ವರ್ಗಾವಣೆ ವಿಚಾರದಲ್ಲಿ ಶಿಕ್ಷಣ ಸಚಿವರನ್ನುಭೇಟಿಯಾದ  ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಮಧುಗಿರಿ ಘಟಕ

Suddi Sante Desk

ಬೆಂಗಳೂರು –


ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ರಾಗಿ ಬಿ ಸಿ ನಾಗೇಶ್ ಅವರು ಅಧಿಕಾರ ವಹಿಸಿ ಕೊಂಡ ನಂತರ ಇವರನ್ನು ರಾಜ್ಯದ ಮಹಿಳಾ ಶಿಕ್ಷಕಿಯರ ಪರವಾಗಿ ಧ್ವನಿಯಾಗಿ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಮಧುಗಿರಿ ಘಟಕದವರು ಭೇಟಿಯಾದರು ಬೆಂಗಳೂರಿನಲ್ಲಿ ಜಿಲ್ಲಾ ಘಟಕದಿಂದ ಭೇಟಿಯಾಗಿ ಅಭಿನಂದನೆ ಗಳನ್ನು ಸಲ್ಲಿಸಿ ಗೌರವಿಸಲಾಯಿತು.

ಇದೇ ವೇಳೆ ಸಧ್ಯ ಎದುರಾಗಿರುವ ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ಗಂಭೀರವಾಗಿ ಚರ್ಚೆಯನ್ನು ಮಾಡಲಾಯಿತು.ಸರಳ ಸಜ್ಜನಿಕೆಯ ಹಾಗೇ ಮಹಿಳಾ ಶಿಕ್ಷಕಿಯರ ಬಗ್ಗೆ ಅಪಾರ ಗೌರವ ಹೊಂದಿರುವ ನೂತನ ಶಿಕ್ಷಣ ಸಚಿವರನ್ನು ಸಂಘಧ ಪರವಾಗಿ ಭೇಟಿ ಮಾಡಲಾಯಿತು.

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ( ರಿ) ರಾಜ್ಯ ಘಟಕ ಧಾರವಾಡ ಸಂಸ್ಥಾಪಕ ಅಧ್ಯಕ್ಷರಾದ ಡಾ ಲತಾ ಎಸ್ ಮುಳ್ಳೂರ ಪ್ರಧಾನ ಕಾರ್ಯದರ್ಶಿ ಜ್ಯೋತಿ ಹೆಚ್ ಮಾರ್ಗದರ್ಶನದಲ್ಲಿ ಸಂಘದ ಸರ್ವ ಸದಸ್ಯರ ಧ್ವನಿಯಾಗಿ ಜಿಲ್ಲೆಯ ವಿವಿಧ ತಾಲ್ಲೂಕಿನ ಪದಾಧಿಕಾರಿಗಳು ಜಿಲ್ಲಾ ಘಟಕದ ವತಿಯಿಂದ ಹಾಗೂ ಬಹಳ ಕ್ರಿಯಾಶೀ ಲರು.

ನೇರ ದಿಟ್ಟ ನಿರ0ತರ  ಎನ್ನುವಂತೆ ಎಲ್ಲ ಪದಾಧಿ ಕಾರಿಗಳಿಗೆ ಹುರುಪು ಹುಮ್ಮಸ್ಸು ತುಂಬುತ್ತಾ  ಅತ್ತ್ಯುತ್ತಮವಾಗಿ ಸಂಘಟನೆಯಲ್ಲಿ ತೊಡಗಿದ  ರಾಜ್ಯ ಹಿರಿಯ ಉಪಾಧ್ಯಕ್ಷರಾದ ಶ್ರೀಮತಿ ಅನಸೂಯಾ ನೇತೃತ್ವದಲ್ಲಿ ಮಹಿಳಾ ಶಿಕ್ಷಕಿಯರ ಕುಂದು ಕೊರತೆಯ ಬಗ್ಗೆ ಹಾಗೂ ಶೈಕ್ಷಣಿಕ ಕಾರ್ಯಾ ಗಾರಗಳಲ್ಲಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘಕ್ಕೂ ಪ್ರಾಧಾನ್ಯತೆ ನೀಡುವ ಬಗ್ಗೆ  ಹಾಗೂ ಹಾಗೂ ಶಿಕ್ಷಕರ ಸ್ನೇಹಿ ವರ್ಗಾವಣೆ ಜಾರಿಗೆ ಬರುವಂತೆ ಅನೂಕೂಲ ಮಾಡಿಕೊಡಬೇಕು ಹಾಗೂ 25% ಖಾಲಿ ಹುದ್ದೆ ಈ ನಿಯಮ ರದ್ದುಗೊ ಳಿಸಬೇಕೆಂದು ಒತ್ತಾಯವನ್ನು ಮಾಡಲಾಯಿತು.

ನಮ್ಮ ಸಂಘಟನೆಗೆ ತಮ್ಮ ಪ್ರೋತ್ಸಾಹ ಸಹಕಾರ ಹಾಗೂ ಬೆಂಬಲ ಯಾವಾಗಲೂ ಇರಲಿ ಎಂದು ವಿನಂತಿಸಿಕೊಳ್ಳಲಾಯಿತು ಶ್ರೀಯುತರು ಸಕಾರಾತ್ಮ ಕವಾಗಿ ಸ್ಪಂದಿಸಿರುತ್ತಾರೆ ಈ ಸಂದರ್ಭದಲ್ಲಿ ತುಮ ಕೂರು ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಅನಸೂಯಾ ದೇವಿ ಮಧುಗಿರಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಜಿ ಎಲ್ ರಾಧಮ್ಮ ಕಾರ್ಯದರ್ಶಿಯಾದ ಶ್ರೀಮತಿ ಲತಾಮಣಿ H.K.ಕೊರಟಗೆರೆ ತಾಲ್ಲೂಕು ಅಧ್ಯಕ್ಷರಾದ  ಶ್ರೀಮತಿ ಸುಜಾತಾ ಜಿ ತಿಪಟೂರು ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ವನಿತಾ ಬಿ ಆರ್.ಕಾರ್ಯ ದರ್ಶಿಯಾದ ಶ್ರೀಮತಿಪುಷ್ಪಾವತಿ ಕೋಶಾಧ್ಯಕ್ಷರಾದ ಶ್ರೀಮತಿ  ರಾಧಾಮಣಿ ಉಪಾಧ್ಯಕ್ಷರುಗಳಾದ ಶ್ರೀಮತಿ  ಮುಕ್ತ ಮಣಿ ಮತ್ತು ಶ್ರೀಮತಿ ಸಾವಿತ್ರಿ ಹಾಗೂ ಸಹ ಕಾರ್ಯದರ್ಶಿಗಳಾದ ಶ್ರೀಮತಿ  ಜೈಶೀಲ ಹಾಗೂ ಶ್ರೀಮತಿ ಸೀತಮ್ಮ ತುರುವೇಕೆರೆ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಲತಾ ರಾಜ್ ಕಾರ್ಯದರ್ಶಿಯಾದ ಶ್ರೀಮತಿ ಸಾವಿತ್ರಿ ಹಾಗೂ   ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಧ್ಯಕ್ಷರಾದ  ಯಶೋದಾ ಗುಬ್ಬಿ ತಾಲ್ಲೂಕಿನ ಶಿಕ್ಷಕರಾದ ರಂಗಸ್ವಾಮಿ ಜೆ.ಎಸ್ .ಹಾಜರಿದ್ದರು

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.