ಬೆಂಗಳೂರು –
ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದವನ ಬಂಧನ – ಹೀಗೂ ಇರ್ತಾರೆ ಹುಷಾರಾಗಿರಿ ಎಂದ್ರು ಲೋಕಾಯುಕ್ತ ಅಧಿಕಾ ರಿಗಳು ಹೌದು ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಸುಲಿಗೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನಲ್ಲಿ ಬಂಧನ ಮಾಡಲಾಗಿದೆ.
ಲೋಕಾಯುಕ್ತ ಇನ್ಸ್ಪಕ್ಟರ್ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಂದಲೇ ಹಣವನ್ನು ಸುಲಿಗೆ ಮಾಡು ತ್ತಿದ್ದ ವಂಚಕನನ್ನು ಅರೆಸ್ಟ್ ಮಾಡಲಾಗಿದೆ. ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಸರ್ಕಾರಿ ಅಧಿಕಾರಿಗಳಿಗೆ ಸುಲಿಗೆ ಕರೆಗಳನ್ನು ಮಾಡುತ್ತಿದ್ದ.ಸುಮಾರು 40 ರಿಂದ 50 ಸರ್ಕಾರಿ ಅಧಿಕಾರಿಗಳಿಗೆ ವಂಚಿಸಿದ್ದಾನೆಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.ಕ್ರಿಮಿನಲ್ ಹಿನ್ನಲೆಯನ್ನು ಉಳ್ಳವನಾಗಿದ್ದು ಲೋಕಾಯುಕ್ತ ಇನ್ಸ್ಪೆಕ್ಟರ್ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಂ ದಲೇ ಹಣ ಸುಲಿಗೆಯನ್ನು ಮಾಡುತದ್ದ ವಂಚಕ ಶ್ರೀನಿವಾಸ್ ರೆಡ್ಡಿ ಬಂಧಿತವನಾಗಿದ್ದು.
ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿ ಸಿದ್ದಾರೆ.ಆರೋಪಿಯನ್ನು ಆಂಧ್ರಪ್ರದೇಶ ಮೂಲದ ಶ್ರೀನಿವಾಸ್ ರೆಡ್ಡಿ ಎಂದು ಗುರುತಿಸಲಾ ಗಿದೆ.ವಂಚನೆಗೊಳಗಾಗಿರುವ ಬಗ್ಗೆ ಸರ್ಕಾರಿ ಅಧಿಕಾರಿ ರಾಮದಾಸ್ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಸರ್ಕಾರಿ ಅಧಿಕಾರಿಯಿಂದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು ಚಲನಚಿತ್ರದಿಂದ ಸ್ಫೂರ್ತಿ ಪಡೆದ ನಂತರ ಅಧಿಕಾರಿಗಳಿಂದ ಸುಲಿಗೆ ಮಾಡಲು ಪ್ರಾರಂಭಿಸಿದ್ದನಂತೆ.ಶ್ರೀನಿವಾಸ್ ರೆಡ್ಡಿ 10 ನೇ ತರಗತಿಯವರೆಗೆ ಓದಿದ್ದು 2007 ರಿಂದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾಗಿದ್ದಾನೆ
ಈತನ ವಿರುದ್ಧ ಕರ್ನಾಟಕ,ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 36 ಪ್ರಕರಣಗಳು ದಾಖಲಾ ಗಿದ್ದು ಸಧ್ಯ ಈ ಕುರಿತಂತೆ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..