ಬೆಂಗಳೂರು – ಮಾಸ್ಕ್ ಇಲ್ಲದೇ ಪ್ರಯಾಣಿಸುತ್ತಿದ್ದ ಬಿಜೆಪಿ ಶಾಸಕ ಕುಮಾರಸ್ವಾಮಿ ಅವರಿಗೆ ದಂಡ ಹಾಕಲಾಗಿದೆ. ಹೌದು ಮೂಡಗೇರಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಬೆಂಗಳೂರಿನಲ್ಲಿ ಪೊಲೀಸರು ದಂಡ ವಿಧಿಸಿದ್ದಾರೆ.

ಬೆಂಗಳೂರಿನ ಶೇಷಾದ್ರಿಪುರಂ ಕಡೆಯಿಂದ ಶಾಸಕರ ಭವನಕ್ಕೆ ತೆರಳುತ್ತಿದ್ದರು. ಶೇಷಾದ್ರಿಪುರಂ ಪೊಲೀಸ್ ಠಾಣಾ ಮುಂಭಾಗ ಸಂಚಾರಿ ವ್ಯತ್ಯಯದಿಂದ ಕಾರು ನಿಲುಗಡೆಗೊಂಡಿತು. ಈ ಸಂದರ್ಭದಲ್ಲಿ ಕಾರಿನ ಟಿಂಟ್ ಗ್ಲಾಸ್ ಇಳಿಸುವಂತೆ ಸಂಚಾರಿ ಪೊಲೀಸರು ಒತ್ತಾಯಿಸಿ ಕಾರಿನೊಳಗಡೆ ಇದ್ದ ನನಗೆ ಮಾಸ್ಕ್ ಹಾಕಿಸಿದ್ದರು. ಬಳಿಕ 250 ರೂ ದಂಡ ವಿಧಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಶಾಸಕರು ಪೊಲೀಸರ ವಿರುದ್ಧ ಗೃಹ ಸಚಿವರಿಗೆ ಪತ್ರವನ್ನು ಬರೆದಿದ್ದಾರೆ.

ಹೌದು ಈ ಕುರಿತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ನೀಡಿರುವ ಶಾಸಕ, ಜವಾಬ್ದಾರಿಯುತ ವ್ಯಕ್ತಿಯಾಗಿ ಮರು ಮಾತನಾಡದೇ ದಂಡ ಪಾವತಿಸಿದ್ದೇನೆ. ವಿನಾಕಾರಣ ನನ್ನ ಮೇಲೆ ದಂಡ ವಿಧಿಸಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.ಇನ್ನೂ ಈ ಒಂದು ಪ್ರಕರಣದಲ್ಲಿ ಪೊಲೀಸರು ತಪ್ಪು ಮಾಡಿದ್ದಾರು ಏನು ಎಂಬ ಪ್ರಶ್ನೆ ಕಾಡುತ್ತಿದೆ. ಮಾಸ್ಕ್ ಹಾಕಲಾರದ್ದನ್ನು ಪ್ರಶ್ನೆ ಮಾಡಬಾರದಾ ಜನಪ್ರತಿನಿಧಿಗಳಿಗೆ ಒಂದು ನ್ಯಾಯ ಸಾರ್ವಜನಿಕರಿಗೊಂದು ನ್ಯಾಯನಾ ಇದಕ್ಕೆ ಶಾಸಕರ ಸ್ಥಾನದಲ್ಲಿ ಇರುವ ಕುಮಾರಸ್ವಾಮಿ ಅವರೇ ಉತ್ತರಿಸಬೇಕು.