ಸಿಡಿಲು ಬಡಿದು ಮೂವರು ಸಾವು ಇಬ್ಬರಿಗೆ ಗಂಭೀರ ಗಾಯ ಮರದ ಕೆಳಗಡೆ ನಿಂತುಕೊಂಡಾಗ ಘಟನೆ

Suddi Sante Desk

ಗದಗ –

ಸಿಡಿಲು ಬಡಿದು ಮೂವರು ಸಾವಿಗೀಡಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಗದಗ ನಲ್ಲಿ ನಡೆದಿದೆ.ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕಡಕೋ ಳ ಗ್ರಾಮದ ಹೊರವಲಯದಲ್ಲಿ ಈ ಒಂದು ಘಟನೆ ನಡೆದಿದೆ.

ಜಮೀನಿನಲ್ಲಿ ಕೆಲಸ ಮಾಡುವ ಸಮಯದಲ್ಲಿ ಗುಡುಗು ಸಿಡಿಲಿನೊಂದಿಗೆ ಮಳೆ ಬರಲಾರಂಭಿಸಿತು ಈ ಒಂದು ಸಮಯದಲ್ಲಿ ಮರದ ಕೆಳಗಡೆ ರಕ್ಷಣೆಗೆ ಅಂದುಕೊಂಡು ಹೋಗಿ ನಿಂತುಕೊಂಡಿದ್ದ ಕುಮಾರ ಮಾದರ (24),ಶರಣಪ್ಪ ಅಡವಿ (35) ಮಾರುತಿ (48) ಇವರಿಗೆ ಸಿಡಿಲು ಬಡಿದು ಈ ಮೂವರು ಮೃತ ರಾಗಿದ್ದು ದುರ್ದೈವಿಗಳಾಗಿದ್ದಾರೆ‌

ಪರಶುರಾಮ ಮಾದರ ಹಾಗೂ ದುರಗಪ್ಪ ಮಾದರ ಅವರಿಗೆ ಗಂಭೀರವಾದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಈ ಒಂದು ಘಟನೆ ನಡೆದಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.