ಬೆಂಗಳೂರು –

ರಾಜ್ಯದಲ್ಲಿ ಇನ್ನೂ ಕೋವಿಡ್ ಪೂರ್ಣ ಪ್ರಮಾಣ ದಲ್ಲಿ ಕಡಿಮೆಯಾದ ಕಾರಣಕ್ಕಾಗಿ ರಾಜ್ಯದ ಹನ್ನೊಂದು ಜಿಲ್ಲೆಯಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಇನ್ನೂ ಉಳಿದ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು ಬಸ್ ಸಂಚಾರ ವ್ಯವಸ್ಥೆಯನ್ನು ಇನ್ನೂ ಆರಂಭ ಮಾಡಿಲ್ಲ ಹೀಗಾಗಿ ಶಾಲೆಗಳಿಗೆ ನಾಳೆಯಿಂದ ಹೇಗೆ ಹೋಗೊದು ಎಂಬ ದೊಡ್ಡ ಪ್ರಶ್ನೆ ಕಾಡುತ್ತಿದೆ ಹೀಗಾಗಿ ಈ ಒಂದು ವಿಚಾರ ಕುರಿತು ಹದಿನೈದು ದಿನಗಳ ಕಾಲ ಮನೆ ಯಿಂದಲೇ ಕೆಲಸ ಮಾಡಲು ನಾಡಿನ ಶಿಕ್ಷಕರು ಸಂಘಟನೆಯ ನಾಯಕರು ವಿಧಾನ ಪರಿಷತ್ ಸದಸ್ಯರು ಮನವಿ ಮಾಡಿದ್ದರು ಕೊನೆಗೂ ಶಿಕ್ಷಣ ಇಲಾಖೆ ಆದೇಶ ಮಾಡಿದ್ದು ಲಾಕ್ ಡೌನ್ ಇದ್ದ ಜಿಲ್ಲೆಗಳ ಶಿಕ್ಷಕರಿಗೆ ವಿನಾಯಿತಿ ನೀಡಿ ಉಳಿದ ಎಲ್ಲಾ ಜಿಲ್ಲೆಗಳ ಶಿಕ್ಷಕರಿಗೆ ನಾಳೆಯಿಂದಲೇ ಶಾಲೆಗಳಿಗೆ ಹಾಜರಾಗಲು ಆದೇಶ ನೀಡಲಾಗಿದೆ ಇದೊಂದು ದೊಡ್ಡ ಪ್ರಮಾಣದಲ್ಲಿ ಅನ್ಯಾಯ ಮಾಡಿದಂತಾಗಿದೆ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬ ಆದೇಶ ಮಾಡಿದ್ದು ಬಸ್ ಇಲ್ಲದೇ ಶಾಲೆಗಳಿಗೆ ಶಿಕ್ಷಕರು ಹೇಗೆ ಹೋಗಬೇಕು ಎಂಬ ಪರಿಜ್ಞಾನ ಇಲ್ಲದೇ ಈ ಒಂದು ಆದೇಶ ಮಾಡಿದ್ದು ದುರಂತವೇ

ನಿಜವಾಗಿಯೂ ನಾಡಿನ ಶಿಕ್ಷಕರಿಗೆ ಇದೊಂದು ದೊಡ್ಡ ಅನ್ಯಾಯ ಎಲ್ಲಿದ್ದಿರಾ ಸಂಘಟನೆಯ ನಾಯಕರೇ ಇದೇನಾ ನಿಮ್ಮ ಧ್ವನಿ ಇದೇನಾ ನಿಮ್ಮ ನಾಯಕತ್ವ