ಧಾರವಾಡ –
ಧಾರವಾಡದ ಡಿಮ್ಹಾನ್ಸ್’ ಮುಖ್ಯ ಆಡಳಿತಾಧಿಕಾರಿ ಯಾಗಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅಧಿಕಾರ ವನ್ನು ವಹಿಸಿಕೊಂಡಿದ್ದಾರೆ ಹೌದು ನಗರದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) ನೂತನ ಮುಖ್ಯ ಆಡಳಿತಾಧಿಕಾರಿಯಾಗಿ ಹಿರಿಯ ಕೆ.ಎ.ಎಸ್. ಅಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಎಸ್. ಹಿರೇಮಠ ಅಧಿಕಾರ ವಹಿಸಿಕೊಂಡರು.
ಮೂಲತಃ ವಿಜಯಪೂರ ಜಿಲ್ಲೆಯವರಾದ ಇವರು 2008ರಲ್ಲಿ ಕರ್ನಾಟಕ ಆಡಳಿತ ಸೇವೆ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೆಯ ರಾಂಕ್ ಪಡೆದು ಅಸಿಸ್ಟೆಂಟ್ ಕಮೀಷನರ್ ಆಗಿ ಆಯ್ಕೆಗೊಂಡು ಬೈಲಹೊಂಗಲ ಉಪವಿಭಾಗಾಧಿಕಾರಿಯಾಗಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ, ಧಾರವಾಡ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳಾಗಿ,
ಹುಬ್ಬಳ್ಳಿ ಹೆಸ್ಕಾಂನ ಪ್ರಧಾನ ವ್ಯವಸ್ಥಾಪಕರಾಗಿ ಹಾಗೂ ಬಾಗಲಕೋಟೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಹಾಗೂ ಪುನರ್ವಸತಿಯ ಪ್ರಧಾನ ವ್ಯವಸ್ಥಾಪಕರಾಗಿ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಅಪರ ಆಯುಕ್ತರಾಗಿ ಉತ್ಕೃಷ್ಟ ಸೇವೆ ಸಲ್ಲಿಸಿದ್ದಾರೆ.
ನಿಕಟಪೂರ್ವದಲ್ಲಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದ ಹುಬ್ಬಳ್ಳಿಯ ಪ್ರಾದೇಶಿಕ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದರು.
ಆರಂಭದಲ್ಲಿ ಇವರು ಭಾರತೀಯ ಸೈನ್ಯದ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ರೆಜಿಮೆಂಟಿನ 11ನೇ ಬಟಾಲಿಯನ್ ದಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನೇಮಕ ಗೊಂಡು ಜಮ್ಮು-ಕಾಶ್ಮೀರದ ಡ್ರಾಸ್, ಕಾರ್ಗಿಲ್ ಮತ್ತು ಬಿಲಾವರ, ಮಧ್ಯಪ್ರದೇಶದ ಇಂದೋರ, ಆಸ್ಸಾಂನ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯ ದಿಘು ಮತ್ತು ಅರುಣಾ ಚಲ ಪ್ರದೇಶದ ವೆಸ್ಟ ಕೆಮೆಂಗ್ ಜಿಲ್ಲೆಯ ಗಚ್ಚಂ ಸೇರಿ ಹಲವಾರು ಸ್ಥಳಗಳಲ್ಲಿ ಭಾರತೀಯ ಸೈನ್ಯದಲ್ಲಿ ಕ್ಯಾಪ್ಟನ್ ಮತ್ತು ಮೇಜರ್ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಹಲವಾರು ಪ್ರಶಸ್ತಿ, ಪುರಸ್ಕಾರ, ಮೆಡಲ್‌ಗಳನ್ನು ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ.
ಸಧ್ಯ ಧಾರವಾಡದ ‘ಡಿಮ್ಹಾನ್ಸ್’ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಇವರನ್ನು ಸಿಬ್ಬಂದಿ ವರ್ಗದ ವರು ಹಾಜರಿದ್ದು ಸ್ವಾಗತಿಸಿದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..