ಹುಬ್ಬಳ್ಳಿ –
ರೇಲ್ವೆ ಸೇತುವೆ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಕೇಂದ್ರ ಸಚಿವರ ಅಪರ ಆಪ್ತ ಕಾರ್ಯ ದರ್ಶಿ ಮಲ್ಲಿಕಾರ್ಜುನ ಪಾಟೀಲ – ನಿರ್ಮಾಣವಾ ಗುತ್ತಿದೆ ನಗರದಲ್ಲಿ ಮತ್ತೊಂದು ಆಕರ್ಷಣೆಯ ಮಹತ್ವದ ಸುಂದರ ಯೋಜನೆ ಹೌದು
ಪ್ರಹ್ಲಾದ್ ಜೋಶಿಯವರು ಕೇಂದ್ರ ಸಚಿವರಾದ ಮೇಲೆ ನಗರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾಮಗಾರಿಗಳು ಯೋಜನೆಗಳು ಬರುತ್ತಿವೆ. ಒಂದರ ಮೇಲೊಂದರಂತೆ ನಗರದಲ್ಲಿ ಯೋಜನೆ ಗಳನ್ನು ಕೇಂದ್ರ ಸಚಿವರು ತಗೆದುಕೊಂಡು ಬರುತ್ತಿ ದ್ದು ಸಧ್ಯ ನಡೆಯುತ್ತಿವೆ.
ಇನ್ನೂ ಧಾರವಾಡದ ಶ್ರೀನಗರ ಸರ್ಕಲ್ ನಲ್ಲಿ ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗಿದ್ದ ರೇಲ್ವೆ ಸೇತುವೆ ಕಾಮಗಾರಿ ಸಧ್ಯ ನಡೆಯುತ್ತಿದೆ. ಶ್ರೀನಗ ರದಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊಗಲು ರೇಲ್ವೆ ಟ್ರ್ಯಾಕ್ ದೊಡ್ಡ ತೊಂದರೆಯಾಗಿದ್ದು
ಜನರು ಹೋಗಲು ಬರಲು ಪರದಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಸಾರ್ವಜನಿಕರ ಇದೊಂದು ದೊಡ್ಡ ಸಮಸ್ಯೆಯಾಗಿತ್ತು ಸಧ್ಯ ಈ ಒಂದು ಸಮಸ್ಯೆಯನ್ನು ಅರಿತುಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ಒಂದು ಸಮಸ್ಯೆಗೆ ಶಾಶ್ವತ ಮುಕ್ತಿಯನ್ನು ನೀಡುವ ಉದ್ದೇಶದಿಂದ ಕಾಮಗಾರಿಯೊಂದನ್ನು ಆರಂಭ ಮಾಡಿದ್ದಾರೆ.
ಸಧ್ಯ ವಿಶೇಷವಾಗಿ ಹತ್ತಾರು ಪ್ಲಾನ್ ನೊಂದಿಗೆ ಸುಂದರವಾಗಿ ವರ್ತಲು ರಸ್ತೆ ರಿಂಗ್ ರಸ್ತೆ ಸೇರಿ ದಂತೆ ಬೇರೆ ಬೇರೆ ಯೋಜನೆಗಳೊಂದಿಗೆ ಕೆಲಸ ನಡೆಯುತ್ತಿದ್ದು ಇದನ್ನು ಕೇಂದ್ರ ಸಚಿವರ ಅಪರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜನ ಪಾಟೀಲ ಅವರು ವೀಕ್ಷಣೆ ಮಾಡಿದರು.
ಕಚೇರಿಯಲ್ಲಿ ಕುಳಿತುಕೊಂಡು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸದೇ ಸಚಿವರು ಇರದಿದ್ದ ರೂ ಕೂಡಾ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೇ ಆಗಮಿಸಿ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಣೆ ಮಾಡಿ ಪರಿಶೀಲನೆ ಮಾಡಿದರು.ಇದೇ ವೇಳೆ ಕಾಮಗಾರಿ ವಿಚಾರ ಕುರಿತಂತೆ ಅಧಿಕಾರಿಗ ಳೊಂದಿಗೆ ಚರ್ಚೆಯನ್ನು ಮಾಡಿದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..