ಬೆಂಗಳೂರು –
ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈಗಾಗಲೇ ತರಬೇತಿ ಬಹಿಷ್ಕಾರ ಕ್ಕೆ ಕರೆ ಕೊಟ್ಟಿದ್ದು ಇದರ ಬೆನ್ನಲ್ಲೇ ಈಗ ಮತ್ತೊಂದು ಹಂತದ ಹೋರಾಟಕ್ಕೆ KSPSTA ರಾಜ್ಯ ಸಂಘ ಕರೆ ಕೊಟ್ಟಿದೆ.ಹೌದು ತುಮಕೂರು ನಗರದಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುರ್ತು ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ತುಮಕೂರು ನಗರದಲ್ಲಿ ಯಶಸ್ವಿಯಾಗಿ ಜರುಗಿತು.
ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಪದಾಧಿಕಾರಿಗಳು ಭಾಗವಹಿಸಿ ತಮ್ಮದೇ ಆದ ಸಂಘಟನಾತ್ಮಕ ವಿಚಾರಗಳನ್ನು,ಅಭಿಪ್ರಾಯವನ್ನು ಮಂಡಿಸಿದರು.
ಅಂತಿಮವಾಗಿ ಸಭೆಯಲ್ಲಿ ಆಗಿರುವ ಪ್ರಮುಖ ನಿರ್ಣಯಗಳು ಈ ಕೆಳಗಿನಂತಿವೆ.
?ಈಗಾಗಲೇ ಶಿಕ್ಷಕರ ಪ್ರಮುಖ ಬೇಡಿಕೆಗಳಾದ ಸಿ & ಆರ್ ನಿಯಮ ತಿದ್ದುಪಡಿ,ವರ್ಗಾವಣೆ ಸಮಸ್ಯೆ, ಮುಖ್ಯ ಗುರುಗಳ ಸಮಸ್ಯೆ ಹಾಗೂ ಇನ್ನೀತರ ಬೇಡಿಕೆಗಳ ಈಡೇರಿ ಕೆಗಾಗಿ ತರಬೇತಿಯನ್ನು ಬಹಿಷ್ಕಾರ ಮಾಡಲಾಗಿದ್ದು ತರಭೇತಿ ಬಹಿಷ್ಕಾರವನ್ನು ಮುಂದುವರೆಸುವುದರ ಜೊತೆಗೆ ಹೋರಾಟದ ಮುಂದುವರಿದ ಭಾಗವಾಗಿ ಅಕ್ಟೋಬರ್ 21 ರಿಂದ ಕಪ್ಪು ಪಟ್ಟಿ ಧರಿಸಿ ಒಂದು ವಾರ ಕಾಲ ಶಾಲೆಯ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವುದು.
? ಶಿಕ್ಷಕರ ಸಮಸ್ಯೆಗಳ ಈಡೇರಿಕೆಗಾಗಿ ನಿರಂತರವಾದ ತೀವ್ರ ಹೋರಾಟವನ್ನು ಕೈಗೊಳ್ಳುವ ನಿರ್ಣಯ ಮಾಡಲಾಯಿತು.
? ಎನ್ ಪಿ ಎಸ್ ರದ್ದತಿ, ವೇತನ ಆಯೋಗದ ಜಾರಿ ಹಾಗೂ ಇನ್ನೀತರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹೋರಾ ಟಕ್ಕೆ ಸಹಕಾರ ನೀಡುವುದು ಹಾಗೂ ಶಿಕ್ಷಕರ ಸಂಘಟನೆ ಕೈಗೊಳ್ಳುವ ಹೋರಾಟಕ್ಕೆ ಸರ್ಕಾರಿ ನೌಕರ ಸಂಘದ ಸಹಕಾರವನ್ನು ಪಡೆದುಕೊಳ್ಳಲು ಸಭೆಯು ನಿರ್ಣಯಿ ಸಿತು