ಕಲಬುರಗಿ –
ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳು ಒಂದೊಂದೇ ಬೆಳಕಿಗೆ ಬರುತ್ತಿದ್ದಂತೆಯೇ ಆಘಾತಕಾರಿ ಘಟನೆಗಳು ಕೂಡಾ ಈ ಒಂದು ತನಿಖೆ ಯಿಂದಲೂ ಹೊರಬರುತ್ತಿವೆ.ಮಗ ಪಿಎಸ್‌ಐ ಆಗುತ್ತಾನೆಂದು ತಂದೆ ಮನೆ,ಸೈಟು ಮಾರಿ 50 ಲಕ್ಷ ರೂಪಾಯಿ ಲಂಚ ಕೊಟ್ಟು, ದುಡ್ಡು ಇಲ್ಲದೇ,ಕೆಲಸವೂ ಇಲ್ಲದೇ ಗೋಳಾಡುವ ಸ್ಥಿತಿ ಶರಣಪ್ಪ ಎನ್ನುವವರಿಗೆ ಬಂದಿದೆ.ಮಗ ಪ್ರಭು ಪಿಎಸ್ಐ ಆಗಲಿ ಎನ್ನುವ ಕಾರಣಕ್ಕೆ ಎಲ್ಲವನ್ನೂ ಮಾರಿ ಇದೀಗ ಬೀದಿಗೆ ಬಂದದ್ದೂ ಅಲ್ಲದೇ,ಅಕ್ರಮದಲ್ಲಿ ಭಾಗಿಯಾಗಿ ರುವ ಆರೋಪದ ಮೇಲೆ ತಂದೆ-ಮಗನನ್ನು ವಶಕ್ಕೆ ಪಡೆ ಯಲಾಗಿದೆ.
ಆಡಿಟರ್ ಚಂದ್ರಕಾಂತ್ ಕುಲಕರ್ಣಿ ಮುಖಾಂತರ ಅಕ್ರಮ ದಲ್ಲಿ ಭಾಗಿಯಾಗಿರುವ ಆರೋಪಿ ಆರ್.ಡಿ. ಪಾಟೀಲ್ ಅವರಿಗೆ ಇವರು ಹಣ ನೀಡಿದ್ದರು.ಇರೋ ಮನೆ ಮಾರಿ ಬಾಡಿಗೆ 50 ಲಕ್ಷ ಹಣ ನೀಡಿ ಬಾಡಿಗೆ ಮನೆಯಲ್ಲಿದ್ದರು ಶರಣಪ್ಪ.
ಎಮ್.ಎಸ್.ಇರಾಣಿ ಪದವಿ ಕಾಲೇಜು ಪರೀಕ್ಷೆ ಕೇಂದ್ರದಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಆರೋಪದಡಿ ಅಭ್ಯರ್ಥಿ ಪ್ರಭು ಹಾಗೂ ಈತನ ತಂದೆ ಶರಣಪ್ಪ ಅವರಿಂದ 50 ಲಕ್ಷ ರೂಪಾಯಿ ಹಣ ಪಡೆದು ಅಕ್ರಮಕ್ಕೆ ಸಹಕರಿಸಿದ ಆರೋಪದಲ್ಲಿ ಚಂದ್ರಕಾಂತ್ ಕುಲಕರ್ಣಿ ಅವರನ್ನು ಸಿಐಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಆರ್.ಡಿ.ಪಾಟೀಲ್ ಸಹಕಾರದಿಂದ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮ ಎಸಗಿರುವ ಶಂಕೆ ವ್ಯಕ್ತವಾಗಿದೆ.