ಇಂದಿನ ಕೆಲ ಯುವಕ-ಯುವತಿಯರು ಅದನ್ನು ನಿಜ ಜೀವನದಲ್ಲೂ ಅನುಸರಿಸುತ್ತಿರುವುದಕ್ಕೆ ಈ ಒಂದು ವಿಡಿಯೋ ತಾಜಾ ನಿದರ್ಶನವಾಗಿದೆ.

ಹೌದು ಪ್ರೇಮಿಗಳಿಬ್ಬರ ಲವ್ವಿ-ಡವ್ವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿ‌ಯನ್ನು ಕೂರಿಸಿಕೊಂಡು ಬಾಯ್ ಫ್ರೆಂಡ್ ಜಾಲಿ ರೈಡ್ ಜೊತೆಗೆ ರೊಮ್ಯಾನ್ಸ್ ಮಾಡಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಸಾರ್ವಜನಿಕ ಪ್ರದೇಶ ಎಂಬ ಅರಿವು ಇಲ್ಲದೇ ಬೈಕ್ ಮೇಲೆಯೇ ಪರಸ್ಪರ ಚುಂಬಿಸುವ ಮೂಲಕ ಅಶಿಸ್ತನ್ನು ಮೆರೆದಿದ್ದಾರೆ.

ಕೆಲವೊಂದಕ್ಕೆ ಗೌಪ್ಯತೆ ಎಂಬುದು ಇರುತ್ತದೆ.ಅದನ್ನು ಸಾರ್ವಜನಿಕರ ಎದುರಲ್ಲೇ ಆ ಚೌಕಟ್ಟು ಮೀರುವುದು ಉದ್ಧಟತನದ ಪರಮಾವಧಿಯೇ ಸರಿ.ಜನರು ಹಾಗೂ ವಾಹನಗಳ ಸಂಚಾರವಿದ್ದರೂ ಡೋಂಟ್ ಕೇರ್ ಎನ್ನದ ಪ್ರೇಮಿಗಳಿಬ್ಬರು ಹಾಡ ಹಗಲಿನಲ್ಲೇ ಬೈಕ್ ಮೇಲೆ ಚೆಲ್ಲಾಟ ವಾಡಿದ್ದಾರೆ.ಚಲಿಸುವ ಬೈಕ್ ಮೇಲೆಯೇ ಪರಸ್ಪರ ಲಿಪ್ಲಾಕ್ ಮಾಡುವ ಮೂಲಕ ರೊಮ್ಯಾನ್ಸ್ ಮಾಡಿದ್ದಾರೆ. ಈ ದೃಶ್ಯ ವನ್ನು ಹಿಂಬದಿಯ ಸವಾರರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.ಪ್ರೇಮಿಗಳ ಈ ಹುಚ್ಚಾಟವನ್ನು ನೋಡಿದ ದಾರಿಹೋಕರು ಮನಸ್ಸಿನಲ್ಲೇ ಬೈದುಕೊಂಡು ತಮ್ಮ ಪಾಡಿಗೆ ಮುಂದೆ ಸಾಗಿದ್ದಾರೆ.ಜನರನ್ನೂ ಲೆಕ್ಕಿಸದೇ ಕಿಲೋ ಮೀಟರ್ ಗಟ್ಟಲೆ ಈ ಪ್ರೇಮಿಗಳು ಬೈಕ್ ಮೇಲೆ ಚೆಲ್ಲಾಟ ವಾಡಿದ್ದು ಟ್ಯಾಂಕ್ ಮೇಲೆ ಕುಳಿತಿರುವ ಯುವತಿ, ಪ್ರಿಯಕ ರನನ್ನು ಬಿಗಿದಪ್ಪಿಕೊಂಡು ಸಾಗುತ್ತಿರುವ ದೃಶ್ಯ ವಿಡಿಯೋ ದಲ್ಲಿದೆ. ಪ್ರೇಮಿಗಳ ಈ ಹುಚ್ಚಾಟದ ವಿಡಿಯೋ ಸಾಮಾ ಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದು ಇನ್ನೂ ಈ ಒಂದು ವಿಚಾರ ಕುರಿತು ಸಾರ್ವ ಜನಿಕರ ಆಕ್ರೋಶದ ಬೆನ್ನಲ್ಲೇ ಪಾಗಲ್ ಯುವಕನನ್ನು ಪೊಲೀಸರು ಬಂಧನ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.