ಹೌದು ಸೇವೆಗೆ ಸೇರಿದಾಗಿನಿಂದ ವರ್ಗಾವಣೆ ಸಿಗದೇ ಹೆಂಡತಿ ಮಕ್ಕಳು ಬಂಧು ಬಳಗ ಕುಟುಂಬ,ಊರು ಹೀಗೆ ಎಲ್ಲವನ್ನೂ ಮರೆತು ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕ ವಾದ ವರ್ಗಾವಣೆಯ ನೀತಿಯಿಂದಾಗಿ ಆತಂಕದಲ್ಲಿದ್ದ ನಾಡಿನ ಶಿಕ್ಷಕರಿಗೆ ಕೊನೆಗೂ ಇಂದಿನ ವಿಧಾನ ಸಭೆಯ ಸದನವು ಗುಡ್ ನ್ಯೂಸ್ ನೀಡಿದ್ದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಶಿಕ್ಷಕರ ವರ್ಗಾವಣೆ ವಿಧೇಯಕವನ್ನು ಮಂಡನೆ ಮಾಡಿದ್ದಾರೆ ಸದನದಲ್ಲಿ ಈ ಒಂದು ವಿಧೇಯಕಕ್ಕೆ ಅನುಮೋದನೆ ಸಿಕ್ಕಿದ್ದು ಇನ್ನೂ ನೂತನ ಈ ಒಂದು ವರ್ಗಾವಣೆಯ ಬಿಲ್ ನಿಂದಾಗಿ ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಅನುಕೂಲವಾಗುತ್ತಾ ಯಾರಿಗೆ ಎಷ್ಟು ಅನುಕೂಲವಾಗಲಿದೆ ಈ ಎಲ್ಲಾ ವಿಚಾರ ಕುರಿತು ನೋಡೊದಾದರೆ
25%ಗೂ ಅಧಿಕ ಖಾಲಿ ಹುದ್ದೆ ಇರುವ ಶೈಕ್ಷಣಿಕ ಬ್ಲಾಕ್ (ತಾಲೂಕು) ನ ಶಿಕ್ಷಕರಿಗೆ ನಿಬಂಧನೆಗಳೊಂದಿಗೆ ವರ್ಗಾವಣೆಗೆ ಅವಕಾಶ ಒಂದೇ ವೃಂದ ಮತ್ತು ತಾಲೂಕಿನಲ್ಲಿ 10 ವರ್ಷ ಸೇವೆ ಸಲ್ಲಿಸಿದವರಿಗೆ ಅಥವಾ ಒಂದೇ ತಾಲೂಕಿನಲ್ಲಿ ವಿವಿಧ ವೃಂದ(AM,HM) ಗಳಲ್ಲಿ 15 ವರ್ಷ ಸೇವೆ ಸಲ್ಲಿಸಿದವರಿಗೆ ಅವಕಾಶ ಸಿಗಲಿದೆಯಂತೆ.ಕನಿಷ್ಠ ಸೇವಾವಧಿ ಪ್ರಸ್ತುತ ಶಾಲೆಯಲ್ಲಿ 3 ವರ್ಷ ಸೇವೆ ಸಲ್ಲಿಸಿರಬೇಕು ಎಂಬ ನಿಯಮ ವನ್ನು ಸುಧಾರಿಸಿ ಹೆಚ್ಚುವರಿ ಮಾಡಿದ ಸಂದರ್ಭದಲ್ಲಿ ಹಿಂದಿನ ಶಾಲಾ ಸೇವೆಯನ್ನು ಪರಿಗಣಿಸುವುದು.ನಿರ್ದಿಷ್ಟ ಹುದ್ದೆಗಳ ಆಧ್ಯತಾ ಪಟ್ಟಿಯನ್ನು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸುವುದು.
ವರ್ಗಾವಣೆ ಮಿತಿಯಿಂದ
ತೀವ್ರತರ ಖಾಯಿಲೆ ಪ್ರಕರಣ
ವಿಕಲ ಚೇತನ ಪ್ರಕರಣ,
12 ವರ್ಷ ವಯಸ್ಸಿನೊಳಗಿನ ಮಕ್ಕಳುಳ್ಳ ವಿಧವೆ,ವಿಧುರ, ವಿಚ್ಛೇದಿತ ಪ್ರಕರಣ,
ಸೈನಿಕ ಪ್ರಕರಣ
ಪರಸ್ಪರ ವರ್ಗಾವಷೆ ಪ್ರಕರಣಗಳನ್ನು ಹೊರತುಪಡಿಸಿ ಲೆಕ್ಕ ಹಾಕುವುದು.ಇದರೊಂದಿಗೆ
ಕಲ್ಯಾಣ ಕರ್ನಾಟಕ ಭಾಗ ಮತ್ತು EBBS ಗಳಿಗೆ ಇತರೆ ಘಟಕಗಳಿಂದ ವರ್ಗಾವಣೆ ಮಿತಿ ಮೀರಿದ್ದಾಗ್ಯೂ ವರ್ಗಾವಣೆ ನೀಡಬಹುದು. ಪರಸ್ಪರ ವರ್ಗಾವಣೆ ಆರಂಭಿಕ ಏಳು ವರ್ಷಗಳ ಸೇವೆ ಆಗಿದ್ದರೆ ಮಾತ್ರ ಪರಸ್ಪರ ವರ್ಗಾವಣೆ ಎಂಬ ನಿಯಮ ಸಡಿಲಿಸಿ ಐದು ವರ್ಷಕ್ಕೆ ಇಳಿಸಲಾಗಿದೆ.ಖಾಲಿ ಹುದ್ದೆ ಲೆಕ್ಕ ಹಾಕುವಾಗ ಪ್ರಕ್ಯೇಕ ವೃಂದ (SHM,HM,AM,PET)ವಾರು ಲೆಕ್ಕ ಹಾಕುವ ಬದಲಾಗಿ ಎಲ್ಲಾ ಪ್ರಾಥಮಿಕ ವೃಂದಗಳ ಆಧಾರದ ಮೇಲೆ ಲೆಕ್ಕ ಹಾಕುವುದು.ಪತಿ-ಪತ್ನಿ ಪ್ರಕರಣದಡಿ ಕೋರಿಕೆ ವರ್ಗಾವಣೆ ಸಂಬಂಧಿಸಿದಂತೆ ಸಂಗಾತಿ ಇರುವ ತಾಲೂಕಿಗೆ ಮಾತ್ರ ವರ್ಗಾವಣೆ ನೀಡುವುದು ಎಂಬುದರ ಬದಲಾಗಿ ಸಂಗಾತಿ ಕಾರ್ಯ ನಿರ್ವಹಿಸುವ ತಾಲೂಕು ಇರುವ ಜಿಲ್ಲೆಯ ಯಾವುದೇ ಬ್ಲಾಕ್‌ಗೆ ವರ್ಗಾವಣೆ ಹೊಂದಲು ಅವಕಾಶ ನೀಡಲಾಗಿದೆ.
ಶಿಕ್ಷಕರ ವರ್ಗಾವಣೆಯಲ್ಲಿ ಮತ್ತಷ್ಟು ಬದಲಾವಣೆಗಳು.
ಇನ್ನೂ ಇಂದು ಶಿಕ್ಷಣ ಸಚಿವರಿಂದ ಸದನದಲ್ಲಿ ಮಂಡಿಸಲ್ಪಟ್ಟು ಅನುಮೋದನೆಗೊಂಡ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ (ತಿದ್ದುಪಡಿ)ಯು ವರ್ಗಾವಣೆ ಆಕಾಂಕ್ಷಿಗಳಿಗೆ ಮತ್ತಷ್ಟು ನೆಮ್ಮದಿಯನ್ನು ತಂದುಕೊಟ್ಟಿದೆ ಎಂದು ಹೇಳಬಹುದು 25%ಗೂ ಅಧಿಕ ಖಾಲಿ ಹುದ್ದೆ ಇರುವ ಶೈಕ್ಷಣಿಕ ಬ್ಲಾಕ್ (ತಾಲೂಕು)ನ ಶಿಕ್ಷಕರಿಗೆ ನಿಬಂಧನೆಗಳೊಂದಿಗೆ ವರ್ಗಾವಣೆಗೆಯಲ್ಲಿ ಅವಕಾಶವನ್ನು ನೀಡಲಾಗಿದೆ.ಜೊತೆಗೆ ಒಂದೇ ವೃಂದ ಮತ್ತು ತಾಲೂಕಿನಲ್ಲಿ 10 ವರ್ಷ ಸೇವೆ ಸಲ್ಲಿಸಿದವರಿಗೂ ಕೂಡಾ ಅನುಕೂಲ ಕಲ್ಪಿಸಲಾಗಿದೆ.ಒಂದೇ ತಾಲೂಕಿನಲ್ಲಿ ವಿವಿಧ ವೃಂದ(AM,HM) ಗಳಲ್ಲಿ 15 ವರ್ಷ ಸೇವೆ ಸಲ್ಲಿಸಿದವರಿಗೆ ಅವಕಾಶ ಕಲ್ಪಿಸಲಾಗಿದ್ದು ಕನಿಷ್ಠ ಸೇವಾವಧಿ,ಪ್ರಸ್ತುತ ಶಾಲೆಯಲ್ಲಿ 3 ವರ್ಷ ಸೇವೆ ಸಲ್ಲಿಸಿರಬೇಕು ಎಂಬ ನಿಯಮವನ್ನು ಸುಧಾರಿಸಿ ಹೆಚ್ಚುವರಿ ಮಾಡಿದ ಸಂದರ್ಭದಲ್ಲಿ ಹಿಂದಿನ ಶಾಲಾ ಸೇವೆಯನ್ನು ಪರಿಗಣಿಸುವುದು ಎಂದ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.ಇದರೊಂದಿಗೆ ನಿರ್ದಿಷ್ಟ ಹುದ್ದೆಗಳ ಆಧ್ಯತಾ ಪಟ್ಟಿಯನ್ನು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸುವುದು.
ಒಟ್ಟಾರೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಪ್ರಯತ್ನ ಮತ್ತು ಮಾನ್ಯ ಶಿಕ್ಷಣ ಸಚಿವರಿಗಿರುವ ಶಿಕ್ಷಕರ ಮೇಲಿನ ಕಳಕಳಿಯ ಫಲವಾಗಿ ವರ್ಗಾವಣೆಯು ಶಿಕ್ಷಕರಲ್ಲಿ ನೆಮ್ಮದಿ ಉಂಟು ಮಾಡಿದ್ದು ಇದರೊಂದಿಗೆ ಸಧ್ಯ ಶಿಕ್ಷಕರು ಕೂಡಾ ಈ ಒಂದು ವರ್ಗಾವಣೆ ವಿಚಾರ ಕುರಿತಂತೆ ಸಾಕಷ್ಟು ಪ್ರಮಾಣದಲ್ಲಿ ಧ್ವನಿ ಎತ್ತುತ್ತಾ ಅದರಲ್ಲೂ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿರುವ ಪವಾಡೆಪ್ಪ ಮತ್ತು ಮಹೇಶ್ ಮಡ್ಡಿ ಸೇರಿದಂತೆ ಹಲವರು ಬೆಂಗಳೂರು ಚಲೋ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದ್ದು ಏನೇ ಆಗಲಿ ಶಿಕ್ಷಕರ ಸ್ನೇಹಿ ಆಗಿ ಅನುಕೂಲವಾಗಲೆಂಬುದು ನಮ್ಮ ಆಶಯವಾಗಿದೆ.