ಬೆಂಗಳೂರು –
ಮಾನ್ಯ ಷಡಕ್ಷರಿ ಅವರಿಗೆ ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತಾ ಶಿಕ್ಷಕರಿಗೆ ಎಪ್ರಿಲ್ ತಿಂಗಳ 27 ತಾರೀಖು 2021ರಿಂದ ಜೂನ್ ತಿಂಗಳ 14 ನೇ ತಾರೀಖು ವರೆಗೆ ಕೊವಿಡ್-19 ರ ಕಾರಣದಿಂದ ಈ ವರ್ಷ ಬೇಸಿಗೆ ರಜೆ ಘೋಷಣೆ ಆಗಿರುತ್ತದೆ.
ಈಗ ಕೋರೊನಾ ಸಂಕಷ್ಟ ಸಮಯದಲ್ಲಿ 2ನೇ ಅಲೆ ಇನ್ನೂ ರಾಜ್ಯದಲ್ಲಿ ಕಡಿಮೆ ಆಗಿರುವುದಿಲ್ಲ.ಪ್ರತಿ ದಿನ ಹತ್ತು ಸಾವಿರದ ಮೇಲೆ ಪಾಸಿಟಿವ್ ಪ್ರಕರಣಗಳು ಬರುತ್ತಿದ್ದು,ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಸಕ್ರಿಯ ಕೋರೋನಾ ಪ್ರಕರಣಗಳು ಇವೆ
ಕೆಲವು ಜಿಲ್ಲೆಗಳಲ್ಲಿ ಕೋರೋನಾ ಪಾಸಿಟಿವ್ ರೇಟ್ ಶೇಕಡಾವಾರು 20-25 ರಷ್ಟು ಹಾಗೂ ಕೆಲವು ಜಿಲ್ಲೆಗ ಳಲ್ಲಿ ಕೋರೋನಾ ಪಾಸಿಟಿವ್ ರೇಟ್ ಶೇಕಡವಾರು 10-20 ರಷ್ಟು ಇದೆ,ಉದಾಹರಣೆಗೆ ಮೈಸೂರು, ಮಂಡ್ಯ,
ಹಾಸನ,ಶಿವಮೊಗ್ಗ,ದಕ್ಷಿಣ ಕನ್ನಡ,ಕೊಡಗು,ಚಿಕ್ಕ ಮಗಳೂರು,ವಿಜಯಪುರ,ಉಡುಪಿ,ಬೆಳಗಾವಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ ಮುಂತಾದ ಹಲವಾರು ಜಿಲ್ಲೆಗಳಲ್ಲಿ ಕೋರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚು ಇವೆ
ಹಾಗೂ ದಿನಾಂಕ-10-06-2021 ರಂದು ಮಾನ್ಯ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದಲ್ಲಿ ಹೆಚ್ಚು ಕೋರೋನಾ ಪಾಸಿಟಿವ್ ಪ್ರಕರ ಣಗಳು ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿ
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹಾಗೂ ರಾಜ್ಯ ದ ಕೋವಿಡ್ ಉಸ್ತುವಾರಿ ಸಚಿವರ ಸಭೆಯ ನಂತರ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಇನ್ನೂ ಒಂದು ವಾರ ಮುಂದುವರೆಸುವ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲಂಬಿಸಿ ತಿರ್ಮಾನ ತೆಗೆದು ಕೊಳ್ಳುವ ಬಗ್ಗೆ ತಿಳಿಸಿರುತ್ತಾ ಶಿಕ್ಷಕರಿಗೆ ಬೇಸಿಗೆ ರಜೆಯನ್ನು ಮುಂದುವರಿಸಲು ಮಾನ್ಯ ವಿಧಾನ ಪರಿಷತ್ ಸದಸ್ಯರು ಕರ್ನಾಟಕ ಸರ್ಕಾರ ಬೆಂಗಳೂರು ರವರು,ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು,ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಶಿಕ್ಷಕರ ಸಂಘ(ರಿ) ಹುಬ್ಬಳ್ಳಿ,ಹಾಗೂ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ) ಧಾರವಾಡ,ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ(ರಿ) ಧಾರವಾಡ,
ಮಾನ್ಯ ಮುಖ್ಯಮಂತ್ರಿಗಳಿಗೆ ಶಿಕ್ಷಣ ಇಲಾಖೆಯ ಮಾನ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಹಾಗೂ ಮಾನ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ರಿಗೆ ಪತ್ರ ಬರೆದು ಶಿಕ್ಷಕರಿಗೆ ಬೇಸಿಗೆ ರಜೆಯನ್ನು ಜೂನ್ ತಿಂಗಳ 30ನೇ ತಾರೀಖಿನ ನವರೆಗೂ ಮುಂದುವರಿಸಲು ಪತ್ರ ಬರೆದಿರುತ್ತಾರೆ.
ಈ ನಡುವೆ ಹಲವಾರು ಶಿಕ್ಷಕರು ಕೋರೋನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.ಹಾಗೂ ಕೋರೋನಾ ಸೋಂಕಿತ ಶಿಕ್ಷಕರ ಕುಟುಂಬಗಳು ಹಾಗೂ ಕೋರೋನಾ ಸೋಂಕಿತ ವಿದ್ಯಾರ್ಥಿಗಳು ಪೋಷಕರು ಇನ್ನೂ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಕೆರ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದಾರೆ.
ಹಲವಾರು ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವ ರೆಸಿ ದರಿಂದ ಸಂಪೂರ್ಣ ಸಾರಿಗೆ ವ್ಯವಸ್ಥೆ ಇರುವು ದಿಲ್ಲ,ರಾಜ್ಯದಲ್ಲಿ KSRTC ಹಾಗೂ BMTC ಹಾಗೂ ಖಾಸಗಿ ಬಸ್ ವ್ಯವಸ್ಥೆ ಇರುವುದಿಲ್ಲ.ರಾಜ್ಯದಲ್ಲಿ ಶಿಕ್ಷಕರಿಗೆ ಎಲ್ಲಾರಿಗೂ ಕೋರೋನಾ ಲಸಿಕೆ ಹಾಕಿರು ವುದಿಲ್ಲ.ಒಂದನೇ ಡೋಸ್ ಲಸಿಕೆ ಹಾಕಿರುವ ಶಿಕ್ಷಕ ರಿಗೆ 2ನೇ ಡೋಸ್ ಲಸಿಕೆ ಹಾಕಿರುವುದಿಲ್ಲ.ರಾಜ್ಯದ ಲ್ಲಿ ಮಕ್ಕಳಿಗೆ ಇನ್ನೂ ಕೋರೋನಾ ಲಸಿಕೆ ಬಂದಿರು ವುದಿಲ್ಲ.ದಿನಾಂಕ- 10-06-2021ರಂದು ಮಾನ್ಯ ಮುಖ್ಯಮಂತ್ರಿಗಳು ಘೋಷಣೆ ಮಾಡಿರುವಂತೆ ರಾಜ್ಯದ 11ಜಿಲ್ಲೆಗಳಲ್ಲಿ ಲಾಕ್ ಡೌನ್ ಹಾಗೂ 19 ಜಿಲ್ಲೆಗಳಲ್ಲಿ ಸೆಮಿಲಾಕ್ ಡೌನ್ ಮುಂದುವರೆದಿದೆ.
ಆದ್ದರಿಂದ ಮಕ್ಕಳ ಹಾಗೂ ಶಿಕ್ಷಕರ ಆರೋಗ್ಯ ರಕ್ಷಣೆ ಮಾಡುವ ಮೂಲಕ ಜೂನ್ ತಿಂಗಳ 30 ತಾರೀಖು ವರೆಗೆ ಅಂದರೆ ಇನ್ನೂ 2ವಾರಗಳವರೆಗೆ ಶಿಕ್ಷಕರಿಗೆ ರಜೆಯನ್ನು ಮುಂದುವರಿಸಲು ತಾವು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಮಾನ್ಯ ಶಿಕ್ಷಣ ಸಚಿವರಿಗೆ ಪತ್ರ ಬರೆದು ಚರ್ಚಿಸ ಬೇಕೆಂದು ಈ ಮೂಲಕ ಎಲ್ಲಾ ಶಿಕ್ಷಕರು ತಮ್ಮಲ್ಲಿ ಕೇಳಿಕೊಳ್ಳತ್ತೇವೆ.
ಇಂತಿ ತಮ್ಮವಿಶ್ವಾಸಿಗಳು
ಮಹೇಶ ಬೂದನೂರು ಮಂಡ್ಯ
G.ರಂಗಸ್ವಾಮಿ ಮಧುಗಿರಿ
ಹಾಗೂ ಷಡಕ್ಷರಿ ಸರ್ ಅಭಿಮಾನಿಗಳ ಬಳಗ.