ಬೆಂಗಳೂರು –
ರಾಜ್ಯದಲ್ಲಿ ಈ ವರ್ಷ ಎಷ್ಟು ಶಿಕ್ಷಕರು ನಿವೃತ್ತಿಯಾಗಲಿದ್ದಾರೆ ಗೊತ್ತಾ – ನಿವೃತ್ತಿಯ ಬೆನ್ನಲ್ಲೇ ಸಿದ್ದಗೊಂಡಿತು ಇಲಾಖೆಯ ಮತ್ತೊಂದು ಹೊಸದೊಂದು ಪ್ಲಾನ್
ಈವರ್ಷ ರಾಜ್ಯದಲ್ಲಿ 4985 ಶಿಕ್ಷಕರು ನಿವೃತ್ತ ರಾಗಲಿದ್ದಾರೆ.ಒಂದೇ ವರ್ಷದಲ್ಲಿಯೇ ರಾಜ್ಯದ ಮೂಲೆ ಮೂಲೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿ ರುವ ಶಿಕ್ಷಕರು ಸೇವಾ ನಿವೃತ್ತಿಯಾಗಲಿದ್ದು ಇದರ ಬೆನ್ನಲ್ಲೇ ಶಿಕ್ಷಕರ ನೇಮಕಾತಿಗಾಗಿ ಇಲಾಖೆ ಕೂಡಾ ಮುಂದಾಗಿದೆ.ಶಿಕ್ಷಕರ ನೇಮಕಾತಿಯವ ರೆಗೂ ಈಗಾಗಲೇ ರಾಜ್ಯದಲ್ಲಿ ವಿವಿಧ ಕಾರಣ ಗಳಿಂದ ಖಾಲಿ ಹುದ್ದೆಯನ್ನು ಭರ್ತಿ ಮಾಡಿಕೊ ಳ್ಳುವವರೆಗೂ ಅತಿಥಿ ಶಿಕ್ಷಕರನ್ನು ಒಂದು ವರ್ಷದ ಅವಧಿಗೆ ಬಳಕೆ ಮಾಡಿಕೊಳ್ಳಲಾಗಿದೆ.
ಈ ಒಂದು ಪರಂಪರೆ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಪ್ರಸ್ತುತ ವಿದ್ಯಾರ್ಥಿ ಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಲಿ ಹುದ್ದೆಗ ಳಿಗೆ ಎದುರಾಗಿ ಒಟ್ಟು 35192 ಅತಿಥಿ ಶಿಕ್ಷಕರು ಹಾಗೂ ಪ್ರೌಢಶಾಲೆಗಳಲ್ಲಿ ಕೊರತೆ ಇರುವ ಹುದ್ದೆಗಳಿಗೆ ಪ್ರಸ್ತುತ ಸಾಲಿನಲ್ಲಿ ಒಟ್ಟು 7808 ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ಶಿಕ್ಷಕರ ಕೊರತೆ ನೀಗಿಸಲಾಗಿದೆ.
ಇನ್ನೂ ಪ್ರಮುಖವಾಗಿ 2023ನೇ ಸಾಲಿನಲ್ಲಿ ನಿವೃತ್ತಿಯಿಂದ ತೆರವಾಗುವ 4985 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆ ಕೋರಿರುವ ಪ್ರಸ್ತಾವನೆಯು ಆರ್ಥಿಕ ಇಲಾಖೆ ಪರಿಶೀಲನೆಯಲ್ಲಿದೆ.ಈ ಒಂದು ಬೆನ್ನಲ್ಲೇ ಈ ಶೈಕ್ಷಣಿಕ ವರ್ಷದಲ್ಲಿ 4985 ಶಿಕ್ಷಕರು ನಿವೃತ್ತರಾಗು ತ್ತಿದ್ದಾರೆ ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಆಸಕ್ತಿ ತೋರಿಸಿದೆ.
ಒಂದು ಕಡೆಗೆ ಸಾವಿರಾರು ಶಿಕ್ಷಕರ ನಿವೃತ್ತಿ ಮತ್ತೊಂದು ಕಡೆಗೆ ಸಾವಿರಾರು ಶಿಕ್ಷಕರ ನೇಮ ಕಾತಿಗಾಗಿ ಸಿದ್ದತೆ ಇವೆಲ್ಲದರ ನಡುವೆ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರ ಸಮಸ್ಯೆಗಳಿದ್ದು ಶಿಕ್ಷಕರು ಕೂಡಾ ಅಸಮಾಧಾನಗೊಂಡಿದ್ದು ಏನೇನಾ ಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..