ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಮಹಾ ಪರಿನಿರ್ವಾಣ ದಿನಾಚರಣೆ – ಸುರೇಶ ಗೋಕಾಕ ನೇತ್ರತ್ವದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಗೆ ಪುಷ್ಪಾರ್ಪಣೆ ನಮನ ಸಲ್ಲಿಕೆ
ಮಹಾ ಪರಿನಿರ್ವಾಣ ದಿನಚರಣೆಯನ್ನು ಹುಬ್ಬಳ್ಳಿ ಯಲ್ಲೂ ಆಚರಣೆ ಮಾಡಲಾಯಿತು.ನಗರದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಈ ಒಂದು ಕಾರ್ಯಕ್ರಮವನ್ನು ಮಾಡಲಾಯಿತು.ಇದೇ ವೇಳೆ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಸುರೇಶ ಗೋಕಾರ ನೇತ್ರತ್ವದಲ್ಲಿ ಪುಷ್ಪಾರ್ಪಣೆಯನ್ನು ಮಾಡಲಾಯಿತು.
ಇದರೊಂದಿಗೆ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆಯನ್ನು ಆಚರಿಸಲಾಯಿತು.ನಗರದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಸುರೇಶ ಗೋಕಾಕ ಸೇರಿದಂತೆ ಹಲವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ನೆನೆದು ಕಾರ್ಯಕ್ರಮ ಜರುಗಿತು.
ಈ ಒಂದು ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಕೃಷ್ಣ ಗೋಕಾಕ್, ಯಲ್ಲಪ್ಪ ಅಂಬಿಗೇರ, ಸಂತೋಷ್ ಬೈಗೋಳ,ವಿವೇಕ್ ವಾಲ್ಮೀಕಿ
,ಮೌನೇಶ್ ಹಿರೇಮಠ,ಕಿರಣ್ ಸಾಲಗಾರ್ ಸೇರಿದಂತೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸದಸ್ಯರು ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……