ಬೆಂಗಳೂರು –
NPS ವಿರುದ್ದ ನಾಡಿನ ಶಿಕ್ಷಕರು ದೊಡ್ಡ ಪ್ರಮಾಣ ದಲ್ಲಿ ಹೋರಾಟವನ್ನು ರೂಪಿಸುತ್ತಿದ್ದಾರೆ. ಈಗಾಗ ಲೇ ಈ ಒಂದು ಯೋಜನೆಯನ್ನು ವಿರೋಧಿಸಿ ಹಲವು ಬಾರಿ ಮನವಿ ನೀಡಿದ್ದಾರೆ ಆದರೂ ಕೂಡಾ ಇದನ್ನು ರದ್ದು ಮಾಡಿಲ್ಲ ಹೀಗಾಗಿ ಇದರಿಂದ ಭವಿಷ್ಯ ದಲ್ಲಿ ಮತ್ತು ಸಧ್ಯ ಆಗುತ್ತಿರುವ ತೊಂದರೆಗಳಿಂದಾಗಿ ಸಿಡಿದೆದ್ದಿರುವ ನಾಡಿನ ಶಿಕ್ಷಕರು NPS ತೋಲಗಲಿ OPS ಜಾರಿಗೆ ಬರಲಿ ಎನ್ನುತ್ತಿದ್ದಾರೆ.
ಈ ಹಿಂದೆ ಸಾಕಷ್ಟು ಪ್ರಮಾಣದಲ್ಲಿ ಹೋರಾಟವನ್ನು ಮಾಡಿರುವ ಶಿಕ್ಷಕ ಬಂಧುಗಳು ಸಧ್ಯ ಮತ್ತೊಮ್ಮೆ ಪತ್ರ ಚಳುವಳಿಯನ್ನು ಆರಂಭ ಮಾಡಿದ್ದಾರೆ. ರಾಜ್ಯ ದ ಮೂಲೆ ಮೂಲೆಗಳಲ್ಲಿ ಶಿಕ್ಷಕರು ಇಂದು ಪತ್ರ ಚಳುವಳಿಯನ್ನು ಮಾಡಿದರು
ಹೌದು ಬೀದರ್ ದಿಂದ ಹಿಡಿದು ಬೆಂಗಳೂರು ವರೆಗೂ ಪ್ರತಿಯೊಂದು ಜಿಲ್ಲಾ.ತಾಲ್ಲೂಕು ಗ್ರಾಮ ಗಳಲ್ಲೂ ಶಿಕ್ಷಕರು ಇಂದು ತಮ್ಮ ತಮ್ಮ ಕರ್ತವ್ಯದ ನಡುವೆ ಸಮಯವನ್ನು ಬಿಡುವು ಮಾಡಿಕೊಂಡು ಪತ್ರವನ್ನು ಬರೆದು ಚಳುವಳಿಯನ್ನು ಮಾಡಿದರು.
ಪತ್ರ ಚಳುವಳಿಯ ಮೂಲಕ ಮೊದಲನೇಯ ಪತ್ರವನ್ನು ಮಾಧ್ಯಮದವರಿಗೆ ಬರೆದರು. ದಯ ಮಾಡಿ ನಮ್ಮ ಈ ಒಂದು ಆಂದೋಲನಕ್ಕೆ ಬೆಂಬಲ ನೀಡಿ ವ್ಯಾಪಕವಾದ ಪ್ರಚಾರವನ್ನು ನೀಡಿ ನೊಂದು ಕೊಂಡಿರುವ ಶಿಕ್ಷಕರಿಗೆ ದಯಮಾಡಿ ಪ್ರಚಾರದ ಮೂಲಕ ನ್ಯಾಯವನ್ನು ದೊರಕಿಸಿ ಕೊಡಿ ಎಂದು ಪತ್ರದಲ್ಲಿ ಬರೆದು ಪೊಸ್ಟ್ ಮಾಡಿದರು.
ಈ ಒಂದು ಆಂದೋಲನ ಇಂದು ರಾಜ್ಯಾಧ್ಯಂತ ಅಭೂತಪೂರ್ವವಾಗಿ ಕಂಡು ಬಂದಿತು. ಇದಕ್ಕೆ ಎಲ್ಲಾ ಶಿಕ್ಷಕ ಶಿಕ್ಷಕಿಯರು ಸ್ವಯಂ ಪ್ರೇರಿತವಾಗಿ ಬೀದಿಗಿಳಿದು ಅಭೂತಪೂರ್ವವಾದ ವ್ಯಾಪಕವಾದ ನೈತಿಕ ಬೆಂಬಲವನ್ನು ನೀಡಿ ವಿರೋಧಿಸಿದರು.
ಇದರೊಂದಿಗೆ NPS ತೋಲಗಲಿ OPS ಜಾರಿಗೆ ಬರಲಿ ಎಂಬ ಕೂಗು ರಾಜ್ಯಾಧ್ಯಂತ ಇಂದು ಪತ್ರಗಳ ಚಳುವಳಿಯ ಮೂಲಕ ಜೋರಾಗಿ ಕಂಡು ಬಂದಿತು