ಬೆಂಗಳೂರು –
7ನೇ ವೇತನ ಆಯೋಗ ಜಾರಿಗೆ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಸೇರಿದಂತೆ ಕೆಲವೊಂ ದಿಷ್ಟು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್ 1 ರಂದು ರಾಜ್ಯದ ಸರ್ಕಾರಿ ನೌಕರರ ಸಂಘಟನೆ ಕರೆ ನೀಡಿರುವ ಹೋರಾಟಕ್ಕೆ ರಾಜ್ಯದಲ್ಲಿ ಒಂದು ಕಡೆ ಕಾವು ಜೋರಾ ಗುತ್ತಿದೆ.
ಇನ್ನೂ ಈ ಒಂದು ವಿಚಾರ ಕುರಿತಂತೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸದನದಲ್ಲಿ ಮಾತನಾಡಿ ಮಾರ್ಚ್ ತಿಂಗಳು 7ನೇ ವೇತನ ಆಯೋಗದ ಸಮಿತಿಯಿಂದ ಮಧ್ಯಂತರ ವರದಿ ಯನ್ನು ಪಡೆದು 7ನೇ ವೇತನ ಆಯೋಗ ಜಾರಿಗೆ ಕುರಿತಂತೆ ಶಿಫಾರಸು ಮಾಡಿ ಜಾರಿ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದರು.
ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ.ವೇತನ ಆಯೋಗದ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ.ಈ ಕುರಿತು ನೌಕರರ ಸಂಘದ ಪದಾಧಿಕಾರಿಗಳಿಗೆ ತಿಳಿಸಿದ್ದೇನೆ. ಮಾರ್ಚ್ ಒಳಗೆ ಮಧ್ಯಂತರ ವರದಿ ಕೊಡಲು ಸೂಚಿಸುತ್ತೇನೆ.ಮಧ್ಯಂತರ ವರದಿ ಬಂದ ಬಳಿಕ ಮಾರ್ಚ್ ಒಳಗೆ ಸೂಕ್ತ ಕ್ರಮ ಕೈಗೊಳ್ಳಲಾಗು ವುದು.
ಮಧ್ಯಂತರ ವರದಿಯ ಶಿಫಾರಸು ಜಾರಿಗೆ ಸರ್ಕಾರ ಬದ್ಧವಾಗಿದ್ದು ಅದು ನಮ್ಮ ಜವಾಬ್ದಾರಿ ಯಾಗಿದೆ ಎಂದರು..ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ 7ನೇ ವೇತನ ಆಯೋಗ ಈಗಾಗಲೇ ರಚನೆ ಮಾಡಲಾಗಿದೆ. ವೇತನ ಆಯೋಗದಿಂದ ಮಾರ್ಚ್ ಒಳಗೆ ಮಧ್ಯಂತರ ವರದಿ ಪಡೆದು ವರದಿಯ ಶಿಫಾರಸು ಜಾರಿಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಇನ್ನೂ ಕುರಿತಂತೆ ಸ್ಪಷ್ಟವಾಗಿ ಮುಖ್ಯಮಂತ್ರಿ ಯವರು ಮಾತುಗಳು ಭರವಸೆಯಷ್ಟೇಯಾ ಗಿದ್ದು ಕಂಡು ಬಂದಿತು.
ಈಗಾಗಲೇ ರಾಜ್ಯದ ಸರ್ಕಾರಿ ನೌಕರರ ಸಂಘ ಹೋರಾಟಕ್ಕೆ ಕರೆ ನೀಡಿದ್ದು ಈ ಒಂದು ವಿಚಾರ ಕುರಿತಂತೆ ಮುಖ್ಯಮಂತ್ರಿ ಯವರು ಸಂಘಟನೆ ಯ ನಾಯಕರಿಗೆ ಯಾವುದೇ ರೀತಿಯಲ್ಲೂ ಸ್ಪಷ್ಟವಾದ ಸಂದೇಶವನ್ನು ನೀಡಲಿಲ್ಲ.ಹೀಗಾಗಿ ಇವರ ಮಾತುಗಳು ಗೊಂದಲವಾಗಿದ್ದು ಕಂಡು ಬಂದಿದ್ದು ಇತ್ತ ನೌಕರರು ರಾಜ್ಯದಲ್ಲಿ ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು….