ಬೆಂಗಳೂರು –
ಕಳೆದ ಹಲವಾರು ವರುಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ವಿಚಾರ ದಿನದಿಂದ ದಿನಕ್ಕೆ ಕಗ್ಗಂಟಾ ಗುತ್ತಿದೆ.ಒಂದಲ್ಲ ಒಂದು ನೆಪವನ್ನು ಮುಂದಿಟ್ಟು ಕೊಂಡು ವಿನಾಕಾರಣ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯದ ಶಿಕ್ಷಕ ಸಮುದಾ ಯದವರು ಸಿಡಿದೆಳುವ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಆವಾಗ ಆಗುತ್ತದೆ ಇವಾಗ ಆಗುತ್ತದೆ ಎಂದುಕೊಂಡು ನಿರೀಕ್ಷೆಯಲ್ಲಿದ್ದ ಶಿಕ್ಷಕ ಸಮುದಾ ಯ ಸಿಡಿದೆಳುವ ಮುನ್ನವೇ ವರ್ಗಾವಣೆಯನ್ನು ರಾಜ್ಯ ಸರ್ಕಾರ ಆರಂಭ ಮಾಡಬೇಕಿದೆ.
ಹೌದು ಮತ್ತೊಂದು ಸಮಸ್ಯೆಯಾಗುವ ಮುನ್ನವೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಮತ್ತೊಂದು ಸಮಸ್ಯೆ ಆಗುವ ಮುನ್ನವೇ ಎಚ್ಚೆತ್ತುಕೊಳ್ಳೊದು ಸರ್ಕಾರಕ್ಕೆ ಅವಶ್ಯಕತೆ ಇದೆ ಇಲ್ಲವಾದರೆ ರಾಜ್ಯವ್ಯಾ ಪಿ ಶಿಕ್ಷಕ ಸಮುದಾಯ ಸಿಡಿದೆಳೊದು ಖಂಡಿತವಾಗಿ ಯೂ ಅಕ್ಷರಶಃ ಸತ್ಯವಾಗಿದೆ.
ವರ್ಗಾವಣೆ ಆಕಾಂಕ್ಷಿತ ಶಿಕ್ಷಕರೇ ಜಾಗೃತರಾಗಿ ಎನ್ನುತ್ತಾ ರಾಜ್ಯದ ತುಂಬೆಲ್ಲಾ ಕಡ್ಡಾಯ ವರ್ಗಾವಣೆ ಯ ವಿರುದ್ದ ಶಿಕ್ಷಕ ಸಮುದಾಯ ಒಗ್ಗಟ್ಟಿನ ಮಂತ್ರ ವನ್ನು ಸದ್ದು ಮಾಡತಾ ಇದ್ದಾರೆ.ಕೆ ಎ ಟಿ ತೀರ್ಪು ನೀಡಿದರೂ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ಅಲ್ಲಿಯೂ ಮುಖಭಂಗ ಅನುಭವಿಸಿದರೂ ಇನ್ನೂ ತನ್ನ ಹಠ ಬಿಡದ ಸರ್ಕಾರ ಕೇವಲ ಮೂರ್ನಾಲ್ಕು ಸಾವಿರ ಶಿಕ್ಷಕನ್ನು ಓಲೈಸಲು 70000 ಕ್ಕೂ ಅಧಿಕ ಶಿಕ್ಷಕರ ಹಿತಾಸಕ್ತಿ ಕಡೆಗಣಿಸುತ್ತಿದೆ ಎನ್ನುವ ಮಾತುಗ ಳು ಜೋರಾಗಿ ಕೇಳಿ ಬರುತ್ತಿವೆ.
ಹೈಕೋರ್ಟ್ ಕಡ್ಡಾಯ ವರ್ಗಾವಣೆ ಹೊರತು ಪಡಿಸಿ ಉಳಿದ ವರ್ಗಾವಣೆ ಮಾಡಲು ಹೇಳಿದೆ ಆದರೆ ಸರ್ಕಾರ ಮತ್ತೆ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀ ವಾಜ್ಞೆ ಮೂಲಕ ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸುವ ವಿಚಾರದಲ್ಲಿ ಇದೆ 10,15,20 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಅದೆಷ್ಟೋ ಶಿಕ್ಷಕರು ತಮ್ಮ ಕೌಟುಂ ಬಿಕ ತೊಂದರೆಗಳ ಹೊರತಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇಂಥಹ ಶಿಕ್ಷಕರ ಗೋಳು ಸರ್ಕಾರ ಕ್ಕೆ ಯಾಕೋ ಕೇಳಿ ಬರುತ್ತಿಲ್ಲ ಕಾಣುತ್ತಿಲ್ಲ
ಕೇವಲ ಒಂದು ವರ್ಷದ ಹಿಂದೆ ಹಳ್ಳಿಗೆ ಬಂದ ಶಿಕ್ಷಕರ ಕಷ್ಟ ಕಣ್ಣಿಗೆ ಕಾಣುತ್ತಿದೆ ಆದರೆ ಇದೆಲ್ಲವನ್ನೂ ನೋಡುತ್ತಾ ಜಾಣ ಮೌನ ವಹಿಸುತ್ತಿರುವ ಶಿಕ್ಷಕರ ಸಂಘಟನೆ ಮತ್ತು ಸರ್ಕಾರಿ ನೌಕರರ ಸಂಘ
ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಈಗಾಗಲೇ ಪ್ರಾರಂಭವಾಗಿರುವ ಪ್ರಕ್ರಿಯೆಗೆ ಸಚಿವ ಸಂಪುಟ ಸಭೆಯ ಅನುಮತಿ ಯಾತಕ್ಕಾಗಿ ಅವಶ್ಯವೇ ಕಡ್ಡಾಯ ವರ್ಗಾವಣೆ ಹೊಂದಿರುವ ನಗರ ಶಿಕ್ಷಕರಿಗೆ ಕೊಡುತ್ತಿರುವ ಅವಕಾಶವನ್ನು ಸೇವೆಯಲ್ಲಿ ಒಮ್ಮೆಯೂ ವರ್ಗಾವಣೆ ಕಾಣದ ಶಿಕ್ಷಕರಿಗೆ ಒದಗಿಸೊದು ಅವಶ್ಯಕತೆ ಇದೆ ಇಲ್ಲವಾದರೆ ರಾಜ್ಯಾದ್ಯಂತ ಶಿಕ್ಷಕ ಸಮುದಾಯ ಸಿಡಿದೆಳಲಿದ್ದು ಇದಾಗುವ ಮುನ್ನವೇ ರಾಜ್ಯ ಸರ್ಕಾರ ಶಿಕ್ಷಣ ಸಚಿವರು ಎಚ್ಚೆತ್ತುಕೊಳ್ಳಬೇಕಿದೆ