ಬೆಂಗಳೂರು –
ಶಾಲೆಗಳಿಗೆ ಎಷ್ಟು ದಿನ ರಜೆ ಗೊತ್ತಾ – ರಜೆಯ ವೇಳಾಪಟ್ಟಿಯೊಂದಿಗೆ ಹೊಸ ಶೈಕ್ಷಣಿಕ ಬಿಡುಗಡೆ ಮಾಡಿದ ಇಲಾಖೆಯ ಕಂಪ್ಲೀಟ್ ಮಾಹಿತ
ರಾಜ್ಯದ ಶಾಲೆಗಳಿಗೆ ರಜೆಯನ್ನು ಶಿಕ್ಷಣ ಇಲಾಖೆ ಘೋಷಣೆ ಮಾಡಿದ್ದು ಇನ್ನೂ ಇದರೊಂದಿಗೆ ಶಾಲಾ ಶಿಕ್ಷಣ ಇಲಾಖೆಯು 2023-24ನೇ ಶೈಕ್ಷಣಿಕ ಸಾಲಿನ ಶಾಲಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಮೇ 29 ರಿಂದ ತರಗತಿಗಳು ಆರಂಭ ವಾಗಲಿವೆ.
ಇನ್ನೂ ರಾಜ್ಯ ಪಠ್ಯಕ್ರಮದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಮಾರ್ಗ ಸೂಚಿ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ರಾಜ್ಯಾದ್ಯಂತ 2023-24ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುತ್ತಿದ್ದು ಏಕರೂ ಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಮಾರ್ಗ ಸೂಚಿ ಸಿದ್ಧಪಡಿಸಲಾಗಿದೆ.ಈ ಮಾರ್ಗಸೂಚಿ ಯಲ್ಲಿ ವಾರ್ಷಿಕ ಮಾಹೆವಾರು ಪಾಠ ಹಂಚಿಕೆ ಪಠ್ಯೇತರ ಚಟುವಟಿಕೆಗಳು ಪರೀಕ್ಷೆ ಮತ್ತು ಮೌಲ್ಯಾಂಕನ ವಿಶ್ಲೇಷಣೆ ಗುಣಮಟ್ಟದ ಶಿಕ್ಷಣ ಕ್ಕಾಗಿ ಫಲಿತಾಂಶಮುಖಿ ಚಟುವಟಿಕೆಗಳ ನಿರ್ವಹಣೆ ಹಾಗೂ ವಿವಿಧ ಶಾಲಾ ಹಂತದ ಸಿಸಿಇ ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯ ಆಗುವಂತೆ ಶೈಕ್ಷಣಿಕ ಅವಧಿಗಳು ರಜಾದಿನಗ ಳನ್ನು ಯೋಜಿಸಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
2023ರ ಮೇ 29ರಿಂದ ಅಕ್ಟೋಬರ್ 7
ಅ.25ರಿಂದ 2024ರ ಏ.10ರವರೆಗೆ
ಮಧ್ಯಂತರ ರಜೆ 2023ರ ಅಕ್ಟೋಬರ್ 8ರಿಂದ 24.ಬೇಸಿಗೆ ರಜೆ 2024ರ ಏ.11ರಿಂದ ಮೆ28ರ ವರೆಗೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..