ಗದಗ –
ಗದಗ ಜಿಲ್ಲೆಯಲ್ಲಿ ಜಿಲ್ಲಾ ಹಂತದ ಕಲಿಕಾ ಚೇತರಿಕೆ ಉಪಕ್ರಮ ಎರಡು ದಿನದ ತರಬೇತಿ ಕಾರ್ಯಕ್ರಮ.ಗದಗ ಜಿಲ್ಲೆಯ ಪಾಶ್ವನಾಥ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಬೋಧಿಸುವ ಶಿಕ್ಷಕರಿಗೆ ಕಲಿಕಾ ಚೇತರಿಕೆ ಉಪಕ್ರಮ ಎರಡು ದಿನದ ತರಬೇತಿ ಕಾರ್ಯಕ್ರಮವನ್ನು ಇಂದು ಗಜಾನನ ಮನ್ನಿಕೇರಿ ಜಂಟಿ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಾರ್ಯಾಲಯ ಧಾರವಾಡ ರವರು ಉದ್ಘಾಟಿಸಿದರು
ಇದೇ ವೇಳೆ ಮಾತನಾಡಿದ ಅವರು 18 ತಿಂಗಳ ಕೋವಿಡ್ ನಿಂದ ಉಂಟಾದ ಕಲಿಕಾ ಕಂದರವನ್ನು ಸರಿದೂಗಿಸುವುದು ಮಕ್ಕಳಿಗೆ ಕಲಿಕೆಯನ್ನು ಉಂಟುಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.ಇನ್ನೂ ಅಧ್ಯಕ್ಷತೆಯನ್ನು ಎಚ್‌ಡಿ ಗಾಂಜಿ ಪ್ರಾಂಶುಪಾಲರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಗದಗ ರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ವಿ ಎಂ ಹಿರೇಮಠ ಜಿಲ್ಲಾ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗದಗ ವಹಿಸಿದ್ದರು
ಶ್ರೀಮತಿ ಹರ್ತಿ ಜಿಲ್ಲಾ ಸಂಘದ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.ತರಬೇತಿಯ ಜಿಲ್ಲಾ ನೋಡಲ್ ಅಧಿಕಾ ರಿಗಳಾದ ಎಚ್ ಬಿ ರಡ್ಡೇರ ಸ್ವಾಗತ ಮಾಡುವುದರ ಜೊತೆಗೆ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು ಶ್ರೀಮತಿ ಸುವರ್ಣ ಚವಡಿ CRP ಯವರು ಪ್ರಾರ್ಥನೆಯನ್ನು ಸಲ್ಲಿಸಿದರು ಜಿ ಕೆ ಹೂಗಾರ CRP ಯವರು ವಂದನಾರ್ಪಣೆಯನ್ನು ಸಲ್ಲಿಸಿ ದರು ಕಾರ್ಯಕ್ರಮದ ನಿರೂಪಣೆಯನ್ನು I A ಗಾಡಗೋಳಿ CRP CRC Harti ನಡೆಸಿಕೊಟ್ಟರು.