ಬೆಂಗಳೂರು –
ನೆನೆಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ ಈಗಾಗಲೇ ಈ ಒಂದು ವಿಚಾರ ಕುರಿತು ಚುನಾವಣಾ ಆಯೋಗಕ್ಕೆ ಅನುಮತಿ ಕೋರಿ ಪತ್ರವನ್ನು ಬರೆಯಲಾಗಿದೆ.ಆಯೋಗವು ಕೂಡಾ ಒಪ್ಪಿಗೆಯನ್ನು ನೀಡಲಿದ್ದು ಕಡತವು ಚುನಾವಣಾ ಆಯೋಗದ ಅಂಗಳದಲ್ಲಿ ಇದೆ
ಇದು ಒಂದು ವಿಚಾರವಾದರೆ ಇನ್ನೂ ಈ ಒಂದು ವರ್ಗಾವಣೆಗೆ 88,324 ಶಿಕ್ಷಕರು ಅರ್ಜಿಯನ್ನು ಸಲ್ಲಿಸಿದ್ದಾರೆ.ಸಧ್ಯ ಈ ಒಂದು ವರ್ಗಾವಣೆ ಗೆ
ನೀತಿ ಸಂಹಿತೆ ಅಡ್ಡಿಯಾಗಿದ್ದು ಆಯೋಗವು ಅನುಮತಿ ನೀಡಲಿದೆ ಇನ್ನೂ ಇದು ಜಾರಿಗೆ ಬಂದರೂ ಹೆಚ್ಚುವರಿ ಮತ್ತು ಸಾಮಾನ್ಯ ಶಿಕ್ಷಕರ ವರ್ಗಾವಣೆಯನ್ನು ನಡೆಸಲು ಅನುಮತಿ ನೀಡಬೇಕು.
ಈಗಾಗಲೇ ವರ್ಗಾವಣೆ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿದ್ದರೂ ತಾಂತ್ರಿಕ ಕಾರಣದಿಂದ ಪ್ರಕ್ರಿಯೆಗೆ ತಡೆ ನೀಡಲಾಗಿತ್ತು.88,324 ಶಿಕ್ಷಕರು ವರ್ಗಾವಣೆಗೆ ಅರ್ಜಿ ಹಾಕಿದ್ದಾರೆ.ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಮತ್ತು ಸಾಮಾನ್ಯ ವರ್ಗಾ ವಣೆ ಪ್ರಕ್ರಿಯೆಯನ್ನು ಮುಂದುವರಿಸಲು ಸಕ್ಷಮ ಪ್ರಾಧಿಕಾರ ಸಹ ಅನುಮತಿ ನೀಡಿದೆ ಎಂದು ಶಾಲಾ ಶಿಕ್ಷಣ ಇಲಾಖೆಯು ಆಯೋಗಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದೆ.
ಹಾಗೆಯೇ ಚುನಾವಣೆ ಪ್ರಕ್ರಿಯೆಗೆ ಅಡ್ಡಿ ಆಗಬಾರದು ಎಂದು ವರ್ಗಾವಣೆಗೊಂಡ ಶಿಕ್ಷಕರಿಗೆ ಜೂನ್ 1ರ ಬಳಿಕ ನಂತರ ನಿಯುಕ್ತಿ ಗೊಂಡ ಸ್ಥಳಕ್ಕೆ ಹಾಜರಾಗುವ ಷರತ್ತು ವಿಧಿಸು ತ್ತೇವೆ ಎಂಬ ಭರವಸೆಯನ್ನು ಶಾಲಾ ಶಿಕ್ಷಣ ಇಲಾಖೆ ಆಯೋಗಕ್ಕೆ ನೀಡಿದೆ.
ರಾಜ್ಯ ಸರಕಾರ 2022ರ ಡಿಸೆಂಬರ್‌ನಲ್ಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಮಾರ್ಚ್‌ನೊಳಗೆ ವರ್ಗಾವಣೆ ಪಕ್ರಿಯೆ ಮುಕ್ತಾಯಗೊಳಿಸುವಂತೆ ವೇಳಾಪಟ್ಟಿ ಪ್ರಕಟಿ ಸಿತ್ತು.ಆದರೆ ಆ ಬಳಿಕ ಎರಡು ಬಾರಿ ಈ ಪ್ರಕ್ರಿಯೆ ಕಾರಣಾಂತರಗಳಿಂದ ಮುಂದೂಡಿಕೆ ಆಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..