ಕೋಲಾರ –
ಲೋಕಾಯುಕ್ತ ಬಲೆಗೆ ಕೋಲಾರ ಉಪ ವಿಭಾಗಾ ಧಿಕಾರಿ ಕಚೇರಿಯ ಕೇಸ್ ವರ್ಕರ್ ರೊಬ್ಬರು ಬಿದ್ದಿದ್ದಾರೆ ಹೌದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಉಪವಿಭಾಗಾಧಿಕಾರಿ ಕಚೇರಿಯಲ್ಲೇ 20 ಸಾವಿರ ಲಂಚ ಪಡೆಯುವ ವೇಳೆ ಕೇಸ್ ವರ್ಕರ್ ಕೋಮಲ ಲೋಕಾ ಬಲೆಗೆ ಬಿದ್ದಿದ್ದಾರೆ.
ಉತ್ತನೂರು ಗ್ರಾಮದ ರೈತ ಸುರೇಶ್ ಎಂಬುವರ ಪೌತಿ ಖಾತೆಗೆ 50 ಸಾವಿರ ಲಂಚಕ್ಕೆ ಭೇಡಿಕೆ ಇರಿಸಿ, ಮುಂಗಡ ವಾಗಿ 20 ಸಾವಿರ ಲಂಚ ಪಡೆಯುವ ವೇಳೆ ಹಣದ ಸಮೇತ ಸಿಕ್ಕಿಬಿದ್ದ ಕೋಮಲರನ್ನು ಕೋಲಾರ ಲೋಕಾಯುಕ್ತ ಇನ್ಸ್‌ಪೆಕ್ಟರ್ ರೇಣುಕ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕೋಲಾರ…..