ಮೈಸೂರು –
ಹುಲಿ ಮತ್ತು ಚಿರತೆ ಗಳನ್ನು ಬೇಟೆಯಾಡಿ ಅವುಗಳ ಚರ್ಮವನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಮೈಸೂರಿನಲ್ಲಿ ಪತ್ತೆ ಹಚ್ಚಲಾಗಿದೆ. ಮೈಸೂರು ವಲ ಯದಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ನಾಲ್ವರು ಬೇಟೆಗಾರರನ್ನು ಬಂಧಿಸಲಾಗಿದೆ. ಬಂಧಿತ ರಿಂದ ತಲಾ ಒಂದು ಹುಲಿ ಹಾಗೂ ಚಿರತೆ ಚರ್ಮವ ನ್ನು ವಶಪಡಿಸಿಕೊಂಡು ತನಿಖೆಯನ್ನು ಮಾಡತಾ ಇದ್ದಾರೆ.

ನಾಲ್ವರನ್ನು ಬಂಧಿಸಿ ಅವರಿಂದ ಒಂದು ಆಟೋ ವಶಪಡಿಸಿಕೊಳ್ಳಲಾಗಿದೆ. ಬಂಧಿತ ರನ್ನು ಅರುಣ, ನಂಜುಂಡ, ರವಿ, ರಮೇಶ ಎಂದು ಗುರುತಿಸಲಾಗಿ ದೆ.ಕಾರ್ಯಾಚರಣೆಯಲ್ಲಿ ಡಿಸಿಎಫ್ ಪೂವಯ್ಯ ಆರ್‌ಎಫ್‌ಒ ವಿವೇಕ್, ಡಿಆರ್‌ಎಫ್‌ಒ ಲಕ್ಷ್ಮೀಶ್, ನಾಗರಾಜ್, ಪ್ರಮೋದ್, ಸುಂದರ್, ವಿನೋದ್, ಸ್ನೇಹಾ, ಮೇಘನಾ. ಫಾರೆಸ್ಟ್ ಗಾರ್ಡ್ಸ್ ಚನ್ನಬಸಪ್ಪ, ವಿರೂಪಾಕ್ಷ, ಶರಣಪ್ಪ, ಗೋವಿಂದ, ಕೊತ್ರೇಶ್, ರವಿ ಕುಮಾರ್. ಚಾಲಕರಾದ ಮಧು ಮತ್ತು ಪುಟ್ಟಸ್ವಾಮಿ ಸೇರಿದಂತೆ ಹಲವರು ಈ ಒಂದು ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು





















