ಧಾರವಾಡ –
ಕೃಷಿ ಮೇಳ ಆಗಸ್ಟ್ 31 ರಂದು ಸಿರಿಧಾನ್ಯ ಆಧಾರಿತ ಸಿಹಿ ಮತ್ತು ಖಾರಾ ಖಾದ್ಯಗಳ ಸ್ಪರ್ಧೆ ಈಗಲೇ ಹೆಸರು ನೊಂದಣಿ ಮಾಡಿಕೊಳ್ಳಿ ಆಕರ್ಷಕ ಬಹುಮಾನ ಗೆಲ್ಲಿ ಆಯೋಜಕರ ಕರೆ.
ಹೌದು ಸಪ್ಟೆಂಬರ್ 09 ರಿಂದ 12 ರವರೆಗೆ ಧಾರವಾಡ ದ ಧಾರವಾಡ ಕೃಷಿ ವಿಶ್ವವಿದ್ಯಾಲಯ ದಲ್ಲಿ ಕೃಷಿಮೇಳ ನಡೆಯಲಿದೆ ಈ ಒಂದು ಅಂಗ ವಾಗಿ ಸಮುದಾಯ ವಿಜ್ಞಾನ ಮಹಾವಿದ್ಯಾಲ ಯದ ಮಹಿಳಾ ಮತ್ತು ಮಕ್ಕಳ ಸಮಿತಿಯಿಂದ ಆಗಸ್ಟ್ 31 ರಂದು ಮದ್ಯಾಹ್ನ 2 ಗಂಟೆಗೆ ಆಹಾರ ಮತ್ತು ಸಮುದಾಯ ವಿಜ್ಞಾನ ಮಹಾವಿದ್ಯಾಲ ಯದ ಸಮುದಾಯ ವಿಜ್ಞಾನ ಪೋಷಣಾ ವಿಭಾಗದಲ್ಲಿ ಮಹಿಳೆಯರಿಗಾಗಿ ಸಿರಿಧಾನ್ಯ ಆಧಾರಿತ ಸಿಹಿ ಮತ್ತು ಖಾರಾ ಖಾದ್ಯಗಳ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಭಾಗವಹಿಸಲು ಇಚ್ಚಿಸುವ ಮಹಿಳೆಯರು ಸಿರಿಧಾನ್ಯ ಆಧಾರಿತ ಸಿಹಿ ಅಥವಾ ಖಾರಾ ಆಹಾರದೊಂದಿಗೆ ಅದನ್ನು ತಯಾರಿಸುವ ವಿವರವಾದ ವಿಧಾನದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ತಿಂಡಿ-ತಿನಿಸುಗಳ ಪೌಷ್ಟಿಕತೆ, ರುಚಿ ಹಾಗೂ ಮಂಡಿಸುವಿಕೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾ ಗುವದು.
ಆಸಕ್ತರು ಮೊಬೈಲ್ ಸಂಖ್ಯೆ : 9045653076, 8553395310 ಗಳಿಗೆ ಆಗಸ್ಟ್ 30 ರೊಳಗಾಗಿ ಸಂಪರ್ಕಿಸಿ ಹೆಸರುಗಳನ್ನು ನೋಂದಾಯಿಸಬ ಹುದು.ಸ್ಪರ್ಧೆಯ ವಿಜೇತರಿಗೆ ಕೃಷಿ ಮೇಳ 2023 ರಲ್ಲಿ ಸ್ಮರಣಿಕೆಯೊಂದಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಗುವುದು. ಸ್ಪರ್ಧೆಗೆ ತಗಲುವ ಎಲ್ಲ ಖರ್ಚು ವೆಚ್ಚವನ್ನು ಸ್ಪರ್ಧಾಳುಗಳೇ ಭರಿಸಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..