ಗೆಲುವು ಸಾಧಿಸಿದ ಮಂಗಳಮುಖಿ – 26 ವರುಷಗಳ ನಂತರ ಚುನಾವಣೆ – ಅಖಾಡದಲ್ಲಿ ಗೆಲುವಿನ ನಗೆ ಬೀರಿದ ಮಂಗಳಮುಖಿ

Suddi Sante Desk

ಬಳ್ಳಾರಿ –

ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯತ ಅಖಾಡಲ್ಲಿ ಮಂಗಳ ಮುಖಿಯರೊಬ್ಬರು ಗೆಲುವು ಸಾಧಿಸಿದ್ದಾರೆ.ಹೌದು ಸುಧಾ ಎಂಬ ಮಂಗಳ ಮುಖಿಯರೊಬ್ಬರು ಗೆಲುವು ಸಾಧಿಸಿದ್ದಾರೆ. ಇಂದು ನಡೆದ ಮತ ಏಣಿಕೆಯಲ್ಲಿ ಸುಧಾ ಗೆಲುವು ಸಾಧಿಸಿದ ಮಂಗಳ ಮುಖಿಯಾಗಿದ್ದಾರೆ.

ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯತಿಯ ರಾಜಾಪುರದ ಮತ ಕ್ಷೇತ್ರದಿಂದ ಇವರು ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದಾರೆ. ಗ್ರಾಪಂ ಸ್ಥಾಪನೆಯಾಗಿ ಕಳೆದ 26 ವರ್ಷಗಳ ನಂತರ ನಡೆದ ಗ್ರಾಪಂ ಚುನಾವಣೆಯಲ್ಲಿ ಇವರು ಗೆಲುವು ಸಾಧಿಸಿದ್ದಾರೆ.

ಕಳೆದ 26 ವರ್ಷಗಳಿಂದ ಇಲ್ಲಿ ಅವಿರೋಧ ಆಯ್ಕೆ ನಡೆದಿತ್ತು ಇದೇ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಈ ಮೂಲಕ ಆಯ್ಕೆಯಾಗಿದ್ದಾರೆ ಅಭ್ಯರ್ಥಿ ಅದರಲ್ಲೂ ಮಂಗಳಮುಖಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ವಿಶೇಷವಾಗಿದೆ. ಇನ್ನೂ ಗೆಲುವು ಸಾಧಿಸುತ್ತಿದ್ದಂತೆ ಗ್ರಾಮದ ಯುವಕರು ಮುಖಂಡರು ಸೇರಿದಂತೆ ಹಲವರು ಸುಧಾ ಅವರಿಗೆ ಅಭಿನಂದನೆಗಳನ್ನು ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.