This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ಕ್ರಿಕೆಟ್ ಬೆಟ್ಟಿಂಗ್ ದಂಧೆಕೊರರಿಗೆ ಶಾಕ್ ನೀಡಿದ ಲೇಡಿ ಸಿಂಗಂ ರೇಣುಕಾ ಸುಕುಮಾರ – ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವರಿಗೆ ಎಡೆಮೂರಿ ಕಟ್ಟಿದ ಮಾರುತಿ ಗುಳ್ಳಾರಿ ನೇತ್ರತ್ವದಲ್ಲಿನ ಸಿಸಿಬಿ ಟೀಮ್…..

WhatsApp Group Join Now
Telegram Group Join Now

ಹುಬ್ಬಳ್ಳಿ

ಕ್ರಿಕೆಟ್ ಬೆಟ್ಟಿಂಗ್ ದಂಧೆಕೊರರಿಗೆ ಶಾಕ್ ನೀಡಿದ ಲೇಡಿ ಸಿಂಗಂ ರೇಣುಕಾ ಸುಕುಮಾರ – ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವರಿಗೆ ಎಡೆಮೂರಿ ಕಟ್ಟಿದ ಮಾರುತಿ ಗುಳ್ಳಾರಿ ನೇತ್ರತ್ವದಲ್ಲಿನ ಸಿಸಿಬಿ ಟೀಮ್

ಒಂದು ಕಡೆಗೆ ವಿಶ್ವಕಪ್ ಕ್ರಿಕೆಟ್ ಹವಾ ಮತ್ತೊಂದು ಕಡೆಗೆ ಜೋರಾಗಿದೆ ಬೆಟ್ಟಿಂಗ್ ದಂಧೆ.ಹೌದು ಕದ್ದು ಮುಚ್ಚಿ ಬೆಟ್ಟಿಂಗ್ ದಂಧೆ ಯಲ್ಲಿ ತೋಡಗಿದ್ದವರಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪೊಲೀಸರು ಶಾಕ್ ನೀಡಿದ್ದಾರೆ. ಲೇಡಿ ಸಿಂಗಂ ರೇಣುಕಾ ಸುಕುಮಾರ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸರು ಅಖಾಡಕ್ಕಿಳಿದು ದಂಧೆಕೊರರನ್ನು ಬಂಧನ ಮಾಡಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಅಂದರೆ ಮೊದಲು ಕಾಣಿಸಿ ಕೊಳ್ಳೊದು ವಾಣಿಜ್ಯ ನಗರಿ ಹುಬ್ಬಳ್ಳಿ ಹೆಸರು ಮೊದಲು.ಬೆಟ್ಟಿಂಗ್ ನ ಎಲ್ಲಾ ಆಳ,ಅಗಲ,ಉದ್ದ ಎಲ್ಲವನ್ನೂ ಸಂಪೂರ್ಣವಾಗಿ ಸರ್ವೇಮಾಡಿರುವ ಖಡಕ್ ಲೇಡಿ ಸಿಂಗಂ ರೇಣುಕಾ ಸುಕುಮಾರ ಬೆಟ್ಟಿಂಗ್ ಕುಳಗಳ ಹೆಡಮುರಿ ಕಟ್ಟಲು ಸಜ್ಜಾಗಿ ದ್ದಾರೆ.

ಇವರ ನಿರ್ದೇಶನದಂತೆ ಹುಬ್ಬಳ್ಳಿ ಧಾರವಾಡದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರನ್ನು ಹೆಡಮೂರಿ ಕಟ್ಟಿ ಬೆಟ್ಟಿಂಗ್ ದಂಧೆ ಕೋರರಿಗೆ ನಡುಕ ಹುಟ್ಟಿಸಿದ್ದಾರೆ ರೇಣುಕಾ ಸುಕುಮಾರ ನೇತ್ರತ್ವದಲ್ಲಿ ಪೊಲೀಸರ ಟೀಮ್. ಧಾರವಾಡ ಶಹರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ಹಾಗೂ ಹುಬ್ಬಳ್ಳಿಯ ಕಸಬಾ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಇಬ್ಬರನ್ನು ಬಂಧನ ಮಾಡಲಾಗಿದೆ. ಧಾರವಾಡದ ಮಹ್ಮದ ಶರೀಫ.ನಧಾಫ ಹಾಗೂ ಹುಬ್ಬಳ್ಳಿಯ ಸಿರಾಜ್ ಅಹ್ಮದ್ ಮುಲ್ಲಾ ಮತ್ತು ಸಮೀರ್ ತರಗಾರ ಮೇಲೆ ಬೆಟ್ಟಿಂಗ್ ಪ್ರಕರಣ ದಾಖಲಿಸಿದ್ದಾರೆ.

ಆರೋಪಿತರಿಂದ ನಗದು ಹಣ,ಮೊಬ್ಯೆಲ್ ಹಾಗೂ ಬೆಟ್ಟಿಂಗ್ ಗೆ ಬಳಸಿದ ಇನ್ನಿತರ ವಸ್ತಗ ಳನ್ನು ವಶಪಡಿಸಿಕೊಂಡಿದ್ದಾರೆ.ಹುಬ್ಬಳ್ಳಿಯಲ್ಲಿ ಬೇರು ಮಟ್ಟದಿಂದ ಬೆಟ್ಟಿಂಗ್ ದಂಗೆಯನ್ನು ಕಿತ್ತೊಗೆಯಲು ಪಣ ತೊಟ್ಟಿರುವ ಲೇಡಿ ಸಿಂಗಂ ಬೆಟ್ಟಿಂಗ್ ಗೆ ಸಂಭಂದಿಸಿದಂತೆ ಪೋಲೀಸ ಅಧಿಕಾರಿಗಳ ಸಭೆ ನಡೆಸಿ ಕಟ್ಟು ನಿಟ್ಟಿನ ಸೂಚನೆ ಕೊಟ್ಟಿದ್ದಾರಂತೆ.

ಹುಬ್ಬಳ್ಳಿಯಲ್ಲಿ ಲೇಡಿ ಕಮೀಷನರ್ ಏನ್ಮಾಡ್ತಾರೆ ಅನ್ನಕೊಳ್ಳುವವರಿಗೆ ಮುಟ್ಟಿ ನೋಡಿಕೊಳ್ಳು ವಂತೆ ಮಾಡುತ್ತಿದ್ದಾರೆ ಖಡಕ್ ಪೋಲೀಸ್ ಆಯುಕ್ತರು ಪೊಲೀಸ್ ಆಯುಕ್ತರ ಮಾರ್ಗ ದರ್ಶನದಲ್ಲಿ ಇನ್ಸ್ಪೆಕರ್ ಮಾರುತಿ ಗುಳ್ಳಾರಿ. ಎಎಸ್ ಐ ಲಂಗೋಟಿ,ಸಿಬ್ಬಂದಿಗಳಾದ ಭಜಂತ್ರಿ,  ಬೆಳಗಾವಿ.ಹಳೇಮನಿ,ಸಂತೋಷ,ಸೇರಿದಂತೆ ಹಲವು ಸಿಬ್ಬಂದಿಗಳು ಈ ಒಂದು ಕಾರ್ಯಾಚ ರಣೆಯಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk