ಈಶ್ವರಪ್ಪ ಗೆ ಹೈಕಮಾಂಡ್ ಬುಲಾವ್ – ದೆಹಲಿಗೆ ತೆರಳಿದ ಕೆಎಸ್ ಈಶ್ವರಪ್ಪ ತೀವ್ರ ಕುತೂಹಲ ಕೆರಳಿಸದ ವರಿಷ್ಠರ ಭೇಟಿ…..

Suddi Sante Desk
ಈಶ್ವರಪ್ಪ ಗೆ ಹೈಕಮಾಂಡ್ ಬುಲಾವ್ – ದೆಹಲಿಗೆ ತೆರಳಿದ ಕೆಎಸ್ ಈಶ್ವರಪ್ಪ ತೀವ್ರ ಕುತೂಹಲ ಕೆರಳಿಸದ ವರಿಷ್ಠರ ಭೇಟಿ…..

ಬೆಂಗಳೂರು

ಈಶ್ವರಪ್ಪ ಗೆ ಹೈಕಮಾಂಡ್ ಬುಲಾವ್ – ದೆಹಲಿಗೆ ತೆರಳಿದ ಕೆಎಸ್ ಈಶ್ವರಪ್ಪ ತೀವ್ರ ಕುತೂಹಲ ಕೆರಳಿಸದ ವರಿಷ್ಠರ ಭೇಟಿ ಹೌದು

ಮಗನಿಗೆ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರಿಗೆ ಅಮಿತ್ ಶಾ ಕರೆ ಮಾಡಿದ್ದಾರೆ.ಹೌದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪಗೆ ಅಮಿತ್ ಶಾ ಕರೆ ಮಾಡಿದ್ದು ಹೀಗಾಗಿ ದೆಹಲಿಗೆ ತೆರಳಿದ್ದಾರೆ.ಲೋಕಸಭಾ ಚುನಾವಣೆ ಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿರ್ಧಾರ ಮಾಡಿದ್ದರು.

ಈ ಒಂದು ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿದ್ದಾರೆ.ಪುತ್ರ ಕಾಂತೇಶ್ ಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರಗೊಂಡಿರುವ ಮಾಜಿ ಸಚಿವ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಲೋಕಸಭಾ ಅಖಾಡಕ್ಕೆ ಇಳಿದಿದ್ದಾರೆ.ಈ ಹಿನ್ನೆಲೆಯಲ್ಲಿ ಚುನಾವಣಾ ಚಾಣಾಕ್ಯ ಅಮಿತ್ ಶಾ ಈಶ್ವರಪ್ಪಗೆ ಕರೆ ಮಾಡಿದ್ದು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.ಈ ಬಗ್ಗೆ ಈಶ್ವರಪ್ಪ ಕೂಡಾ ಹೇಳಿದ್ದು ಅಮಿತ್ ಶಾ ಕರೆ ಮೇರೆಗೆ ದೆಹಲಿಗೆ ಹೋಗುತ್ತಿ ದ್ದೇನೆ

ಆದರೆ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದಿದ್ದಾರೆ.ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ನನ್ನ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ.ನನ್ನ ಸ್ಪರ್ಧೆ ಅಚಲವಾಗಿದೆ ಎಂದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.