This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ಧಾರವಾಡ ದಲ್ಲಿ ಲೋಕಾಯುಕ್ತ ದಾಳಿ PWD FDC ಮಹಾಂತೇಶ್ ಗೆ ನ್ಯಾಯಾಂಗ ಬಂಧನ


ಧಾರವಾಡ

ಧಾರವಾಡದ ಶಿವಪ್ರಸಾದ ಲಿಂಗಪ್ಪ ಹೊಟ್ಟಿನ ಅವರು ಸಿವಿಲ್ ಕಾಂಟ್ರಾಕ್ಟ್ ರ ಪರವಾಣಿಗೆ ಪ್ರಮಾಣ ಪತ್ರವನ್ನು ಪಡೆಯಲು ಲೋಕೋ ಪಯೋಗಿ ಇಲಾಖೆ ಧಾರವಾಡ ಅಧೀಕ್ಷಕ ಅಭಿಯಂತರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಪ್ರಮಾಣ ಪತ್ರ ನೀಡಲು ಅಧೀಕ್ಷಕ ಅಭಯಂತರ ಕಚೇರಿಯ ಪ್ರಥಮ ದರ್ಜೆ ಸಹಾಯಕ  ಮಹಾಂತೇಶ ರೇವಣ್ಣಸಿದ್ದಪ್ಪ ಗೌಡಣ್ಣವರ ಅವರು ರೂ. 3,500ಗಳ ಲಂಚಕ್ಕಾಗಿ ಬೇಡಿಕೆ ಇಟ್ಟ ಬಗ್ಗೆ ಅರ್ಜಿದಾರ ಹೊಟ್ಟಿನ ಧಾರವಾಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು

ದೂರು ಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಲಂಚದ ಹಣದ ಸಮೇತ ಆರೋಪಿಯನ್ನು ದದ್ತಗಿರಿ ಮಾಡಿದ್ದು ಲೋಕಾಯುಕ್ತ ಧಾರವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾಂತೇಶ ರೇವಣ್ಣಸಿದ್ದಪ್ಪ ಗೌಡಣ್ಣವರ ಅವರು ದೂರುದಾರರಿಂದ ರೂ 3500/-ಲಂಚ ಪಡೆಯುವ ವೇಳೆಯಲ್ಲಿ ಎ. ಡಿ. ಜಿ. ಪಿ ಮತ್ತು ಐ ಜಿ. ಪಿ ಕರ್ನಾಟಕ ಲೋಕಾಯುಕ್ತ ಧಾರವಾಡ ಅವರ ಮಾರ್ಗದರ್ಶನದಲ್ಲಿ ಹಾಗೂ ಲೋಕಾ ಯುಕ್ತ ಪೊಲೀಸ್ ಅಧೀಕ್ಷಕರಾದ ಸತೀಶ ಚಿಟಗುಪ್ಪಿ

ಪೊಲೀಸ್ ಉಪಾಧಿಕ್ಷಕರಾದ ಹೆಚ್.ಕೆ ಪಠಾಣ ವಿಜಯ ಬಿರಾದಾರ ಅವರ ನೇತೃತ್ವದಲ್ಲಿ ಧಾರವಾಡ ಲೋಕಾಯುಕ್ತ ಪೊಲೀಸ್ ಠಾಣೆಯ ನಿರೀಕ್ಷಕರಾದ ಬಸವರಾಜ ಅವಟಿ ಹಾಗೂ ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿ ಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರಪಡಿಸಿದ್ದಾರೆ.ಮತ್ತು ಸದರಿ ಆರೋಪಿ ಯನ್ನು ನ್ಯಾಯಾಂಗ ಬಂದನಕ್ಕೆ ಒಳಪಡಿಸ ಲಾಗಿದೆ.

ಈ ಪ್ರಕರಣವನ್ನು  ಧಾರವಾಡ ಪೊಲೀಸ್ ಠಾಣೆಯ ಪೊಲೀಸ್ ನೀರಿಕ್ಷಕರಾದ ಬಸವರಾಜ ಅವಟಿ ಅವರು ತನಿಖೆ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕ್ಷಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News Join The Telegram Join The WhatsApp

 

 

Suddi Sante Desk

Leave a Reply