ಬೆಂಗಳೂರು –
ಯಾರಿಗೂ ಇಲ್ಲದ ಯಾವ ಇಲಾಖೆಗೂ ಇಲ್ಲದ ವರ್ಗಾವಣೆಯ ನೀತಿ ರಾಜ್ಯದಲ್ಲಿ ಶಿಕ್ಷಣ ಇಲಾಖೆಗೆ ಇದೆ. ಅದ್ಯಾಕೋ ಏನೋ ಎನೇಲ್ಲಾ ಬದಲಾದರೂ ಎನೇಲ್ಲಾ ಹೊಸ ಹೊಸ ನಿಯಮಗಳು ಬಂದರು ತಿದ್ದುಪಡಿ ಮಾಡಿದರು ಕೂಡಾ ಶಿಕ್ಷಕರ ವರ್ಗಾವಣೆ ನಿಯಮಗಳು ಮಾತ್ರ ಬದಲಾಗುತ್ತಿಲ್ಲ ಅದೇ ನಿಯಮಗಳು ಅದೇ ಸುತ್ತೋಲೆಗಳು ಗಂಡ ಒಂದು ಕಡೆಗೆ ಹೆಂಡತಿ ಇನ್ನೊಂದು ಕಡೆಗೆ ಮಕ್ಕಳು ಮತ್ತೊಂದು ಕಡೆಗೆ ಪೋಷಕರು ಮತ್ತೊಂದು ಕಡೆಗೆ ಹೀಗೆ ದಿಕ್ಕಿಗೊಬ್ಬರಾಗಿ ನಾಡಿನ ಕೆಲವೊಂದಿಷ್ಟು ಶಿಕ್ಷಕರು ಸಧ್ಯ ಇಂತಹ ಪರಸ್ಥಿತಿಯಲ್ಲಿ ಕೆಲಸ ಕಾರ್ಯವನ್ನು ಮಾಡುತ್ತಿದ್ದಾರೆ.
ಎಷ್ಟೋ ಅಧಿಕಾರಿ ಗಳು ಮುಖ್ಯಮಂತ್ರಿಗಳು ಬಂದು ಹೋದರು ಶಿಕ್ಷಣ ಸಚಿವರು ಬಂದು ಹೋದರು ಅಧಿಕಾರವನ್ನು ಮಾಡಿದರು ಕೂಡಾ ಈ ಒಂದು ವರ್ಗಾವಣೆಯ ನೀತಿ ನಿಯಮಗಳನ್ನು ಬದಲಾ ವಣೆ ಮಾಡಲಿಲ್ಲ ಆಗಿಲ್ಲ ಹೀಗಿರುವಾಗ ನಾಡಿನ ಶಿಕ್ಷಕರು ವೃತ್ತಿಯಲ್ಲಿ ಒಮ್ಮೆಯಾದರೂ ಸ್ವತಃ ಊರಿನ ತಾಲೂಕಿನಲ್ಲಿ ಸಿಗಲಿ ಎಂದು ಕೇಳುತ್ತಿದ್ದಾರೆ ಆದ್ರೂ ಸಿಗುತ್ತಿಲ್ಲ ಹೀಗಿರುವಾಗ ಶಿಕ್ಷಕರ ಧ್ವನಿಯಾ ಗಿರುವ ಶಿಕ್ಷಕರ ಸಂಘಟನೆಯಿಂದ ಈ ಒಂದು ಕೆಲಸ ಸಾಧ್ಯ ಆದರೆ ಅದ್ಯಾಕೋ ಏನೋ ಅವರು ಕೂಡಾ ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ ಮುಖ್ಯಮಂತ್ರಿಗಳ ಬಳಿ,ಶಿಕ್ಷಣ ಸಚಿವರ ಬಳಿ ಶಿಕ್ಷಕರಿಗೆ ಹೋಗಲು ಆಗುವುದಿಲ್ಲ ಇವರ ಧ್ವನಿಯಾಗಿರುವ ಸಂಘಟನೆ ಯ ನಾಯಕರು ಅವಕಾಶವಿರುತ್ತದೆ ಆದರೆ ಅದ್ಯಾಕೋ ಏನೋ ಎಲ್ಲವನ್ನೂ ಬದಿಗಿಟ್ಟು ಗಟ್ಟಿಯಾಗಿ ಧ್ವನಿ ಎತ್ತಿದರೆ ಮಾತ್ರ ಸಾಧ್ಯವಾಗುತ್ತದೆ ಆದರೆ ಈ ಕುರಿತಂತೆ ಮಾತನಾಡುತ್ತಿಲ್ಲ ಮೌನವಾ ಗಿದ್ದಾರೆ ಹೀಗಾಗಿ ವರ್ಗಾವಣೆಯ ರೂಲ್ಸ್ ಗಳು ಬದಲಾಗುತ್ತಿಲ್ಲ ಸರಿಯಾಗಿ ಸಮರ್ಪಕವಾಗಿ ವರ್ಗಾವಣೆ ಸಿಗದೇ ಅದೇ ಪರಸ್ಥಿತಿಯಲ್ಲಿ ವರ್ಗಾ ವಣೆಯ ನಿರೀಕ್ಷೆ ಯಲ್ಲಿರುವ ಸ್ಥಿತಿಯಾಗಿದ್ದು ಇನ್ನಾದರೂ ಇದನ್ನು ಅರಿತುಕೊಂಡು ನಾಡಿನ ಶಿಕ್ಷಕರ ಸಂಘಟನೆಯ ನಾಯಕರು ಚಿಂತನ ಮಂಥನ ಮಾಡಬೇಕು ಇಲ್ಲವಾದರೆ ಶಿಕ್ಷಕರು ಸಿಡಿದೆಳಲಿದ್ದಾರೆ.ಇವರ ಶಾಪ ಎಲ್ಲರಿಗೂ ತಟ್ಟಲಿದೆ.