ಹೊನ್ನಾಳಿ –
ಸರ್ಕಾರಿ ಶಾಲೆಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ದೌರ್ಜನ್ಯ ಮಾಡುತ್ತಿದ್ದ ಆರೋಪಿಯನ್ನು ಬಂಧನ ಮಾಡಲಾಗಿದೆ. ಹೌದು ಹೊನ್ನಾಳಿ ತಾಲ್ಲೂಕಿನ ಗ್ರಾಮ ವೊಂದರ ಸರ್ಕಾರಿ ಶಾಲೆಯಲ್ಲಿ ಬಾಲಕಿಗೆ (10) ಲೈಂಗಿಕ ಕಿರುಕುಳ ನೀಡಲಾಗಿದ್ದು.ಆರೋಪಿ ಮಹೇಶ್ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದಲ್ಲಿ ಸಂಜೆ ಶಾಲೆ ಬಿಟ್ಟ ನಂತರ ಬಾಲಕಿ ಹಾಗೂ ಆಕೆಯ ಸ್ನೇಹಿತೆ ಶಾಲೆಯಲ್ಲಿಯೇ ಹೋಂವರ್ಕ್ ಮಾಡುತ್ತಿ ದ್ದರು.ಆಗ ಆರೋಪಿಯು ಆಕೆಯ ಸ್ನೇಹಿತೆಯನ್ನು ಗದರಿಸಿ ಹೊರಗೆ ಕಳುಹಿಸಿ ನಂತರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನಂತೆ ಎಂದು ಪೋಷಕರು ಪೊಲೀಸರಿಗೆ ಈ ಒಂದು ವಿಚಾರ ಕುರಿತು ದೂರನ್ನು ನೀಡಿದ್ದಾರೆ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.