ವಿಜಯಪುರ –
ಮುಖ್ಯಮಂತ್ರಿ ಶೀಘ್ರವೇ ಶಾಸಕಾಂಗ ಸಭೆ ಕರೆಯಲಿ ಸಭೆಯಲ್ಲಿ ನಾವು ಕೆಲವೊಂದಿಷ್ಟು ಸಮಸ್ಯೆಗಳನ್ನು ಹೇಳಿಕೊಳ್ಳಲು ಹಾಗೇ ಮುಕ್ತವಾಗಿ ಚರ್ಚೆ ಮಾಡಲು ಹೇಳಲು ನಮಗೆ ಅಲ್ಲಿ ಅನುಕೂಲವಾಗುತ್ತದೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಒತ್ತಾಯ ಮಾಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು ವಿಭಾಗೀಯ ಶಾಸಕರ ಸಭೆಯಲ್ಲಿ ಶಾಸಕರು ಮಾತನಾಡಲು ಹೆದರುತ್ತಾರೆ ಶಾಸಕರು ತಮ್ಮ ಭಾವನೆಗಳನ್ನ ವ್ಯಕ್ತಪಡಿಸಲು ಶಾಸಕಾಂಗ ಸಭೆ ನಡೆಯಬೇಕು ಎಂದು ಒತ್ತಾಯಿಸಿದರು. ಶಾಸಕಾಂಗ ಪಕ್ಷದ ಸಭೆ ಕರೆದರೆ ಸಿಎಂ ರನ್ನು ಏನಾದ್ರು ಕೇಳಲು ಶಾಸಕರಿಗೆ ಧೈರ್ಯ ಬರುತ್ತೆ. ವಿಭಾಗೀಯ ಶಾಸಕರ ಸಭೆಯಲ್ಲಿ ಐದಾರು ಜನರ ಶಾಸಕರು ಮಾತ್ರ ಇರ್ತಾರೆ, ಅಲ್ಲಿ ಭಯದ ವಾತಾವರಣ ಇರುತ್ತೆ ಶಾಸಕಾಂಗ ಸಭೆಯಲ್ಲಿ 117 ಜನ ಇರ್ತೀವಿ, ಮನಸ್ಸಿನಲ್ಲಿ ಏನಿರುತ್ತೋ ಅದನ್ನು ಮುಕ್ತವಾಗಿ ಚರ್ಚೆ ಮಾಡಲು ಅನುಕೂಲವಾಗುತ್ತೆ ಸಿಎಂ ಮುಕ್ತ ಚರ್ಚೆಗೆ ಶಾಸಕರಿಗೆ ಅನುಕೂಲ ಮಾಡಿಕೊಡಬೇಕು ಅನ್ನೋದು ನನ್ನ ಮನವಿ ಎಂದು ಯತ್ನಾಳ್ ಹೇಳಿದರು.
ನಾವು ಸಿಎಂ ಕಚೇರಿಗೆ ಹೋಗೋದನ್ನೆ ಬಿಟ್ಟಿದ್ದೀವಿ 6 ತಿಂಗಳಿನಿಂದ ಸಿಎಂ ಕಚೇರಿ, ಗೃಹ ಕಚೇರಿಗೆ ಕಾಲಿಟ್ಟಿಲ್ಲ ನಮಗೆ ಅನುಧಾನ ಕೊಡೊದನ್ನ ಬಿಟ್ರಲ್ಲ, ಆವಾಗಿಂದ ಹೋಗೋದನ್ನೆ ಬಿಟ್ಟಿದ್ದೀವಿ ಎಂದು ಯತ್ನಾಳ್ ಅಸಮಧಾನ