ಬೆಂಗಳೂರು –
ಗೆ,
ಮಾನ್ಯ ಷಡಕ್ಷರಿ ಯವರು ರಾಜ್ಯಾಧ್ಯಕ್ಷರು ಹಾಗೂ ಮಾನ್ಯ ಜಗದೀಶ್ ಗೌಡಪ್ಪ ಪಾಟೀಲ್ ರವರು ಮಹಾಪ್ರಧಾನ ಕಾರ್ಯದರ್ಶಿಗಳು,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(ರಿ) ಬೆಂಗಳೂರು

ವಿಷಯ –
ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತಾ ಶಿಕ್ಷಕರಿಗೆ ಎಪ್ರಿಲ್ ತಿಂಗಳ 27 ತಾರೀಖು 2021ರಿಂದ ಜೂನ್ ತಿಂಗಳ 14 ನೇ ತಾರೀಖು ವರೆಗೆ ಕೊವಿಡ್-19 ರ ಕಾರಣದಿಂದ ಈ ವರ್ಷ ಬೇಸಿಗೆ ರಜೆ ಘೋಷಣೆ ಆಗಿರುತ್ತದೆ.

ಈಗ ಕೋರೊನಾ ಸಂಕಷ್ಟ ಸಮಯದಲ್ಲಿ 2 ನೇಆಲೆ ಇನ್ನೂ ರಾಜ್ಯದಲ್ಲಿ ಕಡಿಮೆ ಆಗಿರುವುದಿಲ್ಲ.ಪ್ರತಿ ದಿನ ಹತ್ತು ಸಾವಿರದ ಸನ್ನಿಹ ಹಾಗೂ ಹತ್ತು ಸಾವಿರದ ಮೇಲೆ ಪಾಸಿಟಿವ್ ಪ್ರಕರಣಗಳು ಬರುತ್ತಿದ್ದು, ರಾಜ್ಯದಲ್ಲಿ 2 ಲಕ್ಷದ ಸನ್ನಿಹ ಸಕ್ರಿಯ ಕೋರೋನಾ ಪ್ರಕರಣಗಳು ಇವೆ,

ದಿನಾಂಕ10-06-2021ರ ಪ್ರಕಾರಕೆಲವು ಜಿಲ್ಲೆಗಳಲ್ಲಿ ಕೋರೋನಾ ಪಾಸಿಟಿವ್ ರೇಟ್ ಶೇಕಡಾವಾರು 20-25 ರಷ್ಟು ಹಾಗೂ ಕೆಲವು ಜಿಲ್ಲೆಗಳಲ್ಲಿ ಕೋರೋನಾ ಪಾಸಿಟಿವ್ ರೇಟ್ ಶೇಕಡಾವಾರು 10-20 ರಷ್ಟು ಇದೆ ಉದಾಹರಣೆಗೆ ಮೈಸೂರು, ಮಂಡ್ಯ ಹಾಸನ,ಶಿವಮೊಗ್ಗ,ದಕ್ಷಿಣ ಕನ್ನಡ,ಕೊಡಗು, ಚಿಕ್ಕಮಗಳೂರು,ವಿಜಯಪುರ,ಉಡುಪಿ,ಬೆಳಗಾವಿ,ದಾವಣಗೆರೆ, ಬೆಂಗಳೂರು ಗ್ರಾಮಾಂತರ ಮುಂತಾದ ಹಲವಾರು ಜಿಲ್ಲೆಗಳಲ್ಲಿ ಕೋರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚು ಇವೆ
ಹಾಗೂ ದಿನಾಂಕ-10-06-2021 ರಂದು ಮಾನ್ಯ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದಲ್ಲಿ ಹೆಚ್ಚು ಕೋರೋನಾ ಪಾಸಿಟಿವ್ ಪ್ರಕರ ಣಗಳು ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿ
ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹಾಗೂ ರಾಜ್ಯದ ಕೋವಿಡ್ ಉಸ್ತುವಾರಿ ಸಚಿವರ ಸಭೆಯ ನಂತರ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಇನ್ನೂ ಒಂದು ವಾರ ಮುಂದುವರೆಸುವ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲಂ ಬಿಸಿ ತಿರ್ಮಾನ ತೆಗೆದು ಕೊಳ್ಳುವ ಬಗ್ಗೆ ತಿಳಿಸಿರು ತ್ತಾರೆ.
ಶಿಕ್ಷಕರಿಗೆ ಬೇಸಿಗೆ ರಜೆಯನ್ನು ಮುಂದುವರಿಸಲು
ಮಾನ್ಯವಿಧಾನ ಪರಿಷತ್ ಸದಸ್ಯರು ಕರ್ನಾಟಕ ಸರ್ಕಾರ ಬೆಂಗಳೂರು ರವರು
ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು
ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಶಿಕ್ಷಕರ ಸಂಘ(ರಿ) ಹುಬ್ಬಳ್ಳಿ,
ಹಾಗೂ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ)ಧಾರವಾಡ
ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ(ರಿ)ಧಾರವಾಡ ರವರು
ಮಾನ್ಯ ಮುಖ್ಯಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ ಹಾಗೂ ಶಿಕ್ಷಣ ಇಲಾಖೆಯ ಮಾನ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಹಾಗೂ ಮಾನ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಶಿಕ್ಷಕರಿಗೆ ಬೇಸಿಗೆ ರಜೆಯನ್ನು ಜೂನ್ ತಿಂಗಳ 30ನೇ ತಾರೀಖು ನವರೆಗೂ ಮುಂದುವರಿಸಲು ಪತ್ರ ಬರೆದಿರುತ್ತಾರೆ.
ಈ ನಡುವೆ ಹಲವಾರು ಶಿಕ್ಷಕರು ಕೋರೋನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.ಹಾಗೂ ಕೋರೋನಾ ಸೋಂಕಿತ ಶಿಕ್ಷಕರ ಕುಟುಂಬಗಳು ಹಾಗೂ ಕೋರೋನಾ ಸೋಂಕಿತ ವಿದ್ಯಾರ್ಥಿಗಳು ಪೋಷಕರು ಇನ್ನೂ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಕೆರ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಿಕ್ಷಕರನ್ನು ಕೋವಿಡ್ -19 ರ ವಿವಿಧ ಕೆಲಸಕ್ಕೆ ಏಪ್ರಿಲ್ ತಿಂಗಳಿನಿಂದ ನಿಯೋಜನೆ ಮಾಡಲಾಗಿದೆ
ಚೆಕ್ ಪೋಸ್ಟ್ ಡ್ಯೂಟಿ,ಕೋವಿಡ್ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಹಚ್ಚುವುದು, DHO ಕಛೇರಿ, ಗ್ರಾಮಪಂಚಾಯತಿ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಹೀಗೆ ಶಿಕ್ಷಕರು ವಿವಿಧ ಕಡೆಗಳಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ
ಶಿಕ್ಷಕರನ್ನು ಕೋವಿಡ್-19 ರ ಕೆಲಸಕ್ಕೆ ನಿಯೋಜನೆ ಮಾಡಿರುವ ಕೆಲಸದಿಂದ ಇನ್ನೂ ಬಿಡುಗಡೆ ಮಾಡಿ ರುವುದಿಲ್ಲ
ಹಲವಾರು ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವ ರೆಸಿ ದರಿಂದ ಸಂಪೂರ್ಣ ಸಾರಿಗೆ ವ್ಯವಸ್ಥೆ ಇರುವು ದಿಲ್ಲ
ಶಿಕ್ಷಕರು ಬೇರೆ ಬೇರೆ ಜಿಲ್ಲೆಗಳಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದು ಈಗ ಬೇಸಿಗೆ ರಜೆಯಲ್ಲಿ ಸ್ವಂತ ಜಿಲ್ಲೆಗ ಳಲ್ಲಿ ತಮ್ಮ ಊರುಗಳಲ್ಲಿ ವಾಸಿಸುತ್ತಿದ್ದು ಅವರು ಈಗ ಕೆಲಸ ನಿರ್ವಹಣೆ ಮಾಡುವ ಸ್ಥಳ ತಲುಪುವ ಯಾವುದೇ ವಾಹನ ಸಂಚಾರದ ವ್ಯವಸ್ಥೆ ಇರುವುದಿಲ್ಲ
- ರಾಜ್ಯದಲ್ಲಿ KSRTC ಹಾಗೂ BMTC ಹಾಗೂ ಖಾಸಗಿ ಬಸ್ ವ್ಯವಸ್ಥೆ ಬರುವುದಿಲ್ಲ ರಾಜ್ಯದ 19 ಜಿಲ್ಲೆಗಳಲ್ಲಿ ಸಮಿಲಾಕ್ ಡೌನ್ ಇರುವುದರಿಂದ ಬೆಳಿಗ್ಗೆ 6 ಘಂಟೆಯಿಂದ ಮದ್ಯಾಹ್ನ 2 ಘಂಟೆಗೆ ವರೆಗೆ ಮಾತ್ರ ಸಂಚಾರಿಸಲು ವಿನಾಯಿತಿ ಇದೆ
ರಾಜ್ಯದಲ್ಲಿ 11 ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಲಾಕ್ ಡೌನ್ ಮುಂದುವರಿದ ಜೊತೆಗೆ ಆಯಾಯ ಜಿಲ್ಲೆಗಳಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಥಳೀಯ ಸಂಪೂರ್ಣ ಕಠಿಣ ಲಾಕ್ ಡೌನ್ ಮುಂದುವರೆದಿದೆ
ರಾಜ್ಯದಲ್ಲಿ ಶಿಕ್ಷಕರಿಗೆ ಎಲ್ಲಾರಿಗೂ ಕೋರೋನಾ ಲಸಿಕೆ ಹಾಕಿರುವುದಿಲ್ಲ.
ಒಂದನೇ ಡೋಸ್ ಲಸಿಕೆ ಹಾಕಿರುವ ಶಿಕ್ಷಕರಿಗೆ 2ನೇ ಡೋಸ್ ಲಸಿಕೆ ಹಾಕಿರುವುದಿಲ್ಲ.
ರಾಜ್ಯದಲ್ಲಿ ಮಕ್ಕಳಿಗೆ ಇನ್ನೂ ಕೋರೋನಾ ಲಸಿಕೆ ಬಂದಿರುವುದಿಲ್ಲ.
ದಿನಾಂಕ- 10-06-2021ರಂದು ಮಾನ್ಯ ಮುಖ್ಯಮಂತ್ರಿಗಳು ಘೋಷಣೆ ಮಾಡಿರುವಂತೆ ರಾಜ್ಯದ 11ಜಿಲ್ಲೆಗಳಲ್ಲಿ ಲಾಕ್ ಡೌನ್ ಹಾಗೂ 19 ಜಿಲ್ಲೆಗಳಲ್ಲಿ ಸೆಮಿಲಾಕ್ ಡೌನ್ ಮುಂದುವರೆದಿದೆ
ಕರ್ನಾಟಕ ರಾಜ್ಯದಲ್ಲಿ ದಿನಾಂಕ- 13-06-2021 ಕೋರೋನಾ ಮಿಡಿಯಾ ಬುಲೆಟಿನ್ ಪ್ರಕಾರ
ಮೈಸೂರು, ಮಂಡ್ಯ, ಹಾಸನ, ದಕ್ಷಿಣಕನ್ನಡ, ಬೆಳಗಾವಿ,ದಾವಣಗೆರೆ,ತುಮಕೂರು,ಚಿಕ್ಕಮಗಳೂರು,ಶಿವಮೊಗ್ಗ,ಉಡುಪಿ,ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚು ಕೋರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ,
ಮೈಸೂರು ಜಿಲ್ಲೆಯಲ್ಲಿ ದಿನಾಂಕ- 13-06-2021 ರ ಪ್ರಕಾರ ಕೋರೋನಾ ಪಾಸಿಟಿವ್ ರೇಟ್ ಶೇಕಡಾ 24% ಇದೆ. ಈ ದಿನದಲ್ಲಿ 25ಜನ ಸೋಂಕಿತರು ಮರಣ ಹೊಂದಿದ್ದಾರೆ.ಉಳಿದ 10 ಜಿಲ್ಲೆಗಳಲ್ಲಿ ಕೋರೋನಾ ಪಾಸಿಟಿವ್ ರೇಟ್ ಶೇಕಡಾವಾರು 10%ನಿಂದ 20% ನಷ್ಟು ಇದೆ.ಇನ್ನುಳಿದ 19 ಜಿಲ್ಲೆಗಳಲ್ಲಿ ಕೋರೋನಾ ಪಾಸಿಟಿವ್ ರೇಟ್ 10%ನಷ್ಟು ಹಾಗೂ ಕಡಿಮೆ ಇದೆ.
ದಿನಾಂಕ – ಮಾರ್ಚ 2020 ರಿಂದ ದಿನಾಂಕ 13-06-2021ರವರೆಗೆ ಸರ್ಕಾರಿ/ಅನುದಾನಿತ/ಖಾಸಗಿ ಶಾಲೆಗಳ ಪ್ರಾಥಮಿಕ ಶಾಲೆ/ಪ್ರೌಢ ಶಾಲೆ/ಉಪನ್ಯಾಸಕರು ಹಾಗೂ ಇತರ ಎಲ್ಲಾ ಇಲಾಖೆಯ ಸರ್ಕಾರಿ ನೌಕರರು ಅಧಿಕಾರಿಗಳು ಕೋರೋನಾ ಪಾಸಿಟಿವ್ ಕಾರಣದಿಂದ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ.
ಆದ್ದರಿಂದ ಮಕ್ಕಳ ಹಾಗೂ ಶಿಕ್ಷಕರ ಆರೋಗ್ಯ ರಕ್ಷಣೆ ಮಾಡುವ ಮೂಲಕ ಜೂನ್ ತಿಂಗಳ 30 ತಾರೀಖು ವರೆಗೆ ಅಂದರೆ ಇನ್ನೂ 2ವಾರಗಳವರೆಗೆ ಶಿಕ್ಷಕರಿಗೆ ರಜೆಯನ್ನು ಮುಂದುವರಿಸಲು ತಾವು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಮಾನ್ಯ ಶಿಕ್ಷಣ ಸಚಿವರಿಗೆ ಪತ್ರ ಬರೆದು ಚರ್ಚಿಸ ಬೇಕೆಂದು ಈ ಮೂಲಕ ಎಲ್ಲಾ ಶಿಕ್ಷಕರು ತಮ್ಮಲ್ಲಿ ಕೇಳಿ ಕೊಳ್ಳತ್ತೇವೆ.
ವಂದನೆಗಳೊಂದಿಗೆ
ಇಂತಿ ತಮ್ಮವಿಶ್ವಾಸಿಗಳು
ಮಹೇಶ ಬೂದನೂರು ಮಂಡ್ಯ
G.ರಂಗಸ್ವಾಮಿ ಮಧುಗಿರಿ
ಷಡಕ್ಷರಿ ಸರ್ ಅಭಿಮಾನಿಗಳ ಬಳಗ..