ಬೆಂಗಳೂರು –
ಒಂದೆಡೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶವಿಲ್ಲದಕ್ಕಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯದೆ ವಾಪಾಸಾಗುತ್ತಿದ್ದರೆ ಇನ್ನೊಂದೆಡೆ ಕರ್ನಾಟಕದ ಶಿಕ್ಷಣ ಸಚಿವರು ಪ್ರಚೋದನಾತ್ಮಕ ಹೇಳಿಕೆ ನೀಡುತ್ತಲೇ ಇದ್ದಾರೆ. ಈ ಮಧ್ಯೆ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳ ಸಂಘಟನೆಯಾದ ಅಖಿಲ ಭಾರತ ವಕೀಲರ ಸಂಘವು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಲೀಗಲ್ ನೊಟೀಸ್ ನೀಡಿದೆ.ಹೌದು ಸಮವಸ್ತ್ರ ನಿಯಮಗಳು ಮತ್ತು ಉಡುಪಿನ ಕುರಿತು ಕರ್ನಾಟಕ ಹೈಕೋರ್ಟ್‌ನ ಆದೇಶದ ಕುರಿತು ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದೆ ಹೀಗಾಗಿ ಬೋರ್ಡ್ ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಬಿಡುವುದಿಲ್ಲ ಎಂದು ಮಾರ್ಚ್ 28 ರಂದು ಸಚಿವರು ನೀಡಿದ್ದ ಹೇಳಿಕೆಯು ಮಾರ್ಚ್ 25 ರಂದು ಸರ್ಕಾರವೇ ಹೊರಡಿಸಿದ್ದ ಖಾಸಗಿ ಅಥವಾ ಸರ್ಕಾರಿ ಶಾಲೆ ಗಳು ನಿಗದಿಪಡಿಸಿದ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸಬೇಕು ಎಂಬ ಆದೇಶಕ್ಕೆ ವಿರುದ್ಧವಾಗಿದೆ ಎಂದು ಸಂಘ ಹೇಳಿದೆ.
ಇದರರ್ಥ ಶಾಲೆ ಅಥವಾ ಕಾಲೇಜು ಹಿಜಾಬ್ ಧರಿಸಲು ಅನುಮತಿಸಿದರೆ, ಆ ವಿದ್ಯಾರ್ಥಿಗಳು ಹಿಜಾಬ್ ಧರಿಸಬ ಹುದು.ಆದರೆ, ಸಚಿವ ಬಿ.ಸಿ.ನಾಗೇಶ್ ಯಾವುದೇ ಪರೀಕ್ಷಾ ಹಾಲ್‌ಗಳಲ್ಲಿ ಹಿಜಾಬ್‌ಗಳನ್ನು ಅನುಮತಿಸಲಾಗುವುದಿಲ್ಲ ಮತ್ತು ಹಿಜಾಬ್‌ಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಹಾಲ್‌ಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಹೇಳಿದ್ದರು.
ಸಚಿವರ ಹೇಳಿಕೆಯು ಸರ್ಕಾರದ ಆದೇಶವನ್ನು ಉಲ್ಲಂಘಿ ಸುವುದಲ್ಲದೆ ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶಕ್ಕೆ ವಿರುದ್ಧವಾಗಿದೆ ಎಂದು ಸಂಘ ಹೇಳಿದೆ.ತೀರ್ಪು ಹಿಜಾಬ್ ಮೇಲೆ ಪೂರ್ತಿ ನಿಷೇಧ ಹೇರಿಲ್ಲ.05.02.2022ರ G.O ಅನ್ನು ತೀರ್ಪು ಎತ್ತಿ ಹಿಡಿದಿದೆ.ಇದರ ಪ್ರಕಾರ ಸರ್ಕಾರ ಅಥವಾ ಖಾಸಗಿ ಶಾಲೆ ಗಳು ನಿಗದಿಪಡಿಸಿದ ಯಾವುದೇ ಸಮವಸ್ತ್ರಕ್ಕೆ ವಿದ್ಯಾರ್ಥಿ ಗಳು ಬದ್ಧವಾಗಿರಬೇಕು ಎಂದು ಮಾತ್ರ ನಿರ್ದಿಷ್ಟಪಡಿಸಿದೆ. ಹೀಗಾಗಿ ಬಿ.ಸಿ.ನಾಗೇಶ್ ಅವರಿಗೆ ಕಾನೂನು ನೋಟಿಸ್ ಕಳುಹಿಸಿ ಅದರಲ್ಲಿ ತಿಳಿಸಲಾಗಿದೆ.ಹೆಚ್ಚುವರಿಯಾಗಿ ತೀರ್ಪು ತರಗತಿಗೆ ಸೀಮಿತವಾಗಿದೆ ಮತ್ತು ಗೌರವಾನ್ವಿತ ಹೈಕೋರ್ಟ್ ಇದು ಮಹಿಳೆಯರ ಸ್ವಾಯತ್ತತೆಯನ್ನು ಅಥವಾ ಅವರ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವುದಿಲ್ಲ ಮತ್ತು ತರಗತಿಯ ಹೊರಗೆ ಅವರ ಆಯ್ಕೆಯ ಉಡುಪು ಧರಿಸಬಹುದು ಎಂದೂ ನೋಟಿಸ್ ನಲ್ಲಿ ಉಲ್ಲೇಖಿಸಲಾ ಗಿದೆ.ಪತ್ರದಲ್ಲಿ ಸಚಿವರ ಹೇಳಿಕೆಯನ್ನು ಬೇಜವಾಬ್ದಾರಿ ಮತ್ತು ತಪ್ಪುದಾರಿಗೆಳೆಯುವ ಹೇಳಿಕೆ ಎಂದು ಕರೆದಿದೆ ಮತ್ತು ಅದು ಅವರ ಸಾಂವಿಧಾನಿಕ ಪ್ರತಿಜ್ಞೆಯನ್ನು ಉಲ್ಲಂಘಿಸುತ್ತದೆ ಮತ್ತು ಕೋಮು ಸಂಘರ್ಷವನ್ನು ಉತ್ತೇಜಿಸುವಂತಿದೆ ಎಂದು ಹೇಳಿದೆ.ನಿಮ್ಮ ಹೇಳಿಕೆಗಳು ಅನಗತ್ಯ ಪರಿಣಾಮಗಳಿಗೆ ಕಾರಣವಾಗಿವೆ ಎಂದು ಹೇಳಿದ್ದು ಹಿಜಾಬ್‌ಧಾರಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡಿದ ಶಿಕ್ಷಕರನ್ನು ಅಮಾನತುಗೊ ಳಿಸಲಾಗಿದೆ ಎಂದು ಹೇಳಿದ್ದು ನಿಮ್ಮ ಹೇಳಿಕೆಗಳು ಹೈಕೋರ್ಟ್ ನೀಡಿದ್ದ ಆದೇಶದ ವ್ಯಾಪ್ತಿಯನ್ನು ಮೀರಿವೆ ಮತ್ತು ಮುಸ್ಲಿಂ ಹೆಣ್ಣು ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿವೆ ಎಂದು ಹೇಳಿ ನೋಟೀಸ್ ನೀಡಲಾಗಿದೆ. ಕರ್ನಾಟಕ ಹೈಕೋರ್ಟ್ ನ ತೀರ್ಪು ಮತ್ತು ಸರ್ಕಾರಿ ಆದೇಶಗಳನ್ನು ಉಲ್ಲಂಘಿಸುವುದರಿಂದ ತಮ್ಮ ಹೇಳಿಕೆ ಗಳನ್ನು ತಕ್ಷಣವೇ ಹಿಂಪಡೆಯುವಂತೆ AILAJ ಸಚಿವರನ್ನು ಕೇಳಿದೆ.ಈ ಬಗ್ಗೆ ಸ್ಪಷ್ಟನೆ ನೀಡುವಂತೆಯೂ ಸಚಿವರನ್ನು ಸಂಘ ಕೇಳಿಕೊಂಡಿದೆ.