MR ಪಾಟೀಲ ಪರವಾಗಿ ಪ್ರಚಾರ ಮಾಡಿದ ಸೊಸೆ ಜಯಶ್ರೀ ಪಾಟೀಲ – ಮನೆಯ ಮಗನಂತಿರುವ MR ಗೆಲುವಿನ ಕರೆಗೆ ಸಾಥ್ ನೀಡಿದ ಲಾಲ್ ಸಾಬ್ ನಧಾಫ್ ಮತ್ತು ಟೀಮ್…..

Suddi Sante Desk
MR ಪಾಟೀಲ ಪರವಾಗಿ ಪ್ರಚಾರ ಮಾಡಿದ ಸೊಸೆ ಜಯಶ್ರೀ ಪಾಟೀಲ – ಮನೆಯ ಮಗನಂತಿರುವ MR ಗೆಲುವಿನ ಕರೆಗೆ ಸಾಥ್ ನೀಡಿದ ಲಾಲ್ ಸಾಬ್ ನಧಾಫ್ ಮತ್ತು ಟೀಮ್…..

ಕುಂದಗೋಳ

ಕ್ಷೇತ್ರದ ಮನೆ ಮಗನಂತಿರುವ ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಆರ್ ಪಾಟೀಲ್ ಅವರನ್ನು ಬಹುಮತಗಳ ಅಂತರ ದಿಂದ ಗೆಲ್ಲಿಸಿ ವಿಧಾನ ಸಭೆಗೆ ಆಯ್ಕೆ ಮಾಡಿ ಕಳಿಸುವಂತೆ ಎಂ.ಆರ್ .ಪಾಟೀಲ ಅವರ ಸೊಸೆ ಯಾದ ಜಯಶ್ರೀ ಪಾಟೀಲ್ ಮನವಿ ಮಾಡಿದರು

ಕ್ಷೇತ್ರದ ಕಡಪಟ್ಟಿ, ಅಲ್ಲಾಪೂರ, ಚಿಕ್ಕನರ್ತಿ ಸೇರಿ ದಂತೆ ಮುಂತಾದ ಗ್ರಾಮಗಳಲ್ಲಿ ಪಕ್ಷದ ನೂರಾರು ಕಾರ್ಯಕರ್ತರ ಜೊತೆಗೂಡಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಬಳಿಕ ಮಾತನಾಡಿದ ಅವರು ಕುಂದಗೋಳ ಕ್ಷೇತ್ರದ ಬಗ್ಗೆ ಎಮ್.ಆರ್.ಪಾಟೀಲ ತಮ್ಮದೇ ಆದ ಕನಸುಗಳನ್ನು ಇಟ್ಟುಕೊಂಡಿದ್ದಾರೆ ಅವರ ಕನಸುಗಳನ್ನು ನನಸಾಗಬೇಕಾದರೇ ಈ ಬಾರಿ ಮತದಾರರು ಬಿಜೆಪಿ ಅಭ್ಯರ್ಥಿಗೆ ಆರ್ಶೀವಾದ ಮಾಡಬೇಕು ಎಂದು ವಿನಂತಿಸಿದರು.

ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಟಿ.ಜಿ. ಬಾಲಣ್ಣವರ ಮಾತನಾಡಿ, ಎಮ್.ಆರ್.ಪಾಟೀಲ ಅವರು ಸೌಮ್ಯ ಸ್ವಭಾವದವರು.ಯಾರೇ ಕಷ್ಟ ಎಂದು ಬಂದರೆ ಅವರಿಗೆ ಕೈಲಾದ ಸಹಾಯ ಮಾಡದೇ ಹಾಗೇ ಕಳಿಸದ ಗುಣದವರು ಅವರು ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಅಧಿಕಾರವಿ ಲ್ಲದೇ ಶ್ರಮಿಸಿದ್ದಾರೆ.

ಇದೀಗ ಅಧಿಕಾರ ಕೊಟ್ಟರೇ ಕುಂದಗೋಳ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಇದೊಂದು ಬಾರಿ ಮತದಾರರು ಎಂ.ಆರ್‌.ಪಾಟೀಲ ಅವರಿಗೆ ಅವಕಾಶ ಮಾಡಿ ಕೊಟ್ಟರೇ, ಕ್ಷೇತ್ರದ ಮಗನಾಗಿ ಅವರು ಕೆಲಸ ಮಾಡುವ ವಾಗ್ದಾನ ಮಾಡಿದ್ದಾರೆ.

ಮತದಾರರು ಸಕಾರಾತ್ಮಕವಾಗಿ ಸ್ಪಂದಿಸಿ ಈ ಬಾರಿ ಕುಂದಗೋಳ ಮತಕ್ಷೇತ್ರದಿಂದ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರೋಣಾ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುಮಿತ್ರ ಪಾಟೀಲ್ ಮಧು ಪಾಟೀಲ್ ಶಶಿಕಲಾ ಪಾಟೀಲ್ ಕಾವ್ಯ ಪಾಟೀಲ್ ತಾಲೂಕ ಬಾಜಾಪ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಲಾಲಸಾಬ ನದಾಫ (ಅಪ್ಪಣ್ಣ ) ಕಲ್ಮೇಶ ಬೆಳವಟಿಗಿ ಮಂಜುನಾಥ ಶಾನವಾಡ ಮಂಜು ನಾಥ್ ಸೊರಟೂರ ಗುರುಪಾದ ಸ್ವಾದಿ ಮಂಜುನಾಥ್ ಸಂಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು……

 

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.