ಶಿಕ್ಷಕರ ವರ್ಗಾವಣೆಯ ಹೊಸ ಅಧಿಸೂಚನೆಯ ನಿಜವಾಯಿತು ಸುದ್ದಿ ಸಂತೆ ಯ ವರದಿ ಬೆನ್ನಲ್ಲೇ ಶಿಕ್ಷಕರಿಗೆ ಸ್ಪಷ್ಟನೆ ನೀಡಿತು KSPSTA ಸಂಘಟನೆ…..

Suddi Sante Desk

ಬೆಂಗಳೂರು –

ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಮುಂದಿನ ವಾರದಲ್ಲಿ ಮಂಗಳವಾರ ಹೊಸ ಅಧಿಸೂಚನೆ ಹೊರ ಬೀಳಲಿದೆ ಈ ಕುರಿತು ಸುದ್ದಿ ಸಂತೆ ಮೊದಲು ವರದಿ ಯನ್ನು ಪ್ರಕಟಿಸಿತು.ಸದಾ ನಾಡಿನ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತಿರುವ ಸುದ್ದಿ ಸಂತೆ ಯ ವರದಿ ಬೆನ್ನಲ್ಲೇ ಈಗ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಸಂಘದಿಂದ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ.

ಹೌದು ಆತ್ಮೀಯ ಶಿಕ್ಷಕ ಬಂಧುಗಳೇ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತಹ ನ್ಯಾಯಾಲಯದ ಪ್ರಕರಣವು ದಿನಾಂಕ 18/10/2021 ರಂದು ತೆರವು ಗೊಂಡಿರುವುದು ತಮ್ಮೆಲ್ಲರ ಗಮನಕ್ಕೆ ಇದೆ

ವರ್ಗಾವಣೆ ವಿಷಯದ ಬಗ್ಗೆ ಶಿಕ್ಷಕರುಗಳು ಯಾವುದೇ ಗೊಂದಲಕ್ಕೆ ಬೀಳಬಾರದು,ಈ ಹಿಂದೆ ಅಧಿಸೂಚಿಸಿ ಪ್ರಕಟಪಡಿಸಿದ ವರ್ಗಾವಣಾ ಮಾರ್ಗಸೂಚಿಗಳಂತೆಯೇ ವರ್ಗಾವಣೆ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ನ್ಯಾಯಾಲ ಯದ ಆದೇಶ ತೆರವುಗೊಂಡ ದಿನವೇ,ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಬಿ ಸಿ ನಾಗೇಶರವರನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಯೋಗವು ಭೇಟಿ ಮಾಡಿ ಕೂಡಲೇ ವರ್ಗಾವಣೆ ಪ್ರಕ್ರಿಯೆ ಆರಂಭಿಸುವ ಬಗ್ಗೆ ಮಾಡಿರುವ ಒತ್ತಾಯಕ್ಕೆ ಸ್ಪಂದಿಸಿರುವ ಸಚಿವರು ಮುಂದಿನ ವಾರದ ಆರಂಭದಲ್ಲಿ ಸೋಮವಾರ ಅಥವಾ ಮಂಗಳವಾರ ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿ ಪ್ರಕಟಿಸುವುದಾಗಿ ಭರವಸೆ ನೀಡಿರುತ್ತಾರೆ.ಎಂದು ಸಂಘದ ಅಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಸರ್ವ ಸದಸ್ಯರ ಪರವಾಗಿ ಸಂದೇಶ ಕಳಿಸಿ ದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.