ಬೆಂಗಳೂರು –
ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಶಂಕರನ್ ಕೋವಿಲ್ ನ ಕೆ ಧನಲಕ್ಷ್ಮಿ ಎಂಬುವವರು ತಮ್ಮ ಮನೆಯವರಿಂದಲೂ ದೂರವಿದ್ದುಕೊಂಡು ಬೆಂಗಳೂರಿನಲ್ಲಿ ಸರ್ಕಾರಿ ಅನುದಾ ನಿತ ಶಾಲೆಯಲ್ಲಿ ತಮಿಳು ಶಿಕ್ಷಕಿಯಾಗಿ ಕಾರ್ಯನಿರ್ವಹಿಸು ತ್ತಿದ್ದಾರೆ.ಆದರೆ 4 ವರ್ಷಗಳಿಂದ ಒಂದೇ ಒಂದು ತಿಂಗಳ ವೇತನವೂ ಸಿಕ್ಕಿಲ್ಲ.ಧನಲಕ್ಷ್ಮಿ ಅವರು ಯಶವಂತ ಪುರದ ಠಾಗೋರ್ ಮೆಮೊರಿಯಲ್ ಪ್ರೌಢಶಾಲೆಯಲ್ಲಿ ತಮಿಳು ಭಾಷೆಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮಿಳು ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಎಡ್ ಡಿಗ್ರಿ ಹೊಂದಿರುವ ಧನಲಕ್ಷ್ಮಿ 2017 ರಲ್ಲಿ ನವೆಂ ಬರ್ 29 ರಂದು ತಮಿಳು ಪಂಡಿತ್ ಆಗಿ ನೌಕರಿ ಪಡೆದರು.

ಬೆಂಗಳೂರಿನ ಉತ್ತರ ಪ್ರಾಂತ್ಯ-1 ರ ಸಾರ್ವಜ ನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅನುಮೋದನೆ ಪಡೆದ ಬಳಿಕ ನಿಮ್ಮ ವೇತನ ನಿಗದಿಯಾಗಲಿದ್ದು ಪಡೆಯಬಹು ದಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.ಸಮಸ್ಯೆಯಾ ಗಿರುವುದು ಇಲ್ಲೆಯೇ.2015 ರಲ್ಲೇ ಈ ಶಾಲೆಯೂ ಸೇರಿ ದಂತೆ ಕೆಲವು ಶಾಲೆಗಳಲ್ಲಿ ಖಾಲಿ ಇದ್ದ ಹುದ್ದೆಗಳಿಗೆ ನೇಮ ಕಾತಿ ಮಾಡುವುದಕ್ಕಾಗಿ ಸರ್ಕಾರ ಅನುಮೋದನೆ ನೀಡಿತ್ತು ಆದರೆ ನಿರ್ದಿಷ್ಟ ಹುದ್ದೆಗಳಿಗೆ ನೇಮಕವಾಗಿರುವ ವ್ಯಕ್ತಿಗಳ ನೇಮಕಾತಿಯನ್ನು ಸರ್ಕಾರ ಇನ್ನೂ ಅನುಮೋದಿಸಿಲ್ಲ. ಇಲ್ಲಿನ ಹಾಸ್ಟೆಲ್ ನಲ್ಲಿಯೇ ಧನಲಕ್ಷ್ಮಿ ಅವರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ ಹಾಗೂ ಶಾಲಾ ಆಡಳಿತ ಮಂಡಳಿ ಯಿಂದಲೇ ಆಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ನನಗೆ ಬೇರೆಲ್ಲದಕ್ಕಿಂತಲೂ ವೇತನ ಬಹಳ ಮುಖ್ಯವಾಗಿದೆ. ಒಂದು ದಿನ ವೇತನ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಈ ಉದ್ಯೋಗಕ್ಕಾಗಿ ನಾನು ಬಹಳಷ್ಟು ತ್ಯಾಗ ಮಾಡಿದ್ದೇನೆ ಮಧ್ಯವರ್ತಿಯ ಮೂಲಕ ಉದ್ಯೋಗ ಪಡೆಯುವುದಕ್ಕಾಗಿ ನಾನು 2.9 ಲಕ್ಷ ರೂಪಾಯಿಗಳನ್ನು ಈ ವರೆಗೂ ಖರ್ಚು ಮಾಡಿದ್ದೇನೆ ಎಂದು ಧನಲಕ್ಷ್ಮಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.