ಕುಂದಗೋಳ –
ತುಮಕೂರು ಸಿದ್ದಗಂಗಾ ಮಠದಲ್ಲಿ ತ್ರಿವಿಧ ದಾಸೋಹಿ ಶ್ರೀ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಶಾಂತ್ ಕಲ್ಲೂರ್ ಹೇಳಿದರು. ವೀರಶೈವ ಲಿಂಗಾಯತ ವೇದಿಕೆ ವತಿಯಿಂದ ಕಾರ್ತಿಕ ಮಾಸದ ಅಂಗವಾಗಿ ಕೊನೆಯ ಸೋಮವಾರ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮಠದಲ್ಲಿ ತ್ರಿವಿದ ದಾಸೋಹಿ ಶ್ರೀ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ಲಕ್ಷ ಪುಷ್ಪ ಬಿಲ್ವಾರ್ಚನೆ ಮಾಡಲಾಗುತ್ತದೆ . ಸೋಮವಾರ ರಂದು ಮುಂಜಾನೆ 5.ಗಂಟೆಗೆ ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ಲಕ್ಷ ಪುಷ್ಪ ಬಿಲ್ವಾರ್ಚನೆ ಜರುಗುವುದು ಮಧ್ಯಾಹ್ನ12:00 ಗಂಟೆಗೆ ಮಹಾಮಂಗಳಾರತಿ ಕಾರ್ಯಕ್ರಮ ಜರುಗುವುದು ಕಾರ್ಯಕ್ರಮದಲ್ಲಿ ಭಕ್ತರು ಆಗಮಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.
ಇನ್ನೂ ಕೋವಿಡ್ 19 ಇರುವುದರಿಂದಾಗಿ ಸಾಮಾಜಿಕ ಅಂತರ ಮುಂಜಾಗ್ರತಾ ಕ್ರಮವಾಗಿ ಮಠದಲ್ಲಿ ನಿರ್ದಿಷ್ಟ ಸಂಖ್ಯೆಯಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಉಳಿದವರು ಪಾಲ್ಗೊಳ್ಳಲು ಆಗದಿರುವುದಕ್ಕಾಗಿ ಅವರ ಅನುಕೂಲಕ್ಕಾಗಿ ಕಾರ್ಯಕ್ರಮದ ಎಲ್ಲಾ ಪೂಜಾ ಕಾರ್ಯಕ್ರಮದಲ್ಲಿ ಎಲ್ಲವನ್ನು ಭಕ್ತರು ಯುಟ್ಯೂಬ್ ಚಾನೆಲ್ ಆನ್ಲೈನ್ ಮೂಲಕ ನೇರ ಪ್ರಸಾರವನ್ನು ವೀಕ್ಷಿಸಬಹುದು
ಭಕ್ತರು ಯೂಟ್ಯೂಬ್ ಚಾಲನೆ ಲೈವ್ ವೀಕ್ಷಿಸಲು. https:ll www.youtube.com / vlyvedike ಲಿಂಕ್ ಪಡೆಯಬಹುದು ಎಂದು ಧಾರವಾಡ ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆಯ ಅಧ್ಯಕ್ಷರಾದ ಮಂಜುನಾಥ ಶಿವಕ್ಕನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.