ಮಾಜಿ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ 1271 ಶಿಕ್ಷಕರ ಕೊರತೆ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರ ಕೊರತೆ ಇದ್ದರೂ ನೋಡುತ್ತಿಲ್ಲ ಸ್ಪಂದಿಸುತ್ತಿಲ್ಲ…..

Suddi Sante Desk

ಶಿರಸಿ –

ಮಾಜಿ ಶಿಕ್ಷಣ ಸಚಿವರು ಸಧ್ಯ ವಿಧಾನ ಪರಿಷತ್ ಸದಸ್ಯರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತವರು ಜಿಲ್ಲೆಯಲ್ಲಿ ಸಾವಿರಾರು ಶಿಕ್ಷಕರ ಸಮಸ್ಯೆ ಇದೆ ಹೌದು ಶಿರಸಿ ಶೈಕ್ಷಣಿಕ ಜಿಲ್ಲೆಯ 102 ಸರ್ಕಾರಿ ಶಾಲೆಗಳಲ್ಲಿ ಒಬ್ಬರೂ ಕಾಯಂ ಶಿಕ್ಷಕರಿಲ್ಲ ಈ ಪೈಕಿ ಬಹುತೇಕ ಕುಗ್ರಾಮದ ಶಾಲೆಗಳೇ ಆಗಿವೆ.ಗುಡ್ಡಗಾಡು ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಜಿಲ್ಲೆಯಲ್ಲಿ ಕಾಡು ಪ್ರದೇಶದಲ್ಲಿ ರುವ ಶಾಲೆಗಳು ಹೆಚ್ಚಿವೆ.ಈ ಪೈಕಿ ಜೋಯಿಡಾ ತಾಲ್ಲೂಕು ಅಗ್ರ ಪಂಕ್ತಿಯಲ್ಲಿದೆ. ಈ ತಾಲ್ಲೂಕಿನ 42 ಶಾಲೆಗಳಿಗೆ ಈವರೆಗೂ ಕಾಯಂ ಶಿಕ್ಷಕರ ನಿಯೋಜನೆಯಾಗಿಲ್ಲ.

ಗೋಡಸೇತ,ಭಾಮಣೆ,ಪಾತಾಗುಡಿ,ಶಿರೋಳಿ, ತೇಲೋಲಿ, ಕುಮಗಾಳಿ ಸೇರಿದಂತೆ ಹಲವು ಕುಗ್ರಾಮಗಳಲ್ಲಿ ವಿದ್ಯಾರ್ಥಿ ಗಳಿದ್ದರೂ ಶಿಕ್ಷಕರಿಲ್ಲ ಇದರಿಂದಾಗಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಪರದಾಡುವ ಸ್ಥಿತಿ ಇದೆ.ಶಿರಸಿ ತಾಲ್ಲೂಕಿನ 22, ಸಿದ್ದಾಪುರದ 13, ಹಳಿಯಾಳದ 11, ಯಲ್ಲಾಪುರದ 10 ಹಾಗೂ ಮುಂಡಗೋಡದ 4 ಶಾಲೆಗಳಲ್ಲೂ ಇಂತದ್ದೇ ಸ್ಥಿತಿ ಇದೆ. ಸ್ಥಳೀಯ ಅತಿಥಿ ಶಿಕ್ಷಕರನ್ನೇ ಪತ್ತೆ ಹಚ್ಚಿ ಅವರನ್ನು ನೇಮಕ ಮಾಡಿ ಶಾಲೆಗಳನ್ನು ನಡೆಸಲಾಗುತ್ತಿದೆ. ಅಕ್ಕಪ ಕ್ಕದ ಶಾಲೆಗಳಿಂದ ಕಾಯಂ ಶಿಕ್ಷಕರನ್ನು ಸೀಮಿತ ದಿನಕ್ಕೆ ನಿಯೋಜನೆ ಮೇಲೆ ಕಳುಹಿಸಲಾಗುತ್ತಿದೆ.

ಜೋಯಿಡಾ,ಸಿದ್ದಾಪುರ,ಶಿರಸಿ ತಾಲ್ಲೂಕಿನ ಕೆಲವು ಶಾಲೆ ಗಳು ತೀರಾ ಹಿಂದುಳಿದ ಕುಗ್ರಾಮಗಳಲ್ಲಿವೆ.ಅಲ್ಲಿ ನೆಟ್‍ ವರ್ಕ್,ಬಸ್ ಸೌಕರ್ಯ ಸಿಗದು.ಪಕ್ಕಾ ರಸ್ತೆಯಂತೂ ಇಲ್ಲವೇ ಇಲ್ಲ.ಬಾಡಿಗೆ ಮನೆ ಸಿಗುವುದೂ ದೂರದ ಮಾತು. ಹೀಗಾಗಿ ಅಂತಹ ಶಾಲೆಗೆ ತೆರಳಲು ಬಹುತೇಕರು ಒಪ್ಪು ವುದಿಲ್ಲ’ಎಂದು ಹಿರಿಯ ಶಿಕ್ಷಕರೊಬ್ಬರು ಸಮಸ್ಯೆ ಬಗ್ಗೆ ವಿವರಿಸಿದರು.

ಪ್ರತಿ ಬಾರಿ ವರ್ಗಾವಣೆ ಕೌನ್ಸೆಲಿಂಗ್ ವೇಳೆ ಕೆಲವು ಹಳ್ಳಿಗ ಳಲ್ಲಿರುವ ಶಾಲೆಗಳಿಂದ ವರ್ಗಾವಣೆ ಪಡೆಯಲು ಶಿಕ್ಷಕರು ಮುಂದಾಗುತ್ತಿದ್ದಾರೆ.ಹುದ್ದೆ ಖಾಲಿ ಉಳಿದರೂ ಅಲ್ಲಿಗೆ ನೇಮಕವಾಗಲು ಉಳಿದ ಶಿಕ್ಷಕರು ಬಯಸುತ್ತಿಲ್ಲ.ಒತ್ತಡ ಹೇರಿ ಶಿಕ್ಷಕರನ್ನು ನಿಯೋಜನೆ ಸಾಧ್ಯವಿಲ್ಲದ ಕಾರಣ ಸಮಸ್ಯೆ ಉಂಟಾಗಿದೆ ಎನ್ನುತ್ತಾರೆ ಡಿಡಿಪಿಐ ಬಸವರಾಜ್

ಏಳು ತಾಲ್ಲೂಕುಗಳ ವ್ಯಾಪ್ತಿ ಒಳಗೊಂಡ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 1183 ಸರ್ಕಾರಿ ಶಾಲೆಗಳಿದ್ದು ಜಿಲ್ಲೆಗೆ 1271 ಶಿಕ್ಷಕರ ಕೊರತೆ ಇದೆ. 67 ಶಾಲೆಗಳಿಗೆ ಕಾಯಂ ಮುಖ್ಯ ಶಿಕ್ಷಕರ ಅಗತ್ಯವಿದೆ. 749 ಕಿರಿಯ ಪ್ರಾಥಮಿಕ, 394 ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಅಗತ್ಯವಿದೆ. ಈಚೆಗೆ 606 ಮಂದಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊ ಳ್ಳಲು ಅನುಮತಿ ಸಿಕ್ಕಿದೆ.ಕಾಯಂ ಶಿಕ್ಷಕರಿಲ್ಲದ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ.ಸಮೀಪದ ಶಾಲೆಗಳ ಕಾಯಂ ಶಿಕ್ಷಕರೊಬ್ಬರನ್ನು ನಿಯೋಜನೆ ಮೇಲೆ ಕಳುಹಿಸಲಾಗುತ್ತಿದ್ದು ಇನ್ನಾದರೂ ಇತ್ತ ಶಿಕ್ಷಣ ಸಚಿವರು ಮಾಜಿ ಶಿಕ್ಷಣ ಸಚಿವರು ನೋಡಿ ಸಮಸ್ಯೆ ಗೆ ಸ್ಪಂದಿಸೊದು ಅವಶ್ಯಕತೆ ಇದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.