ಬೆಂಗಳೂರು –
ರಾಜ್ಯದಲ್ಲಿ ಎಲ್ಲಾ ಸಮಾಜಕ್ಕೆ ಇರುವ ಪ್ರತ್ಯೇಕವಾದ ನಿಗಮ ಮಂಡಳಿ ಸ್ಥಾಪನೆಯಂತೆ ಮಹಾಪ್ರಸಾಧಿ ಶಿವಶರಣ ಢೋರ ಕಕ್ಕಯ್ಯ ನಿಗಮ ಮಂಡಳಿ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಢೋರ ಕಕ್ಕಯ್ಯ ಸಮಾಜದ ರಾಜ್ಯ ಅಧ್ಯಕ್ಷರಾದ ಸಂತೋಷ ಸವಣೂರು ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರಿಗೆ ಭೇಟಿಯಾಗಿ ಮನವಿ ನೀಡಲಾಯಿತು

ಬೆಂಗಳೂರಿನ ಕೃಷ್ಣ ಕಚೇರಿಯಲ್ಲಿ CM ಭೇಟಿ ಯಾಗಿ ಈ ಕೂಡಲೇ ಸಮಾಜಕ್ಕೆ ತುಂಬಾ ಅವಶ್ಯಕವಾಗಿರುವ ನಿಗಮ ಮಂಡಳಿಯನ್ನು ಸ್ಥಾಪನೆ ಮಾಡುವಂತೆ ಒತ್ತಾಯ ಮಾಡಿದರು ಅಲ್ಲದೇ ಮನವಿಯನ್ನು ನೀಡಿದರು ಸಮಾಜದ ರಾಜ್ಯಾಧ್ಯಕ್ಷ ಸಂತೋಷ ಸವಣೂರು

ರಾಜ್ಯದಲ್ಲಿ ಢೋರ ಕಕ್ಕಯ್ಯ ಸಮಾಜದವರು ತುಂಬಾ ಜನ ಇದ್ದಾರೆ ಹೀಗಾಗಿ ಅಭಿವೃದ್ಧಿಯ ಹಿತದೃಷ್ಟಿಯಿಂದ ನಿಗಮ ಮಂಡಳಿ ಸ್ಥಾಪನೆ ಮಾಡುವಂತೆ ಆಗ್ರಹ ಮಾಡಿದರು.