CM ಜೊತೆಯಲ್ಲಿ ಪ್ರಚಾರ ಮಾಡಿದ ಶಾಸಕ ಅಮೃತ ದೇಸಾಯಿ – ಪಕ್ಷದ ಅಭ್ಯರ್ಥಿ ಪರ ಹಾನಗಲ್ ನಲ್ಲಿ ಅಬ್ಬರದ ಪ್ರಚಾರ

Suddi Sante Desk

ಹಾನಗಲ್ –

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಪ್ರಚಾರ ಮಾಡಿದರು.ಕ್ಷೇತ್ರದ ಯಳವಟ್ಟಿ,ಹುಲ್ಲತ್ತಿ ಹಾಗೂ ಬೈಚವಳ್ಳಿ ಗ್ರಾಮದಲ್ಲಿ ರೋಡ ಶೋ ಮೂಲಕವಾಗಿ ಅಭ್ಯರ್ಥಿ ಶಿವರಾಮ ಸಜ್ಜನರ್ ಅವರ ಪರವಾಗಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾನ್ಯ ಜನಪ್ರಿಯ ಸಂಸದರಾದ ಶಿವಕುಮಾರ ಉದಾಸಿ,ಸಚಿವರಾದ ಶಿವರಾಂ ಹೆಬ್ಬಾರ್ ಮಾಜಿ ಶಾಸಕರಾದ ಬಿ.ಪಿ.ಹರೀಶ್,ಮುಖಂಡರಾದ ತವನಪ್ಪ ಅಷ್ಟಗಿ, ಕೆಎಂಎಫ್ ಅಧ್ಯಕ್ಷರಾದ ಶಂಕರ ಮುಗದ,ರುದ್ರಪ್ಪ ಅರಿವಾಳ,ಸಂತೋಷ ಗೌಡ ಪಾಟೀಲ, ಬಸವರಾಜ ಹೊಸುರ, ನಾಗನಗೌಡ ಪಾಟೀಲ, ಹಾಗೂ ವಿವಿಧ ಪದಾಧಿಕಾರಿಗಳು,ಕಾರ್ಯಕರ್ತರು ಉಪಸ್ಥಿತರಿ ದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.