ACB ಬಲೆಗೆ ಬಿದ್ದ BEO ಕಚೇರಿಯ ಮ್ಯಾನೇಜರ್ – ಶಿಕ್ಷಕರ ವರ್ಗಾವಣೆಗೆ ಹಣದ ಬೇಡಿಕೆ ಇಟ್ಟಿದ್ದವನಿಗೆ ಜೈಲು ತೋರಿಸಿದ ಶಿಕ್ಷಕ…..

Suddi Sante Desk

ಶಿಗ್ಗಾವಿ –

ಶಿಕ್ಷಕರ ವರ್ಗಾವಣೆಗೆ ಶಿಕ್ಷಕರೊಬ್ಬರಿಂದಲೇ ಹಣದ ಬೇಡಿಕೆಯನ್ನಿಟ್ಟ ಬಿಇಒ ಕಚೇರಿಯ ಮ್ಯಾನೇಜರ್ ರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಹಾವೇರಿ ಯಲ್ಲಿ ನಡೆದಿದೆ.ಜಿಲ್ಲೆಯ ಶಿಗ್ಗಾವಿ ಪಟ್ಟಣದ ಬಿಇಒ ಕಚೇರಿ ಮ್ಯಾನೇಜರ್ ಸುರೇಶ ಗಿರೇಪ್ಪ ರೊಡ್ಡಣ್ಣ ವರ ಎಸಿಬಿ ಬಲೆಗೆ ಬಿದ್ದ ಮ್ಯಾನೇಜರ್ ಆಗಿದ್ದಾರೆ.

ಇನ್ನೂ ವರ್ಗಾವಣೆಗೆಂದು ಶಿಕ್ಷಕರೊಬ್ಬರಿಂದ ನಾಲ್ಕು ಸಾವಿರ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.ಈ ಕುರಿತಂತೆ ಶಿಕ್ಷಕ ಹನುಮಂತಪ್ಪ ಹಳ್ಳೆಪ್ಪನವರ ಎಸಿಬಿ ಗೆ ದೂರನ್ನು ನೀಡಿದ್ದರು. ಈಗಾಗಲೇ ಮುಂಚಿತವಾಗಿ ಒಂದು ಸಾವಿರ ರೂಪಾಯಿ ಹಣವನ್ನು ಶಿಕ್ಷಕರಿಂದ ಪಡೆದು ಇಂದು ಇನ್ನೂಳಿದ 3 ಸಾವಿರ ರೂಪಾಯಿ ಪಡೆಯುತ್ತಿರುವ ಸಂದರ್ಭದಲ್ಲಿ ದಾವಣಗೆರೆ ಭ್ರಷ್ಟಾಚಾರ ನಿಗ್ರಹ ದಳ ತಂಡಕ್ಕೆ ಇಂದು ಸಿಕ್ಕಿಬಿದ್ದಿದ್ದಾರೆ.ಪಟ್ಟಣದ ಗಾಂಧಿನಗರದ ಶಾಲೆ ಶಿಕ್ಷಕ ಹನುಮಂತಪ್ಪ ಭರಮಪ್ಪ ಹಳ್ಳೆಪ್ಪನವರ ಅವರ ವರ್ಗಾವಣೆ ಮಾಡಲು ರೂಪಾಯಿ 4 ಸಾವಿರ ಬೇಡಿಕೆ ಇಟ್ಟಿದ್ದರು.

ಮುಂಗಡವಾಗಿ 1 ಸಾವಿರ ಮೊದಲೇ ಪಡೆದಿದ್ದು, ಉಳಿದ 3 ಸಾವಿರ ರೂಪಾಯಿ ಹಣವನ್ನು ಲಂಚ ಪಡೆಯುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾವಣಗೆರೆ ವಲಯದ ಎಸಿಬಿ ಎಸ್ಪಿ ಜಯಪ್ರಕಾಶ ನೇತೃತ್ವದಲ್ಲಿ ಡಿವೈಎಸ್ಪಿ ಮಹಾಂತೇಶ ಜಿದ್ದಿ.ಇನ್ಸ್ಪೆಕ್ಟರ್ ಗಳಾದ ಎಸ್.ಕೆ. ಪಟ್ಟಣಕೂಡಿ,ಪ್ರಭಾವತಿ ಶೇಖವಡಿ, ಸಿಬ್ಬಂದಿ ಗಳಾದ ಬಿ.ಎಸ್.ಕರಡಣ್ಣವರ,ಕಡಕೊಳ, ಅಗಸಿಕೆರಿ ವೆಂಕಟೇಶ ಹುಲಿಹಳ್ಳಿ, ಮಂಜುನಾಥ, ಮೂಲಿಮನಿ ಕಾಂಬಳೆ, ಬಸಪ್ಪ ಕಾರ್ಯಾಚರಣೆಯಲ್ಲಿ ಇದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.