ಗುಳೇದಗುಡ್ಡ –
ಶತಮಾನದ ಶಾಲೆಯಲ್ಲಿ ಮಕ್ಕಳ ಕೊರತೆ ಹೌದು ಇಂತಹ ಚಿತ್ರಣ ವೊಂದು ಗುಳೇದಗುಡ್ಡ ದ ಸರ್ಕಾರಿ ಶಾಲೆಯಲ್ಲಿ ಕಂಡು ಬರುತ್ತಿದೆ
ಪಟ್ಟಣದ ಶತಮಾನದ ಶಾಲೆಯಾದ ಬಾಲಕರ ಪ್ರೌಢಶಾಲೆಯಲ್ಲಿ 2025-26 ನೇ ಸಾಲಿಗೆ ಮಕ್ಕಳ ಕೊರತೆಯಾಗಿದೆ ಇಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು ಹೆಚ್ಚುವರಿಯಾಗಿ ಬೇರೆ ಶಾಲೆಗೆ ನಿಯೋಜ ನೆಗೊಳ್ಳುತ್ತಿದ್ದಾರೆ.
ಪ್ರಾಢಶಾಲೆಯಲ್ಲಿ 2023 ರವರೆಗೆ ಮಕ್ಕಳ ಸಂಖ್ಯೆಗೆ ಕೊರತೆ ಇರಲಿಲ್ಲ ಪ್ರಸ್ತುತ 2025-26 ರಲ್ಲಿ ಮಕ್ಕಳ ಕೊರತೆ ಎದುರಿಸು ವಂತಾಗಿದೆ 2023 ರಲ್ಲಿ 600 ಮಕ್ಕಳಿದ್ದ ಶಾಲೆಗೆ ಈಗ 350 ರಷ್ಟು ಮಕ್ಕಳಿದ್ದಾರೆ ಕಡಿಮೆ ಮಕ್ಕಳು ಪ್ರವೇಶ ಪಡೆದಿದ್ದರಿಂದ ಇಬ್ಬರೂ ಶಿಕ್ಷಕರು ಹೆಚ್ಚುವರಿಯಾಗಿ ಬೇರೆ ಶಾಲೆಗೆ ನಿಯೋಜನೆ ಗೊಂಡಿದ್ದಾರೆ.
ಶಾಲೆಯಲ್ಲಿ 15 ಕ್ಕೂ ಅಧಿಕ ಕೊಠಡಿಗಳು ಇವೆ ಇದರಲ್ಲಿ ಮೊದಲನೆಯ ಮಹಡಿಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಕೆಲವು ಕೊಠಡಿಗಳಲ್ಲಿ ಬಾವಲಿಗಳು ನೇತಾಡುತ್ತಿದ್ದು ಅವುಗಳಿಂದ ಕೆಟ್ಟ ವಾಸನೆ ಹರಡುತ್ತಿರುವುದರಿಂದ ಅವುಗಳು ಬಳಕೆಗೆ ಯೋಗ್ಯ ಇಲ್ಲವಾಗಿವೆ ಹಾಗೂ ಮೇಲೆ ಹಾಕಿದ ತಗಡುಗಳು ಹಾಳಾಗಿವೆ.
ಕಾಂಪೌಂಡ್ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ ಶಾಲೆಯ ಮುಂದೆ ಕಾಂಪೌಂಡ್ ನಿರ್ಮಾಣವಾಗಿದ್ದು ಇದು ಸರಿಯಾಗಿಲ್ಲ. ಪೂರ್ಣ ಪ್ರಮಾಣದ ಕಂಪೌಂಡ ಇಲ್ಲವಾಗಿದೆ ಶಾಲೆಯ ಹಿಂದೆ ದೊಡ್ಡ ಹಳ್ಳ ಇರುವುದರಿಂದ ಅಲ್ಲಿಂದ ಹಂದಿಗಳು ಆಗಾಗ್ಗೆ ನುಗ್ಗುತ್ತವೆ. ಬೇಗನೆ ಕಾಂಪೌಂಡ್ ನಿರ್ಮಾಣ ಮಾಡಿಕೊಡುವಂತೆ ಅಲ್ಲಿನ ಸಿಬ್ಬಂದಿ ಶಾಸಕರಾದ ಭೀಮಸೇನ ಚಿಮ್ಮನಕಟ್ಟಿಯವರಿಗೆ ಮನವಿ ಮಾಡಿದ್ದಾಗಿ ಹೇಳುತ್ತಾರೆ.
ಅಂದಾಜು ಆರೇಳು ವರ್ಷಗಳ ಹಿಂದೆ ಇಲ್ಲಿ ಸಮಾರಂಭ ಜರುಗಿಸಲು ರಂಗಮಂದಿರ ನಿರ್ಮಾಣ ಮಾಡಿದ್ದು₹ 7 ಲಕ್ಷ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದವರು ನಿರ್ಮಾಣ ಮಾಡಿದ್ದಾರೆ. ಆದರೆ ಕಡಿಮೆ ಅನುದಾನವಿದ್ದ ಕಾರಣ ಅದು ಪೂರ್ಣಗೊಂಡಿಲ್ಲ.
1921 ರಲ್ಲಿ ಪ್ರಾಥಮಿಕ ಶಾಲೆ ಆರಂಭಗೊಂಡಿತು. ಮುನ್ಸಿಪಲ್ ಶಾಲೆಯೆಂದೇ ಪ್ರಸಿದ್ದವಾದ ಈ ಶಾಲೆಯಲ್ಲಿ 5 ರಿಂದ 7 ನೇ ತರಗತಿಯವರೆಗೆ ಹೆಚ್ಚು ಮಕ್ಕಳಿದ್ದರು. ನಂತರ 1944 ರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರಿಂದ ಅಲ್ಲಿಯೇ ಪ್ರೌಢಶಾಲೆ ಆರಂಭವಾಯಿತು. ತರುವಾಯ 1984 ರಲ್ಲಿ ಪ್ರೌಢಶಾಲೆ ಉನ್ನತೀಕರಣಗೊಳಿಸಿ ಕಾಲೇಜು ಆರಂಭಿಸಲಾಯಿತು. ಈಗ 2008 ರಲ್ಲಿ ಪ್ರಾಥಮಿಕ ಶಾಲೆ ಬಂದಾಗಿದೆ. ಕೇವಲ 8 ರಿಂದ 10 ನೇ ತರಗತಿಯವರೆಗೆ ಪ್ರಾಢಶಾಲೆ ಮಾತ್ರವಿದೆ ಅಲ್ಲಿ ಮೂಲಭೂತ ಸೌಕರ್ಯ ಮತ್ತು ವಿದ್ಯಾರ್ಥಿಗಳ ಕೊರತೆ ಎದುರಿಸುವಂತಾಗಿದೆ. ಪ್ರಸ್ತುತ 18 ಬೋಧಕ 6 ಜನ ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎನ್.ಸಿ.ಮುದಕವಿ, ಉಪ ಪ್ರಾಚಾರ್ಯ, ಬಾಲಕರ ಸರ್ಕಾರಿ ಪ್ರೌಢಶಾಲೆ, ಗುಳೇದಗುಡ್ಡಗ್ರಾಮೀಣ ಪ್ರದೇಶವಾದ ಪರ್ವತಿ, ಹುಲ್ಲಿಕೇರಿ, ಕೋಟೆಕಲ್ ಗ್ರಾಮಗಳಲ್ಲಿ ಸರ್ಕಾರ ಪ್ರೌಢ ಶಾಲೆ ಆರಂಭಿಸಿದ್ದರಿಂದ ಪಟ್ಟಣದಲ್ಲಿ ಆಂಗ್ಲಮಾದ್ಯಮ ಶಾಲೆಗಳು ಆರಂಭವಾದ್ದರಿಂದ ಮಕ್ಕಳ ಕೊರತೆ ಎದುರಾಗಿದೆ. ಬಸವರಾಜ ದಳವಾಯಿ ,ಉಪಾಧ್ಯಕ್ಷ, ಎಸ್ಡಿಎಂಸಿ, ಬಾಲಕರ ಸರ್ಕಾರಿ ಪ್ರೌಢಶಾಲೆ, ಗುಳೇದಗುಡ್ಡಮೂಲಭೂತ ಸೌಕರ್ಯ ಒದಗಿಸಲು ಶಾಸಕರಿಗೆ ಮನವಿ ಮಾಡಲಾಗಿದೆ. ಅಭಿವೃದ್ಧಿಯ ಭರವಸೆ ನೀಡಿದ್ದು ಏನೇನಾಗಲಿದೆ ಎಂಬೊದನ್ನು ಕಾದು ನೋಡಬೇಕಿದೆ
ಸುದ್ದಿ ಸಂತೆ ನ್ಯೂಸ್ ಗುಳೇದಗುಡ್ಡ…..



