ಧಾರವಾಡ –
ಭಾಷಾ ಅಲ್ಪಸಂಖ್ಯಾತ ಪ್ರಾಥಮಿಕ ಶಾಲಾ ಕನ್ನಡ ಶಿಕ್ಷಕರ ಸಂಘದಿಂದ 12 ರ ಪ್ರೀಡಂ ಪಾರ್ಕ್ ಹೋರಾಟಕ್ಕೆ ಬೆಂಬಲ ಹೌದು ಎಲ್ಲಾ ಇಲಾಖೆಗಳ ಎಲ್ಲ ನಿಯಮಗಳಲ್ಲಿ ಸೇವಾನಿರತ ನೌಕರರ ಪರಿಶ್ರಮ,ಅನುಭವ,ಜ್ಞಾನ ಹಾಗೂ ಸೇವಾಹಿರಿತ. ನಕ್ಕೆ ಉತ್ಕೃಷ್ಠ ಗೌರವವನ್ನು ನೀಡಿ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುತ್ತದೆ.
ಆದರೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಮ್ಮಲ್ಲಿ ಮಾತ್ರ ವಿಚಿತ್ರ ಅಲ್ಲವೇ 1-8 ಕ್ಕೆ ನೇಮಕಗೊಂಡು 25-30 ವರ್ಷಗಳಿಂದ ಬೋಧಿಸುತ್ತಿದ್ದ ಹಾಗೂ B.A/B.Sc/B.Ed/M.A/M.Sc/M.Ed/Ph.D ನಂತಹ ಗರಿಷ್ಠ ವಿದ್ಯಾರ್ಹತೆ ಹೊಂದಿದ್ದರೂ, PST ಎಂಬ ಹಣೆಪಟ್ಟಿ ಕಟ್ಟಿ, ಅನರ್ಹರು ಎಂದು ಅವಮಾನಿಸಿ.
1-5 ಕ್ಕೆ ಹಿಂಬಡ್ತಿ ನೀಡಿ, ನಮ್ಮೆಲ್ಲ ಹಕ್ಕುಗಳನ್ನು ಕಸಿದುಕೊಂಡು ನಮ್ಮ ಮನೋಬಲವನ್ನು ಕುಗ್ಗಿಸಿದ್ದು ಮಾತ್ರ ಇತಿಹಾಸದಲ್ಲಿ ದಾಖಲಾದ ಕರಾಳ ಅಧ್ಯಾಯವಲ್ಲವೇನ್ಯಾಯಯುತವಾಗಿ ದೊರಕಬೇಕಾದ ನಮ್ಮ ಹಕ್ಕುಗಳನ್ನು, ಸೌಲಭ್ಯ ಗಳನ್ನು ಯಾರಿಂದಲೂ ಕಸಿದುಕೊಳ್ಳಲು ಸಾದ್ಯವಿಲ್ಲ
ಅದನ್ನು ಪಡೆದೇ ಪಡೆಯುತ್ತೇವೆ ಎಂಬ ಚಲದೊಂದಿಗೆ ಹೋರಾಟದಲ್ಲಿ ನಾವೆಲ್ಲರೂ ಒಂದಾಗಿ ಹೆಜ್ಜೆ ಇಡೋಣ…ಜಯ ನಿಶ್ಚಿತ ಬನ್ನಿ ಎಲ್ಲರೂ ಎಲ್ಲ ಹಂತದ ಹೋರಾಟದಲ್ಲಿ ಪಾಲ್ಗೊಂಡು ಒಕ್ಕೊರಲಿನಿಂದ ನ್ಯಾಯ ಕೇಳೋಣ ಎನ್ನುತ್ತಾ ಈ ಒಂದು ಹೋರಾಟಕ್ಕೆ ಭಾಷಾ ಅಲ್ಪಸಂಖ್ಯಾತ ಪ್ರಾಥಮಿಕ ಶಾಲಾ ಕನ್ನಡ ಶಿಕ್ಷಕರ ಸಂಘವು ಬೆಂಬಲ ವನ್ನು ಘೋಷಣೆ ಮಾಡಲಾಗಿದೆ.
12 ನೇ ತಾರೀಖಿನ ಹೋರಾಟ ಲಕ್ಷಾಂತರ ಶಿಕ್ಷಕರ ಸ್ವಾಭಿಮಾನದ ಹೋರಾಟ, ನ್ಯಾಯ ಅನ್ಯಾಯ ಗಳ ನಡುವಿನ ಮಹಾ ಸಮರ, ಅದು ಮಾಡು ಇಲ್ಲವೇ ಮಡಿ ಎಂಬ ಹೋರಾಟದಂತಿರಲಿ.. ನಮ್ಮ ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ಜಗ್ಗದಿರೋಣ ಈ ಹೋರಾಟ ತೋರಿಕೆಗೆ ಆಗದೆ ನಾಯಕರನ್ನ ನಂಬಿದ 90 ಸಾವಿರ ಪದವೀಧರ pst ಶಿಕ್ಷಕರಿಗೆ ನ್ಯಾಯ ದೊರೆಯುವಂತಾಗಲಿ
2016-17 ಕ್ಕೆ C and R ಬಂದಿದ್ದು ಇಲ್ಲಿವರೆಗೂ ನಾವು ನಿದ್ರೆ ಮಪ್ಪರಿನಲ್ಲಿ ಇದ್ದದ್ದು ನಮ್ಮ ದೌರ್ಬಲ್ಯವೋ,ನಮ್ಮ ಸೌಭಾಗ್ಯವೋ ನಮಗೇನು ತಿಳಿಯದು ಈ ಹೋರಾಟದಿಂದ ನ್ಯಾಯ ಸಿಗುವ ಬಗ್ಗೆ ನಮಗೆ ವಿಶ್ವಾಸ ಇದೆ but ಎಲ್ಲೋ ಸ್ವಲ್ಪ ಅನುಮಾನ ಕಾಡುತ್ತಿದೆ. ಯಾಕೆಂದರೆ 8 ವರ್ಷ ಸುಮ್ಮನೆ ಇದ್ದವರು ನಾವು ಈಗ ಎಚ್ಚೆತ್ತುಕೊಂಡಿದ್ದೇವೆ ಎಂದರೆ.
ಏನೇ ಇರಲಿ ನಾವೆಲ್ಲರೂ 12 ಆಗಸ್ಟ 2024 ಕ್ಕೆ ಬೆಂಗಳೂರ ಹೋರಾಟಕ್ಕೆ ಹೋಗೋಣ. ನ್ಯಾಯ ಕೇಳೋಣ ಮುಂದಿನ ದಿನಗಳಲ್ಲಿ ರಾಜ್ಯ ಜಿಲ್ಲಾ ತಾಲೂಕ ಪ್ರತಿನಿದಿಗಳ ಹೇಗೆ ಹೆಜ್ಜೆ ಹಾಕುತ್ತಾರೋ ಹಾಗೆ ಮುಂದಡಿ ಇಡೋಣ . Be positive
ಸುದ್ದಿ ಸಂತೆ ನ್ಯೂಸ್ ಧಾರವಾಡ…..