ಬೆಂಗಳೂರು –
ಕೇಂದ್ರ ಕಚೇರಿಯಲ್ಲಿಯೇ ಸಾರಿಗೆ ನೌಕರ ಆತ್ಮಹತ್ಯೆ – ರೆಕಾರ್ಡ್ ರೂಮ್ ನಲ್ಲಿಯೇ ನೇಣಿಗೆ ಶರಣಾದ ಮಹೇಶ್…..
ಸಾರಿಗೆ ನೌಕರನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿ ನಲ್ಲಿ ನಡೆದಿದೆ.ಬೆಂಗಳೂರಿನ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿಯೇ ಈ ಒಂದು ಘಟನೆ ನಡಿದಿದೆ ಕರ್ತವ್ಯದ ಸಮಯದಲ್ಲಿಯೇ ನೌಕರ ಆತ್ಮಹ ತ್ಯೆಗೆ ಶರಣಾಗಿದ್ದು ಬಿಎಂಟಿಸಿ ಕೇಂದ್ರ ಕಚೇರಿಯ 5 ನೇ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ರೆಕಾರ್ಡ್ ರೂಂ ನಲ್ಲೇ ನೇಣು ಬಿಗಿದುಕೊಂಡಿ ದ್ದಾರೆ
ಕಿರಿಯ ಸಹಾಯಕ ಮಹೇಶ್ ಆತ್ಮಹತ್ಯೆ ಮಾಡಿಕೊಂಡಿರುವ ನೌಕರನಾಗಿದ್ದು ಮೊನ್ನೆ ಯಷ್ಟೇ ವರ್ಗಾವಣೆಯಾಗಿ ಬಂದಿದ್ದನು ಮಹೇಶ್.38 ವರ್ಷದ ಇವರು ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.ಕಾರ್ಯ ಒತ್ತಡಕ್ಕೆ ಬೇಸತ್ತು ಆತ್ಮಹತ್ಯೆಯನ್ನು ಮಾಡಿ ಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪ. ಡಿಸಿದ್ದಾರೆ.
ಬೆಳಗ್ಗೆ 6 ಗಂಟೆಗೆ ಕಚೇರಿಗೆ ಬಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು ಭದ್ರತಾ ವೈಫಲ್ಯವೇ ಆತ್ಮಹತ್ಯೆಗೆ ಕಾರಣವಾಗಿದ್ದು ನೌಕರ ಆತ್ಮಹತ್ಯೆಗೆ ನೌಕರ ವರ್ಗ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಈ ಒಂದು ಕುರಿತಂತೆ ಸಧ್ಯ ಸ್ಥಳಕ್ಕೆ ಪೊಲೀಸರು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..