ಗಜೇಂದ್ರಗಡ –
ಮಹಾಮಾರಿ ಕೋವಿಡ್ ಆರ್ಭಟಕ್ಕೆ ಇಡೀ ದೇಶವೇ ನಲುಗಿ ಹೋಗಿದೆ.ಇನ್ನೂ ಈ ಒಂದು ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರವು ಕರ್ಫ್ಯೂ ಜಾರಿಗೊಳಿಸಿದ್ದ ರಿಂದ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಆಗಮಿಸಿದ ಪದವೀಧರನ ಬದುಕಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೆಲಸ ಆಸರೆಯಾಗಿದೆ.

ಹೌದು ಗದಗ ಜಿಲ್ಲೆಯ ದಿಂಡೂರು ಗ್ರಾಮದ ನಿವಾ ಸಿ ದುರ್ಗಪ್ಪ ಮಾದರ ಪದವಿ ಮುಗಿಸಿ ಬೆಂಗಳೂರಿ ನ ಮಹಾಬೆಲ್ ಇಂಡಸ್ಟ್ರೀಸ್ ಎಲ್‌ಇಡಿ ಕಂಪನಿ ಯಲ್ಲಿ ಕಳೆದ 8 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿ ದ್ದರು.ಆದರೀಗ ಬೆಂಗಳೂರಿನಲ್ಲಿ ಕೊರೊನಾ ಹೊಡೆತಕ್ಕೆ ಕೆಲಸ ಮಾಡುತ್ತಿದ್ದ ಕಂಪನಿ ಬಾಗಿಲು ಮುಚ್ಚಿದ ಪರಿಣಾಮವಾಗಿ ಪದವಿ

ಸಾಮಾನ್ಯವಾಗಿ ಈ ಒಂದು ಕೋವಿಡ್ ಆರ್ಭಟಕ್ಕೆ ಹಲವಾರು ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಅವರ ಸಾಲಿನಲ್ಲಿ ದುರ್ಗಪ್ಪ ಸಹ ಒಬ್ಬರಾಗಿದ್ದು ಇನ್ನೂ ಉದ್ಯೋಗ ಇಲ್ಲದೇ ಸಂಕಷ್ಟದ ಬದುಕು ಸಾಗಿಸುತ್ತಿದ್ದ ದುರ್ಗಪ್ಪ ಬೆಂಗಳೂರು ತೊರೆದು ಈಗ ಸ್ವಗ್ರಾಮಕ್ಕೆ ಮರಳಿ ಕೆಲಸವಿಲ್ಲವೆಂದು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳದೇ ಈಗ ಕೈ ಕೇಸರು ಮಾಡಿ ಕೊಂಡು ದುಡಿಯುತ್ತಿದ್ದಾರೆ

ಹೌದು ಸ್ವ ಗ್ರಾಮಕ್ಕೆ ಬಂದ ನಂತರ ಯಾವ ಕೆಲಸವು ಇಲ್ಲ ಪರದಾಡಿದ ಇವರಿಗೆ ಗ್ರಾಮದಲ್ಲಿ ಕೆಲಸ ವಿಲ್ಲ ದೇ ನಿರುದ್ಯೋಗದ ಸಮಸ್ಯೆ ಕಾಡತೊಡಗಿತು. ತುತ್ತಿ ನ ಚೀಲ ತುಂಬಿಸಿಕೊಳ್ಳಲು ಪದವಿಯ ಹಂಗಿಲ್ಲದೇ ರಾಜೂರು ಗ್ರಾಪಂ ವತಿಯಿಂದ ನಡೆಯುತ್ತಿದ್ದ ನರೇ ಗಾ ಅಡಿಯಲ್ಲಿ ಹೊಸ ಜಾಬ್ ಕಾರ್ಡ್ ಪಡೆದು ಕೂಲಿ ಕೆಲಸದಲ್ಲಿ ಇದೀಗ ತಲ್ಲೀನರಾಗಿದ್ದಾರೆ.

ಕಲಿತದ್ದು ಬಿ.ಎ ಶಿಕ್ಷಣ ಕೆಲಸ ಮಾತ್ರ ಇಲ್ಲ ಏನು ಮಾಡೋದು ಬೇರೆ ಊರಿಗೆ ತೆರಳಿ ಕೆಲಸ ಮಾಡ ಬೇಕು ಅಂದ್ರೆ ಕೊರೊನಾ ಪೀಕಲಾಟ ಬೇರೆ ಎಂದು ದಿನಂಪ್ರತಿ ಕೊರಗುತ್ತ ದಿನ ಕಳೆಯುತ್ತಿದ್ದ ದುರ್ಗಪ್ಪ ನಿಗೆ ಇದ್ದೂರಲ್ಲೇ ಸಂಜೀವಿನಿಯಂತೆ ನರೇಗಾ ಕೂಲಿ ಕೆಲಸ ದೊರೆಯುವ ಮೂಲಕ ಪದವೀಧರನ ಕೈ ಹಿಡಿದಿದೆ.ಸದ್ಯ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುವ ಮೂಲಕ ಧನ್ಯತಾ ಭಾವ ಮೆರೆಯುತ್ತಾ ದುಡಿಯುತ್ತಿದ್ದಾರೆ