ತುಮಕೂರು –
ರಸ್ತೆ ಪಕ್ಕದಲ್ಲೆ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ನಗರದ ಎರಡು ಕಡೆಗಳಲ್ಲಿ ರಸ್ತೆಯಲ್ಲಿ ಇಬ್ಬರು ಮಹಿಳೆಯರು ನಡೆದುಕೊಂಡು ಹೋರಟಿದ್ದರು. ಸ್ಕೂಟಿ ಮೇಲೆ ಬಂದ ಖದೀಮನೊಬ್ಬ ಮಹಿಳೆಯರ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಹಾಡು ಹಗಲೇ ಈ ಒಂದು ಘಟನೆಗಳು ನಡೆದಿದ್ದು ಎರಡು ಘಟನೆಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಒಂದು ಪ್ರಕರಣದಲ್ಲಿ ರಸ್ತೆ ಪಕ್ಕದಲ್ಲಿದ್ದ ಮಹಿಳೆಯ ಬ್ಯಾಗ್ ಕಿತ್ತುಕೊಂಡು ಹೋದರೆ ಇನ್ನೊಂದು ಘಟನೆಯಲ್ಲಿ ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದ ಮಹಿಳೆಯ ಬ್ಯಾಗ್ ನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಕ್ಯಾಶ್ ಬ್ಯಾಗ್ ಗಳನ್ನೇ ಟಾರ್ಗೆಟ್ ಮಾಡಿಕೊಂಡಿರುವ ಇವರು ಇವುಗಳನ್ನೇ ಕಿತ್ತುಕೊಂಡು ಹೋಗ್ತಿರೋ ಘಟನೆಗಳು ಬೆಳಕಿವೆ ಬಂದಿವೆ. ಒಂದೇ ದಿನ ಎರಡು ಕಡೆಗಳಲ್ಲಿ ಕಳ್ಳತನವನ್ನು ಖದೀಮರು ಮಾಡಿದ್ದಾರೆ. ಮಂಡೀಪೇಟೆ ಮುಖ್ಯರಸ್ತೆಯಲ್ಲಿ ಸೇಲ್ಸ್ ಬಾಯ್ ಬ್ಯಾಗ್ ಕಿತ್ತುಕೊಂಡು ಹೋಗಿದ್ದಾನೆ.
ಒಂದೂವರೆ ಲಕ್ಷ ಹಣವಿದ್ದ ಕ್ಯಾಶ್ ಬ್ಯಾಗ್ ಕೊಂಡೊಯುತ್ತಿದ್ದ ಈಶ್ವರ್ ಅವರ ಪತ್ನಿಯ ಕೈಯಲ್ಲಿದ್ದ ಬ್ಯಾಗ್ ನ್ನು ಖದೀಮರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇನ್ನೊಂದು ಕಡೆ ಮಹಿಳೆಯ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ. ಬೈಕ್ ನಿಲ್ಲಿಸಿ ರಸ್ತೆಯಲ್ಲಿ ನಿಂತಿದ್ದ ವೃದ್ದ ದಂಪತಿಗಳು.ಬೈಕ್ ನಲ್ಲಿ ಬಂದ ಖದೀಮ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ. ಒಂದೇ ದಿನ ನಗರದಲ್ಲಿ ಎರಡೂ ಘಟನೆಗಳು ನಡೆದಿವೆ.
ಘಟನೆ ನಡೆದು ಈವರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಲ್ಲವಂತೆ. ಪ್ರಕರಣವನ್ನು ದಾಖಲಿಸದೇ ತುಮಕೂರು ನಗರ ಠಾಣೆ ಪೊಲೀಸರು ಹಿಂದೆ ಮುಂದೆ ಮುಂದೆ ನೋಡುತ್ತಿದ್ದಾರೆಂದು ನೊಂದ ಕುಟುಂಬದವರು ಆರೋಪಿಸಿದ್ದಾರೆ. ಸಿಸಿ ಟಿವಿ ದೃಶ್ಯ ಇದ್ದರೂ ಕೇಸ್ ದಾಖಲಿಸಲು ಮೀನಾಮೇಷವನ್ನು ಮಾಡುತ್ತಿದ್ದಾರೆಂದು ಮಂಡಿಪೇಟೆ ವರ್ತಕ ಹರೀಶ್ ಆರೋಪಿಸಿದ್ದಾರೆ.ಇನ್ನೂ ಎರಡು ಪ್ರಕರಣಗಳ ಕಳ್ಳತನಗಳು ಸಿಸಿ ಟಿವಿಯಲ್ಲಿ ನಡೆದಿದ್ದು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳಾಗಿವೆ.