ಕೊನೆಯ ಕ್ಷಣದಲ್ಲಿ ವಿಧಾನ ಪರಿಷತ್ ಗೆ BJP ಅಭ್ಯರ್ಥಿಗಳ ಟಿಕೆಟ್ ಘೋಷಣೆ – ವಿಜಯೇಂದ್ರ,ಲಿಂಗರಾಜ ಪಾಟೀಲ್ ಗೆ ಕೈ ತಪ್ಪಿದ ಟಿಕೇಟ್ ನಾಲ್ವರಿಗೆ ಟಿಕೆಟ್…..

Suddi Sante Desk

ಬೆಂಗಳೂರು –

ವಿಧಾನ ಪರಿಷತ್ ಗೆ ಬಿಜೆಪಿ ಕೊನೆಯ ಕ್ಷಣದಲ್ಲಿ ಅಚ್ಚ ರಿಯ ರೀತಿಯಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ ಹೌದು ಕೊನೆಯ ಕ್ಷಣದಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ ಚುನಾವಣೆಗೆ ಅಚ್ಚರಿಯ ಹೆಸರನ್ನು ಪ್ರಕಟಿಸಲಾ ಗಿದೆ.ಮುಂಚೂಣಿಯಲ್ಲಿದ್ದಂತ ಹೆಸರುಗಳ ಹೊರತಾಗಿ ಕೊನೆಯ ಕ್ಷಣದಲ್ಲಿ ಎಸ್ ಕೇಶವ ಪ್ರಸಾದ್, ಲಕ್ಷ್ಮಣ್ ಸವದಿ,ಹೇಮಲತಾ ನಾಯಕ್ ಮತ್ತು ಛಲವಾದಿ ನಾರಾ ಯಣಸ್ವಾಮಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಪರಿಷತ್ ಚುನಾವಣೆಗೆ ಇಂದು ಮಧ್ಯಾಹ್ನ 3 ಗಂಟೆ ನಾಮಪತ್ರ ಸಲ್ಲಿಸಲು ಡೆಡ್ ಲೈನ್ ಆಗಿತ್ತು.ಹೀಗಾಗಿ ಕೊನೆಯ ಕ್ಷಣದವರೆಗೆ ಅಭ್ಯರ್ಥಿಗಳ ಹೆಸರು ಘೋಷಣೆ ಯನ್ನು ಸಸ್ಪೆನ್ಸ್ ಆಗೇ ಇಟ್ಟಿದ್ದಂತ ಬಿಜೆಪಿ ಹೈಕಮಾಂಡ್ ಇದೀಗ ಪಟ್ಟಿಯನ್ನು ಘೋಷಣೆ ಮಾಡಿದೆ.ಮಾಜಿ ಸಚಿವ ಲಕ್ಷ್ಮಣ್ ಸವದಿ,ಹೇಮಲತಾ ನಾಯಕ್,ಎಸ್ ಕೇಶವ ಪ್ರಸಾದ್ ಹಾಗೂ ಛಲವಾದಿ ನಾರಾಯಣಸ್ವಾಮಿಗೆ ಬಿಜೆಪಿಯಿಂದ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡಲಾಗಿದೆ.

ಅಲ್ಲದೇ ಪರಿಷತ್ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿ ದ್ದಂತ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರಕ್ಕೆ ಟಿಕೆಟ್ ನೀಡದೇ ಬಿಗ್ ಶಾಕ್ ನೀಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.