ಬೆಂಗಳೂರು –
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ದಲ್ಲಿ 13 ಜಿಲ್ಲೆಗಳು ಸಚಿವ ಸ್ಥಾನದಿಂದ ವಂಚಿತ ವಾಗಿವೆ.ಹೌದು ಪ್ರಾದೇಶಿಕ ಸಮತೋಲನ ಪ್ರದೇಶ ವಾರು,ಸಾಮಾಜಿಕ ನ್ಯಾಯದ ಮೇಲೆ ಅಳೆದು ತೂಗಿ ಸಚಿವ ಸಂಪುಟವನ್ನು ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿಕೊಂಡರೂ ಈಗ ರಚನೆಯಾಗಿರುವ ಸಂಪುಟದಲ್ಲಿ 13 ಜಿಲ್ಲೆಗ ಳಿಗೆ ಪ್ರಾಶಸ್ತ್ಯ ಸಿಕ್ಕಿಲ್ಲ ಎಂಬ ಮಾತು ಸತ್ಯವಾಗಿದೆ
ಹೌದು ಮೈಸೂರು, ಕಲಬುರಗಿ, ರಾಮನಗರ, ಕೊಡಗು,ರಾಯಚೂರು, ಹಾಸನ, ವಿಜಯಪುರ, ಬಳ್ಳಾರಿ,ದಾವಣಗೆರೆ,ಕೋಲಾರ,ಯಾದಗಿರಿ, ಚಿಕ್ಕ ಮಗಳೂರು ಜಿಲ್ಲೆಗಳಿಗೆ ಸಂಪುಟದಲ್ಲಿ ಸ್ಥಾನಮಾನ ಸಿಕ್ಕಿಲ್ಲ. ಕೇವಲ 18 ಜಿಲ್ಲೆಗಳಿಗೆ ಮಾತ್ರ ಮಣೆ ಹಾಕ ಲಾಗಿದೆ.
ಬಿಜೆಪಿಯ ಭದ್ರಕೋಟೆ ಜಿಲ್ಲೆಗಳಾದ ಚಿಕ್ಕಮಗಳೂ ರಿನಲ್ಲಿ ನಾಲ್ವರು,ದಾವಣಗೆರೆ 5,ಬಳ್ಳಾರಿ 2, ಮೈಸೂರು 3, ಕೊಡಗು 2,ವಿಜಯಪುರ, ಯಾದಗಿರಿ ತಲಾ ಮೂವರು ಶಾಸಕರು ಇದ್ದರು ಕೂಡ ಈ ಜಿಲ್ಲೆಗಳಿಗೆ ಸ್ಥಾನಮಾನ ನೀಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.ಅದರಲ್ಲೂ ಈ ಬಾರಿ ಸಂಪುಟದಲ್ಲಿ ಮಧ್ಯಕರ್ನಾಟಕ ರಾಜಧಾನಿ ದಾವಣಗೆರೆ,ಚಿಕ್ಕಮಗಳೂರು ಜಿಲ್ಲೆಗಳಿಗೆ ಪ್ರಾಶಸ್ತ್ಯ ಸಿಗಲಿದೆ ಎಂಬ ನಿರೀಕ್ಷೆ ಇತ್ತು.ಆದರೆ ಇದೀಗ ನಿರೀಕ್ಷೆ ಹುಸಿಯಾಗಿದೆ.ಉಳಿದಂತೆ 6 ಜಿಲ್ಲೆಗಳಿಂದ ತಲಾ ಇಬ್ಬರು ಶಾಸಕರಿಗೆ ಮಣೆ ಹಾಕಲಾಗಿದೆ.ಬೆಳಗಾವಿ, ಹಾವೇರಿ, ಶಿವಮೊಗ್ಗ,ತುಮಕೂರು, ಬಾಗಲಕೋಟೆ, ಉಡುಪಿ ಜಿಲ್ಲೆಗಳಿಗೆ ಎರಡು ಸ್ಥಾನವನ್ನು ಕೊಡಲಾ ಗಿದ್ದು ಉಳಿದ ಅನ್ಯಾಯಕ್ಕೊಳಗಾಗದಂತೆ ಒತ್ತಾಯ ಮಾಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು