ಚಿಕ್ಕನಾಯಕನಹಳ್ಳಿ –
ಲೋಕಾಯುಕ್ತ ಬಲೆಗೆ ಬಿದ್ದ ಲೇಡಿ ತಹಶೀಲ್ದಾರ್ ಲಂಚ ತಗೆದುಕೊಳ್ಳುವಾಗ ಲಾಕ್ ಮಾಡಿದ ಲೋಕಾಯುಕ್ತ ಟೀಮ್ ಹೌದು
ಭೂಪರಿವರ್ತನೆಗಾಗಿ ತಹಶೀಲ್ದಾರ ರೊಬ್ಬರು 3 ಲಕ್ಷ ರೂಪಾಯಿ ಹಣವನ್ನು ತಗೆದುಕೊಳ್ಳುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ತುಮಕೂರಿ ನಲ್ಲಿ ನಡೆದಿದೆ.ಹೌದು ಜಮೀನನ್ನು ಭೂ ಪರಿವರ್ತನೆ ಮಾಡಿಕೊಡಲು ₹30 ಸಾವಿರ ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಗೀತಾ ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ.
ತಾಲ್ಲೂಕಿನ ಗೋಡೆಕೆರೆ ಗ್ರಾಮದ ರೈತ ಮಲ್ಲಿಕಾ ರ್ಜುನ್ ಅವರಿಗೆ ಸೇರಿದ 33 ಗುಂಟೆ ಜಮೀನನ್ನ ಭೂ ಪರಿವರ್ತನೆ ಮಾಡಿಕೊಡಲು ₹3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಮುಂಚಿತವಾಗಿ ₹20 ಸಾವಿರ ಹಣ ಪಡೆದಿದ್ದರು.ಮತ್ತೆ ₹30 ಸಾವಿರ ಹಣ ತೆಗೆದುಕೊಳ್ಳುವಾಗ ತಮ್ಮ ಮನೆಯಲ್ಲಿಯೇ ಸಿಕ್ಕಿಬಿದ್ದಿದ್ದಾರೆ.ತುಮಕೂರು ಲೋಕಾಯುಕ್ತ ಡಿವೈಎಸ್ ಪಿ ರಾಮಕೃಷ್ಣ ನೇತೃತ್ವದಲ್ಲಿ
ಇನ್ಸ್ ಪೆಕ್ಟರ್ ಗಳಾದ ರಾಮರೆಡ್ಡಿ, ಸುರೇಶ್ ಗೌಡ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆದಿದ್ದು ಸಧ್ಯ ಗೀತಾ ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ಮಾಡ್ತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ತುಮಕೂರು…..