ಬೆಂಗಳೂರು –
ಶಿಕ್ಷಕರ ಬಡ್ತಿಗಾಗಿ ಅಧಿಕಾರಿಗಳನ್ನು ಭೇಟಿಯಾದ KSPSTA ನಿಯೋಗ – ರಾಜ್ಯಾಧ್ಯಕ್ಷ ನಾಗೇಶ, ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಅಧಿಕಾರಿಗಳ ಭೇಟಿ ಬಡ್ತಿ ವಿಚಾರ ಕುರಿತಂತೆ ಚರ್ಚೆ ಸಿಕ್ಕಿತು ಭರವಸೆ…..ಹೌದು ರಾಜ್ಯದ ಸರ್ಕಾರಿ ಶಾಲೆಯ ಮುಖ್ಯ ಗುರುಗಳ ಬಡ್ತಿ ವಿಚಾರ ಕುರಿತಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರಕ್ರಿಯೆ ಆರಂಭಿಸಿದ್ದು ಸಂಘಟನೆಯ ರಾಜ್ಯಾಧ್ಯಕ್ಷ ಕೆ ನಾಗೇಶ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿನ ನಿಯೋಗವು ಈ ಒಂದು ಕಾರ್ಯವನ್ನು ಆರಂಭ ಮಾಡಿದೆ.
ಈ ಒಂದು ವಿಚಾರ ಕುರಿತಂತೆ ದೈಹಿಕ ಅಂಗವಿಕಲ ತೆಯನ್ನು ಗುರುತಿಸುವ ಸಮಿತಿಯ ಸಭೆಯ ನಂತರ ಪ್ರಕ್ರಿಯೆ ಆರಂಭ ಮಾಡಬೇಕಾಗಿರುವು ದರಿಂದ ಪೂರಕವಾದ ಮಾಹಿತಿಯನ್ನು ಕೂಡಾ ಈಗಾಗಲೇ ನೀಡಲಾಗಿದ್ದು ಈ ಒಂದು ಕಾರ್ಯ ವನ್ನು ತುರ್ತಾಗಿ ಆರಂಭ ಮಾಡುವಂತೆ ಮತ್ತು ಈ ಒಂದು ಕಾರ್ಯದ ಕುರಿತಂತೆ
ಸಂಘಟನೆಯ ಅಧ್ಯಕ್ಷ ಕೆ ನಾಗೇಶ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತ್ರತ್ವದ ಲ್ಲಿನ ನಿಯೋಗವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಸಿದ್ದೇಶ ಮತ್ತು ಮೂರ್ತಿ ಅವರನ್ನು ಇಲಾಖೆಯ ಅಧಿಕಾರಿ ಗಳನ್ನು ಭೇಟಿಯಾಗಿ ಅಧಿಕಾರಿಗಳೊಂದಿಗೆ ಚರ್ಚೆಯನ್ನು ಮಾಡಿದರು.ಈ ಕೂಡಲೇ ಬಡ್ತಿ ಪ್ರಕ್ರಿಯೆಯನ್ನು ಆರಂಭ ಮಾಡುವಂತೆ ಒತ್ತಾಯವನ್ನು ಮಾಡಲಾಯಿತು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..